Skip to main content

Posts

Showing posts from April, 2020

೪.೧. ಸಾಧಾರಣ (ಸಾಮಾನ್ಯ) ಧರ್ಮ— ಪೀಠಿಕೆ

೪-೧. ಸಾಧಾರಣ(ಸಾಮಾನ್ಯ)ಧರ್ಮ— ಪೀಠಿಕೆ ಯಾವುದೇ ಕಾಲ-ದೇಶ-ಪಾತ್ರಾದಿ ಭೇದರಹಿತವಾಗಿ ಮಾನವನಾದವನು ಸಾರ್ಥಕ ಬದುಕಿಗಾಗಿ ಅನುಸರಿಸಬೇಕಾದ ಜೀವನಮೌಲ್ಯಗಳೇ ಈ "ಸಾಮಾನ್ಯ (ಸಾಧಾರಣ) ಧರ್ಮ ". ಇವನ್ನು ಬಿಟ್ಟು ಹಲವಾರು ಆಚಾರ-ವಿಚಾರಗಳು ಆಯಾ ದೇಶ-ಕಾಲ-ವರ್ಣಾದಿಗಳಿಗೆ ಮಾತ್ರ ಸಂಬಂಧಿಸಿದ ವಿಶಿಷ್ಟಧರ್ಮವಾಗಿರುತ್ತವೆ.  ಈಗ ಮೊದಲಿಗೆ ನಾವು ಎಲ್ಲರ ಉದ್ಧಾರಕ್ಕಾಗಿ ಅತ್ಯವಶ್ಯವಾದ ಸಾಮಾನ್ಯಧರ್ಮವನ್ನು ಸಾಮೂಹಿಕವಾಗಿ ನೋಡಿ, ಬಳಿಕ ಮುಂದಿನ ಭಾಗದಲ್ಲಿ ಅವುಗಳಲ್ಲಿ ಒಂದೊಂದರ ಸೂಕ್ಷ್ಮಗಳನ್ನೂ ಸವಿಸ್ತಾರವಾಗಿ ಚರ್ಚಿಸೋಣ. ೧) ಧಾರಣಾತ್ ಧರ್ಮ ಇತ್ಯಾಹುಃ  ಧರ್ಮೋ ಧಾರಯತಿ ಪ್ರಜಾಃ  | ಯತ್ ಸ್ಯಾದ್ಧಾರಣಸಂಯುಕ್ತಂ ಸ ಧರ್ಮ ಇತಿ ನಿಶ್ಚಯಃ || (ಮಹಾಭಾರತ ಕರ್ಣಪರ್ವ ೪೯.೫೦) (ಎಲ್ಲವನ್ನೂ, ಎಲ್ಲರನ್ನೂ, ಸಮಸ್ತಸೃಷ್ಟಿ ಹಾಗೂ ಸೃಷ್ಟಿಪ್ರಕ್ರಿಯೆಯನ್ನೂ ತನ್ನಲ್ಲೇ) ಧಾರಣೆ ಮಾಡಿಕೊಳ್ಳುವ (ಧರಿಸಿಕೊಳ್ಳುವ, ಆಧರಿಸುವ) ಸ್ವ-ಭಾವಕ್ಕಾಗಿ "ಧರ್ಮ " ಎಂಬ ಹೆಸರಿನಿಂದ ಆ ಗುಣವನ್ನು ಕರೆಯುತ್ತಾರೆ. ಹಾಗಾಗಿ, ಅಂತಹ ವಿಶ್ವ-ಮಾನವ-ಧರ್ಮ / ಸೃಷ್ಟಿಧರ್ಮ / ಪ್ರಕೃತಿಧರ್ಮ / ಕಾಲಧರ್ಮ / ಮಾನವೀಯಧರ್ಮವು ಸೃಷ್ಟಿಸಾಮ್ರಾಜ್ಯದ ಸಮಸ್ತ ಪ್ರಜೆಗಳನ್ನೂ ತಾನೇ ಧರಿಸಿಕೊಂಡು ಆಧರಿಸಿದೆ; ಸು-ಸ್ಥಿತಿಗೆ ಕಾರಣವಾಗಿದೆ. ಹೀಗೆ, ಧಾರಣಾಗುಣದಿಂದ ಯುಕ್ತವಾದದ್ದೇ ಧರ್ಮವೆಂಬುದು ನಿಶ್ಚಯವಾದಂತಾಯಿತು.  "ಧರತಿ ಲೋಕಾನ್ ಧ್ರಿಯತ...

೩. ಧರ್ಮಶಾಸ್ತ್ರದ ವಿವಿಧ ವಿಷಯಗಳು

೩. ಧರ್ಮಶಾಸ್ತ್ರದ ವಿವಿಧ ವಿಷಯಗಳು ಪ್ರಾಚೀನ ಭಾರತೀಯ ಧರ್ಮಸೂತ್ರಗಳು ಪ್ರಧಾನವಾಗಿ ಈ ಮುಂದಿನ ವಿಷಯಗಳನ್ನು ಸ್ವಲ್ಪ ಹೆಚ್ಚು ಕಡಿಮೆ ವಿವರವಾಗಿ ವರ್ಣಿಸುತ್ತವೆ. ವಿವಿಧ ವರ್ಣಗಳು (ವರ್ಗಗಳು), ಆಶ್ರಮಗಳು, ಅವುಗಳ ಹಕ್ಕುಗಳು, ಕರ್ತವ್ಯಗಳು ಮತ್ತು ಜವಾಬ್ದಾರಿಗಳು; (ಗರ್ಭಾಧಾನದಿಂದ ಅಂತ್ಯೇಷ್ಟಿಯ ವರೆಗೆ) ವ್ಯಕ್ತಿಯೊಬ್ಬನಿಗೆ ಮಾಡುವ ಸಂಸ್ಕಾರಗಳು; ಬ್ರಹ್ಮಚಾರಿಯ (ಪ್ರಥಮಾಶ್ರಮಿಯ) ಕರ್ತವ್ಯಗಳು, ಅನಧ್ಯಯನಗಳು (ವೇದಾಧ್ಯಯನವನ್ನು ನಿಲ್ಲಿಸುವ / ಮಾಡಬಾರದ ದಿನಗಳು); (ಜೀವನದ ಮೊದಲ ಹಂತವಾದ ಬ್ರಹ್ಮಚರ್ಯಾಶ್ರಮದ ವಿದ್ಯಾರ್ಥಿದೆಸೆಯನ್ನು ಮುಗಿಸಿದ) ಸ್ನಾತಕನ ಕರ್ತವ್ಯಗಳು; ವಿವಾಹ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳು; ಗೃಹಸ್ಥ (ವಿವಾಹಿತ) ನ ಕರ್ತವ್ಯಗಳು; ಶೌಚ (ದೇಹದ ದೈನಂದಿನ ಶುದ್ಧಿ); ಪ್ರತಿದಿನದ ಪಂಚಯಜ್ಞಗಳು; ದಾನ; ಭಕ್ಷ್ಯಾಭಕ್ಷ್ಯ (ಯಾವ ಆಹಾರವನ್ನು ಸೇವಿಸಬೇಕು; ಯಾವುದನ್ನು ಕೂಡದು);  (ವ್ಯಕ್ತಿಗಳ, ಪಾತ್ರೆಗಳ, ಬಟ್ಟೆಗಳ ಮುಂತಾದವುಗಳ) ಶುದ್ಧಿ; ಅಶೌಚ (ಹುಟ್ಟು-ಸಾವುಗಳಿಂದ ಬರುವ ಮೈಲಿಗೆ); ಅಂತ್ಯೇಷ್ಟಿ (ಸತ್ತ ನಂತರ ಮಾಡುವ ಕರ್ಮಗಳು); ಶ್ರಾದ್ಧ (ಸತ್ತ ಪೂರ್ವಜರು ಮತ್ತು ಬಂಧುಗಳಿಗಾಗಿ ಮಾಡುವ ಕರ್ಮಗಳು); ಸ್ತ್ರೀಧರ್ಮ (ಹೆಂಗಸರ ವಿಶೇಷ ಕರ್ತವ್ಯಗಳು); ಸ್ತ್ರೀ-ಪುಂ-ಧರ್ಮ (ಸತಿ-ಪತಿಯರ ಪರಸ್ಪರ ಕರ್ತವ್ಯಗಳು); ಕ್ಷತ್ರಿಯರ ಮತ್ತು ರಾಜರ ಧರ್...

೨. ಧರ್ಮದ ಮೂಲ ಆಕರಗಳು

೨. ಧರ್ಮದ ಮೂಲ ಆಕರಗಳು वेदो धर्ममूलम् । तद्विदां च स्मृतिशीले ॥ (गौतमधर्मसूत्राणि १.१.२) ವೇದವೇ ಧರ್ಮದ ಮೂಲ; ಅದನ್ನು ತಿಳಿದವರ ಸಂಪ್ರದಾಯ ಮತ್ತು ಆಚಾರಗಳೂ ಧರ್ಮದ ಮೂಲವೇ ಎಂದಿದೆ ಗೌತಮಧರ್ಮಸೂತ್ರ (೧.೧.೨).  धर्मज्ञसमयः प्रमाणं वेदाश्च ॥ (आपस्तम्बधर्मसूत्राणि १.१.१.२) ಆಪಸ್ತಂಬಧರ್ಮಸೂತ್ರಗಳಲ್ಲಿ (೧.೧.೧.೨) "ಧರ್ಮಕ್ಕೆ ಪ್ರಮಾಣವೆಂದರೆ ಧರ್ಮವನ್ನೂ ವೇದವನ್ನೂ ತಿಳಿದವರ ಏಕಾಭಿಪ್ರಾಯ" ಎನ್ನಲಾಗಿದೆ. श्रुतिस्मृतिविहितो धर्मः । तदलाभे शिष्टाचारः प्रमाणम् । शिष्टः पुनरकामात्मा ॥ (वसिष्ठधर्मसूत्रम् १.४.६) ವಸಿಷ್ಠಧರ್ಮಸೂತ್ರ ೧.೪.೬ ರಲ್ಲಿ, "ವೇದೋಪನಿಷತ್ತುಗಳು (ಶ್ರುತಿಗಳು), ಸ್ಮೃತಿಗಳು ಹಾಗೂ ಧರ್ಮಸೂತ್ರಾದಿ ವೇದಾಂಗಕಲ್ಪಸೂತ್ರಗಳಂತಹ ಧರ್ಮಶಾಸ್ತ್ರಗಳಲ್ಲಿ ಹೇಳಿರುವುದೇ ಧರ್ಮವು. ಅದಿಲ್ಲದಿದ್ದರೆ / ಅದನ್ನು ಬಿಟ್ಟರೆ ಶಿಷ್ಟರು (ಸಾಧು-ಸಂತ-ಮಹಾಂತ-ಜ್ಞಾನಿ-ಮನೀಷಿಗಳು) ಆಚರಿಸಿ ತೋರುವ ಶಿಷ್ಟಾಚಾರವೇ ಪ್ರಮಾಣವು. ಮತ್ತೆ , ಶಿಷ್ಟನೆಂದರೆ ಅಕಾಮಾತ್ಮನು, ಯಾವುದೇ ಬಯಕೆಗಳಿಲ್ಲದ ಪೂರ್ಣಕಾಮನು, ಆಪ್ತಕಾಮನು. वेदोऽखिलो धर्ममूलं स्मृतिशीले च तद्विदाम् ।  आचारश्चैव साधूनामात्मनस्तुष्टिरेव च ॥ (मनुस्मृतिः २.६) ಇಡೀ ವೇದವು ಧರ್ಮಕ್ಕೆ ಬಲು ಮುಖ್ಯವಾದ ಆಕರ. ಅನಂತರ ಅದನ್ನು ತಿಳಿದವರ ಸಂಪ್ರದಾಯ; ಶೀ...