೪.೩. ಋತ
ಋತಸ್ಯ ಧೀತಿರ್ವೃಜಿನಾನಿ ಹಂತಿ |
(ಋಕ್ಸಂಹಿತೆ ೪ | ೨೩.೮)
ಋತದ ಧ್ಯಾನವು ಪಾಪಗಳನ್ನು ಹೋಗಲಾಡಿಸುತ್ತದೆ.
ಶಾಂತ್ಯಾ ಋತಸ್ಯ ಪಥಾ ಪ್ರೇತ |
(ಕೃಷ್ಣಯಜುಸ್ಸಂಹಿತೆ ೬ | ೬.೧.೩)
ಶಾಂತಿಯಿಂದ (ಮನೋನಿಗ್ರಹದಿಂದ, ಮನಃಪ್ರಶಮನದಿಂದ, ಶಮದಿಂದ) ಋತದ ದಾರಿಯಲ್ಲಿ ತೆರಳಿರಿ.
ಋತೇ ಸಮುದ್ರ ಅಹಿತಃ | ಋತೇ ಭೂರಿಯಂ ಶ್ರಿತಾ |
(ತೈತ್ತಿರೀಯಬ್ರಾಹ್ಮಣ ೧.೫.೫)
ಋತದಲ್ಲಿ ಸಮುದ್ರ ನೆಲೆಸಿದೆ / ನಿಹಿತವಾಗಿದೆ / ಇಡಲ್ಪಟ್ಟಿದೆ. ಋತದಲ್ಲಿ ಭೂಮಿಯಿದು ಆಶ್ರಿತವಾಗಿದೆ.
ಋತಂ ಪ್ರಪದ್ಯೇ |
(ತೈತ್ತಿರೀಯಬ್ರಾಹ್ಮಣ ೩.೫.೧)
ಋತಕ್ಕೆ (ವಿಶ್ವನಿಯಮಕ್ಕೆ, ಕಾಲಗತಿಗೆ, ಪ್ರಕೃತಿರಹಸ್ಯಕ್ಕೆ, ಸೃಷ್ಟಿನಿಯತಿಗೆ) ಶರಣಾಗುವೆ.
Comments
Post a Comment