🌺🌺 *मनुस्मृति:* 🌺🌺 _*प्रथमोऽध्याय:*_ *मनुमेकाग्रमासीनमभिगम्य महर्षय:।* *प्रतिपूज्य यथान्यायमिदं वचनमब्रुवन्॥१॥* _ಏಕಾಗ್ರಚಿತ್ತನಾಗಿ (ಧ್ಯಾನನಿರತನಾಗಿ) ಆಸೀನನಾಗಿದ್ದ ಮನುಮಹರ್ಷಿಯನ್ನು ಜಿಜ್ಞಾಸುಗಳಾದ ಮಹರ್ಷಿಗಳು ಯಥೋಚಿತವಾಗಿ ಸತ್ಕರಿಸಿ,ಪೂಜಿಸಿ, ಈ ಮುಂದಿನ ಮಾತನ್ನು ನುಡಿದರು._ 🌴🌴🌴🌴🌴🌴🌴🌴🌴🌴🌴🌴🌴🌴🌴🌴🌴🌴🌴 🌴🌴 *मनुस्मृति:* 🌴🌴 *भगवन्सर्ववर्णानां यथावदनुपूर्वश:।* *अन्तरप्रभवानाञ्च धर्मान्नो वक्तुमर्हसि॥२॥* _ಹೇ ಭಗವನ್! ಸರ್ವವರ್ಣ(ಬ್ರಾಹ್ಮ,ಕ್ಷಾತ್ರ,ವೈಶ್ಯ,ಶೂದ್ರ)ಗಳ ಧರ್ಮಾಚರಣೆಗಳನ್ನೂ, ಅವುಗಳ ಅಂತರ(ಭೇದ/ವ್ಯತ್ಯಾಸ)ವನ್ನೂ ಸಮಗ್ರವಾಗಿಯೂ ಯಥಾವತ್ತಾಗಿಯೂ ನಮಗೆ ಹೇಳಲು ತಾವು ಸಮರ್ಥರಾಗಿದ್ದೀರಿ._ 🌼🌼🌼🌼🌼🌼🌼🌼🌼🌼🌼🌼🌼🌼🌼🌼🌼🌼🌼 🌺🌺 *मनुस्मृति:* 🌺🌺 *त्वमेकोऽह्यस्य सर्वस्य विधानस्य स्वयंभुव:।* *अचिन्त्यस्याप्रमेयस्य कार्यं तत्त्वार्थवित्प्रभो॥३॥* _ಹೇ ಪ್ರಭೋ! ಚಿಂತನೆಗೆ ನಿಲುಕದವನೂ, ಪ್ರಮೇಯ-ಸಿದ್ಧಾಂತಾದಿಗಳಿಗೆ ಕಟ್ಟುಬೀಳದವನೂ ಆದ ಸ್ವಯಂಭೂ(ಸ್ವತ: ತನ್ನನ್ನು ತಾನೇ ಹುಟ್ಟಿಸಿಕೊಳ್ಳುವವ) ಪರಮಾತ್ಮನ ಈ ಲೋಕಸೃಷ್ಟ್ಯಾದಿ ಸಮಸ್ತಕಾರ್ಯಗಳ ವಿಧಿ-ವಿಧಾನಾದಿಗಳ ಹಿಂದಿರುವ ಮೂಲತತ್ತ್ವ-ಸತ್ತ್ವ(ಸಾರ)ಗಳ ಅರ್ಥವನ್ನರಿತಿರುವವನು ನೀನೊಬ್ಬನೇ ಅಲ್ಲವೇ?_ 🍀🍀🍀🍀🍀🍀🍀🍀🍀🍀🍀🍀🍀🍀🍀🍀🍀🍀🍀...