🌺🌺 *मनुस्मृति:* 🌺🌺
_*प्रथमोऽध्याय:*_
*मनुमेकाग्रमासीनमभिगम्य महर्षय:।*
*प्रतिपूज्य यथान्यायमिदं वचनमब्रुवन्॥१॥*
_ಏಕಾಗ್ರಚಿತ್ತನಾಗಿ (ಧ್ಯಾನನಿರತನಾಗಿ) ಆಸೀನನಾಗಿದ್ದ ಮನುಮಹರ್ಷಿಯನ್ನು ಜಿಜ್ಞಾಸುಗಳಾದ ಮಹರ್ಷಿಗಳು ಯಥೋಚಿತವಾಗಿ ಸತ್ಕರಿಸಿ,ಪೂಜಿಸಿ, ಈ ಮುಂದಿನ ಮಾತನ್ನು ನುಡಿದರು._
🌴🌴🌴🌴🌴🌴🌴🌴🌴🌴🌴🌴🌴🌴🌴🌴🌴🌴🌴
🌴🌴 *मनुस्मृति:* 🌴🌴
*भगवन्सर्ववर्णानां यथावदनुपूर्वश:।*
*अन्तरप्रभवानाञ्च धर्मान्नो वक्तुमर्हसि॥२॥*
_ಹೇ ಭಗವನ್! ಸರ್ವವರ್ಣ(ಬ್ರಾಹ್ಮ,ಕ್ಷಾತ್ರ,ವೈಶ್ಯ,ಶೂದ್ರ)ಗಳ ಧರ್ಮಾಚರಣೆಗಳನ್ನೂ, ಅವುಗಳ ಅಂತರ(ಭೇದ/ವ್ಯತ್ಯಾಸ)ವನ್ನೂ ಸಮಗ್ರವಾಗಿಯೂ ಯಥಾವತ್ತಾಗಿಯೂ ನಮಗೆ ಹೇಳಲು ತಾವು ಸಮರ್ಥರಾಗಿದ್ದೀರಿ._
🌼🌼🌼🌼🌼🌼🌼🌼🌼🌼🌼🌼🌼🌼🌼🌼🌼🌼🌼
🌺🌺 *मनुस्मृति:* 🌺🌺
*त्वमेकोऽह्यस्य सर्वस्य विधानस्य स्वयंभुव:।*
*अचिन्त्यस्याप्रमेयस्य कार्यं तत्त्वार्थवित्प्रभो॥३॥*
_ಹೇ ಪ್ರಭೋ! ಚಿಂತನೆಗೆ ನಿಲುಕದವನೂ, ಪ್ರಮೇಯ-ಸಿದ್ಧಾಂತಾದಿಗಳಿಗೆ ಕಟ್ಟುಬೀಳದವನೂ ಆದ ಸ್ವಯಂಭೂ(ಸ್ವತ: ತನ್ನನ್ನು ತಾನೇ ಹುಟ್ಟಿಸಿಕೊಳ್ಳುವವ) ಪರಮಾತ್ಮನ ಈ ಲೋಕಸೃಷ್ಟ್ಯಾದಿ ಸಮಸ್ತಕಾರ್ಯಗಳ ವಿಧಿ-ವಿಧಾನಾದಿಗಳ ಹಿಂದಿರುವ ಮೂಲತತ್ತ್ವ-ಸತ್ತ್ವ(ಸಾರ)ಗಳ ಅರ್ಥವನ್ನರಿತಿರುವವನು ನೀನೊಬ್ಬನೇ ಅಲ್ಲವೇ?_
🍀🍀🍀🍀🍀🍀🍀🍀🍀🍀🍀🍀🍀🍀🍀🍀🍀🍀🍀
🌸🌸 *मनुस्मृति:* 🌸🌸
*स तै: पृष्टस्तथा सम्यगमितौजा महात्मभि:।*
*प्रत्युवाचार्च्य तान्सर्वान्महर्षीन् श्रूयतामिति॥४॥*
_ಆ ಮಹಾತ್ಮರಿಂದ ಸೂಕ್ತವಾಗಿ ಪ್ರಶ್ನಿಸಲ್ಪಟ್ಟವನಾದ ಮಹೋಜಸನಾದ ಮನುವು, ಆ ಎಲ್ಲ ಮಹರ್ಷಿಗಳನ್ನು ಸತ್ಕರಿಸಿ, "ಕೇಳಿರಿ" ಎಂದು ಮಾರುತ್ತರಿಸಿದನು.
☘☘☘☘☘☘☘☘☘☘☘☘☘☘☘☘☘☘☘
🌸🌸 *मनुस्मृति:* 🌸🌸
*आसीदिदं तमोभूतमप्रज्ञातमलक्षणम्।*
*अप्रतर्क्यमविज्ञेयं प्रसुप्तमिव सर्वत:॥५॥*
_ಹಿಂದೆ, ಸೃಷ್ಟಿಗೂ ಪೂರ್ವದಲ್ಲಿ, ಈ ಇಡಿಯ ಜಗವೆಲ್ಲವೂ ಕಾರ್ಗತ್ತಲಿನಿಂದ ಕೂಡಿತ್ತು; ಯಾವ ಅರಿವೂ ಇರಲಿಲ್ಲ/ಅಜ್ಞಾನದ ತಮಸ್ಸಿನಲ್ಲಿ ಮುಳುಗಿತ್ತು; ಇದಕ್ಕೆ ಯಾವುದೇ ಗುಣಲಕ್ಷಣಗಳಿರಲಿಲ್ಲ. ಈಗಿರುವಂತೆ ನದಿ,ಬೆಟ್ಟ,ತೊರೆ,ಕೆರೆ,ಮರ,ಗಿಡ, ಪಶು, ಪಕ್ಷಿ - ಇಂತಹ ಯಾವ ವೈವಿಧ್ಯತೆಯೂ ಇರಲಿಲ್ಲ. ಈ ಸ್ಥಿತಿಯು ನಮ್ಮ ತರ್ಕ/ಊಹೆ/ಕಲ್ಪನೆಗೂ ನಿಲುಕದಂಥದ್ದು. ತಿಳಿದುಕೊಳ್ಳಲೂ ಅಸಾಧ್ಯವಾದುದು. ಎಲ್ಲೆಡೆಯಿಂದಲೂ ಸುಪ್ತವಾಗಿದ್ದಂತೆ, ಮಲಗಿ ನಿದ್ರಿಸಿದಂತೆ, ಚೈತನ್ಯರಹಿತವಾಗಿರುವಂತೆ ಇತ್ತು._
🍃🍃🍃🍃🍃🍃🍃🍃🍃🍃🍃🍃🍃🍃🍃🍃🍃🍃🍃
🌸🌸 *मनुस्मृति:* 🌸🌸
*तत: स्वयंभूर्भगवानव्यक्तं व्यञ्जयन्निदम्।*
*महाभूतादिवृत्तौजा: प्रादुरासीत्तमोनुद:॥६॥*
_ಅನಂತರ ಸ್ವಯಂಭೂವಾದ ಭಗವಂತನು (ನಿರಾಕಾರವಾದ)ಈ ಅವ್ಯಕ್ತತತ್ತ್ವವನ್ನು ಸಾಕಾರವನ್ನಾಗಿಸಿದಂತೆ, ಪಂಚಮಹಾಭೂತಗಳಾದ ಆಕಾಶ,ವಾಯು,ಅಗ್ನಿ,ಆಪ,ಪೃಥಿವೀ ಮುಂತಾದ ನಶ್ವರ, ಸಾಂತ ಶಕ್ತಿ/ದ್ರವ್ಯಗಳು ಗಾಢಾಂಧಕಾರವನ್ನು ದೂರಮಾಡುತ್ತಾ ಪ್ರಾದುರ್ಭವಿಸಿದವು._
🍃🍃🍃🍃🍃🍃🍃🍃🍃🍃🍃🍃🍃🍃🍃🍃🍃🍃🍃
🍀🍀 *मनुस्मृति:* 🍀🍀
*योऽसावतीन्द्रीयग्राह्य: सूक्ष्मोऽव्यक्त: सनातन:।*
*सर्वभूतमयोऽचिन्त्य: स एव स्वयमुद्बभौ॥७॥*
*ಪದವಿಭಾಗ:-*
_ಯ: ಅಸೌ ಅತೀಂದ್ರಿಯಗ್ರಾಹ್ಯ: ಸೂಕ್ಷ್ಮ: ಅವ್ಯಕ್ತ: ಸನಾತನ: ಸರ್ವಭೂತಮಯ: ಅಚಿಂತ್ಯ: ಸ: ಏವ ಸ್ವಯಮ್ ಉದ್ಬಭೌ ||_
*ತಾತ್ಪರ್ಯಮ್-*
_ಯಾವ ಈ ಇಂದ್ರಿಯಗ್ರಾಹ್ಯನಲ್ಲದ ಸೂಕ್ಷ್ಮನೂ, ವ್ಯಕ್ತವಾಗಿ ತೋರದಿರುವವನೂ, ಬಹು ಹಿಂದಿನವನೂ/ಶಾಶ್ವತನೂ, ಸರ್ವ ಚರಾಚರಗಳಲ್ಲೂ ಗೂಢನಾಗಿರುವವನೂ, ಚಿಂತನೆಗೆ ನಿಲುಕದವನೂ ಆದ ಪರಮಾತ್ಮನು ತಾನೇ ತಾನಾಗಿ ಉದ್ಭವಿಸಿದನು._
🌴🌴🌴🌴🌴🌴🌴🌴🌴🌴🌴🌴🌴🌴🌴🌴🌴🌴🌴
🌸🌸 *मनुस्मृति:* 🌸🌸
*सोऽभिध्याय शरीरात्स्वात्सिसृक्षुर्विविधा: प्रजा:।*
*अप एव ससर्जादौ तासु वीर्यमवासृजत्॥८॥*
_ಆ ಸ್ವಯಂಭೂ ಪರಮಾತ್ಮನು ತನ್ನ ಸಂಕಲ್ಪ/ಧ್ಯಾನದ ಮೂಲಕ ಸ್ವಶರೀರದಿಂದ ವಿವಿಧ ಪ್ರಜಾಸೃಷ್ಟಿಯನ್ನು ಮಾಡಿದನು. ಆದಿಯಲ್ಲಿ ಜಲವನ್ನು ಸೃಷ್ಟಿಸಿ, ಆ ಜಲರಾಶಿಯಲ್ಲಿ ತನ್ನ ವೀರ್ಯ(ವೀರಸ್ಯ ಭಾವ: ವೀರ್ಯಮ್ - ವೀರನ ಭಾವವೇ ವೀರ್ಯವು)ವನ್ನು ಪತನಗೊಳಿಸಿದನು._
🍃🍃🍃🍃🍃🍃🍃🍃🍃🍃🍃🍃🍃🍃🍃🍃🍃🍃🍃
🌸🌸 *मनुस्मृति:* 🌸🌸
*तदण्डमभवद्धैमं सहस्रांशुसमप्रभम्।*
*तस्मि़ञ्जज्ञे स्वयं ब्रह्मा सर्वलोकपितामह:॥९॥*
_ಆ ಸ್ವಯಂಭೂಪರಮಾತ್ಮವೀರ್ಯದಿಂದ ಜಲದಲ್ಲಿ ಹಿರಣ್ಯ(ಹೇಮಸ್ಯ ಭಾವ: ಹೈಮಮ್, ಚಿನ್ನದ ಬಣ್ಣದ)ವರ್ಣದ ಅಂಡವು ಉಂಟಾಯಿತು. ಅದು ಸಾವಿರಾರು ಕಿರಣಗಳ ಸಮನಾದ ಪ್ರಭೆಯಿಂದ ಕೂಡಿತ್ತು. ಅದರಲ್ಲೇ, ಸರ್ವಲೋಕಪಿತಾಮಹನೆನಿಸಿದ ಸೃಷ್ಟಿಕರ್ತನಾದ ಸ್ವಯಂ ಚತುರ್ಮುಖ ಬ್ರಹ್ಮನು ಜನಿಸಿದನು._
🌴🌴🌴🌴🌴🌴🌴🌴🌴🌴🌴🌴🌴🌴🌴🌴🌴🌴🌴
🌸🌸 *मनुस्मृति:* 🌸🌸
*आपो नारा इति प्रोक्ता आपो वै नरसूनव:।*
*ता यदस्यायनं पूर्वं तेन नारायण: स्मृत:॥१०॥*
_ಆಪಗಳು(ಜಲವು) *ನಾರಾ:* ಎಂದು ಹೇಳಲ್ಪಟ್ಟಿವೆ. ಆಪಗಳು(ನೀರು) ನರನ(ನೆಂಬ ಮಹರ್ಷಿಯ) ಸಂತಾನ/ಸೃಷ್ಟಿ. ಸೃಷ್ಟಿಯ ಆದಿಯಲ್ಲಿ ಇವನ(ಸ್ವಯಂಭೂ ಪರಮಾತ್ಮನ) ಮನೆ/ಆಶ್ರಯಸ್ಥಾನ/ *ಅಯನ* ನೀರೇ ಆಗಿತ್ತು. ಇದರಿಂದಾಗಿಯೇ *ನಾರಾಯಣ*ನೆಂದು ಕರೆಯಲ್ಪಟ್ಟನು. (ನಾರಾ: ಎಂದರೆ ಮೋಕ್ಷ, ಅಯನ -ಆಶ್ರಯಸ್ಥಾನ /ಪಥ. ಮೋಕ್ಷಕ್ಕೆ ದಾರಿ/ಪಥ ಇವನ ನಾಮಸ್ಮರಣೆ/ಶರಣಾಗತಿ. ಮೋಕ್ಷದ ಆಶ್ರಯಸ್ಥಾನ ಇವನೇ.)_
🌴🌴🌴🌴🌴🌴🌴🌴🌴🌴🌴🌴🌴🌴🌴🌴🌴🌴🌴
☘☘ *मनुस्मृति:* ☘☘
*यत्तत्कारणमव्यक्तं नित्यं सदसदात्मकम्।*
*तद्विसृष्ट: स पुरुषो लोके ब्रह्मेति कीर्त्यते॥११॥*
_ಯಾವ ಆ ಕಾರಣರೂಪನೂ, ಅವ್ಯಕ್ತನೂ(ಕಾಣಿಸದವನೂ/ವ್ಯಕ್ತನಾಗದವನೂ), ನಿತ್ಯನೂ, ಸತ್-ಅಸತ್ ಇವೆರಡರಿಂದಲೂ ಕೂಡಿರುವವನೂ ಆದ ಮೂಲಪರಬ್ರಹ್ಮನಿರುವನೋ, ಅವನಿಂದ ವಿಶೇಷವಾಗಿ ಸೃಷ್ಟನಾದ ಆ ಪುರುಷನು ಲೋಕದಲ್ಲಿ ಸೃಷ್ಟಿಕರ್ತನಾದ ಚತುರ್ಮುಖ ಬ್ರಹ್ಮಾ ಎಂಬ ಕೀರ್ತಿಪಡೆದನು._
🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸
🌸🌸 *मनुस्मृति:* 🌸🌸
*तस्मिन्नण्डे स भगवानुषित्वा परिवत्सरम्।*
*स्वयमेवात्मनो ध्यानात्तदण्डमकरोद्द्विधा॥१२॥*
_ಆ ಬಂಗಾರದ ಬಣ್ಣದ ತತ್ತಿಯಲ್ಲಿ ಆ ಭಗವಾನ್ ಸೃಷ್ಟಿಕರ್ತ ಬ್ರಹ್ಮನು ಪ್ರವೇಶಿಸಿ ೧ ವರ್ಷಗಳ ಕಾಲ ತಾನೇ ಸ್ವತ: ಆತ್ಮಧ್ಯಾನ/ತಪದಿಂದ ಆ ಅಂಡವನ್ನು ಎರಡಾಗಿ ವಿಭಾಗಿಸಿದನು._
🌴🌴🌴🌴🌴🌴🌴🌴🌴🌴🌴🌴🌴🌴🌴🌴🌴🌴🌴
🌺🌺 *मनुस्मृति:* 🌺🌺
*ताभ्यां स शकलाभ्यां च दिवं भूमिं च निर्ममे।*
*मध्ये व्योम दिशश्चाष्टावपां स्थानं च शाश्वतम्॥१३॥*
_ಆ ತತ್ತಿಯ ೨ ಅರ್ಧಭಾಗಗಳಿಂದ ಬ್ರಹ್ಮನು ದೇವಲೋಕವನ್ನೂ, ಭೂಲೋಕವನ್ನೂ, ಇವುಗಳ ನಡುವೆ ವ್ಯೋಮ/ಅಂತರಿಕ್ಷವನ್ನೂ, ಅಷ್ಟದಿಕ್ಕುಗಳನ್ನೂ, ಶಾಶ್ವತವಾದ ಜಲರಾಶಿಯಾದ ಸಾಗರವನ್ನೂ ಅವನು ನಿರ್ಮಿಸಿದನು._
🍀🍀🍀🍀🍀🍀🍀🍀🍀🍀🍀🍀🍀🍀🍀🍀🍀🍀🍀
🌸🌸 *मनुस्मृति:* 🌸🌸
*उद्बबर्हात्मनश्चैव मन: सदसदात्मकम्।*
*मनसश्चाप्यहङ्कारमभिमन्तारमीश्वरम्॥१४॥*
_उद्बबर्ह आत्मन: च एव मन: सत् असत् आत्मकम् । मनस: च अपि अहङ्कारम् अभिमन्तारम् ईश्वरम्॥_
_ತನ್ನಿಂದಲೇ ಸತ್(ಇರುವಿಕೆ,ನೈಜತೆ) ಹಾಗೂ ಅಸತ್(ಮಿಥ್ಯತ್ವ,ನಶ್ವರ) ಗಳಿಂದ ಕೂಡಿದ ಮನಸ್ಸನ್ನು ಹೊರತಂದನು. ಆ ಮನಸ್ಸಿನಿಂದ ಪರಮೇಶ್ವರನ ಪ್ರಜ್ಞೆಯುಳ್ಳ , ತಿಳುವಳಿಕೆಯುಳ್ಳ ಅಹಂಕಾರವನ್ನೂ ಸೃಜಿಸಿದನು._
🌴🌴🌴🌴🌴🌴🌴🌴🌴🌴🌴🌴🌴🌴🌴🌴🌴🌴🌴
🍀🌺🌺🍀 *मनुस्मृति:* 🍀🌺🌺🍀
*महान्तमेव चात्मानं सर्वाणि त्रिगुणानि च।*
*विषयाणां गृहीतॄणि शनै: पञ्चेन्द्रियाणि च॥१५॥*
_ಬಹುಮಹತ್ತ್ವಯುತವಾದ ಆತ್ಮವನ್ನೂ, ಎಲ್ಲಾ ಮೂರೂ ಗುಣಗಳನ್ನೂ(ಸತ್ತ್ವ,ರಜ,ತಮ), ಶಬ್ದ-ಸ್ಪರ್ಶ-ರೂಪ-ರಸ-ಗಂಧಗಳೆಂಬ ಪಂಚವಿಷಯತನ್ಮಾತ್ರೆಗಳನ್ನು (ಅನುಕ್ರಮವಾಗಿ)ಕಿವಿ,ಚರ್ಮ,ನೇತ್ರ,ಜಿಹ್ವೆ,ನಾಸಿಕಗಳ ಮೂಲಕ ಗ್ರಹಿಸಬಲ್ಲ ತತ್ತದ್ದೇವತಾ(ಆಯಾ ದೇವತೆಗಳ)ಶಕ್ತಿಯುಕ್ತವಾದ ೫ ಜ್ಞಾನೇಂದ್ರಿಯಗಳನ್ನೂ ವಿಧಾತ(ಬ್ರಹ್ಮ)ನು ಹಂತ ಹಂತವಾಗಿ ಒಂದೊಂದಾಗಿ ಸೃಷ್ಟಿಸಿದನು._
🌴🌴🌴🌴🌴🌴🌴🌴🌴🌴🌴🌴🌴🌴🌴🌴🌴🌴🌴
🌺🌺🌺🌺 *मनुस्मृति:* 🌺🌺🌺🌺
*तेषां त्ववयवान्सूक्ष्मान् षण्णामप्यमितौजसाम्।*
*संनिवेश्यात्ममात्रासु सर्वभूतानि निर्ममे॥१६॥*
_ಆ ೬ ಅಮಿತವಾದ ಓಜಸ್ಸುಳ್ಳ ಅತಿಸೂಕ್ಷ್ಮಸಂವೇದಿಗಳಾದ ಕಣ್ಣು,ಕಿವಿ,ಮೂಗು,ನಾಲಿಗೆ,ಚರ್ಮ(ಪಂಚ ಜ್ಞಾನೇಂದ್ರಿಯಗಳು) ಹಾಗೂ ಮನಸ್ಸು - ಇವುಗಳನ್ನು ಈಗಾಗಲೇ ಸೃಜಿಸಿದ ಆತ್ಮಗಳೆಂಬ ಕೇವಲವಸ್ತುಶಕ್ತಿಗಳಲ್ಲಿ (ಕೇವಲಸ್ಯ ಭಾವ: ಕೈವಲ್ಯಮ್) ಸಂಯೋಜಿಸಿ, ಎಲ್ಲ ಚರಾಚರಗಳನ್ನು ಬ್ರಹ್ಮನು ವಿರಚಿಸಿದನು._
🍃🍁🍂🍃🍁🍂🍃🍁🍂🍃🍁🍂🍃🍁🍂🍃🍁🍂🍃
🌸🌸🌸 *मनुस्मृति:*🌸🌸🌸
*यन्मूर्त्यवयवा: सूक्ष्मास्तानीमान्याश्रयन्ति षट्।*
*तस्माच्छरीरमित्याहुस्तस्य मूर्तिं मनीषिण:॥१-१७॥*
_ಆ ಬ್ರಹ್ಮನಿರ್ಮಿತ ಪ್ರಾಣಿ(ಪ್ರಾಣ: ಅಸ್ಯ ಅಸ್ತಿ ಇತಿ ಪ್ರಾಣಿ:- ಪ್ರಾಣವಿದೆ ಇದಕ್ಕೆ ಎಂಬುದರಿಂದಾಗಿ ಪ್ರಾಣಿಯು)ದೇಹವು ಈ ಪಂಚ ಜ್ಞಾನೇಂದ್ರಿಯಗಳು/ಪಂಚಭೂತಗಳು ಹಾಗೂ ಮನಸ್ಸೆಂಬ ೬ ಅಂಶಗಳನ್ನು *ಆಶ್ರ*ಯಿಸಿರುವುದರಿಂದ ಜ್ಞಾನಿಗಳು ಇದನ್ನು *ಶರೀರ*ವೆಂದು ಹೇಳುವರು._
🌴🌴🌴🌴🌴🌴🌴🌴🌴🌴🌴🌴🌴🌴🌴🌴🌴🌴🌴
तदाविशन्ति भूतानि महान्ति सह कर्मभि:।
मनश्चावयवै: सूक्ष्मै: सर्वभूतकृदव्ययम्॥१-१८॥
ಪೂರ್ವಕೃತಕರ್ಮಗಳು, ಮನಸ್ಸು, ಸೂಕ್ಷ್ಮಾವಯವಗಳು(ಇಂದ್ರಿಯಶಕ್ತಿಗಳು)- ಇವುಗಳೊಂದಿಗೆ ಪಂಚಮಹಾಭೂತಗಳು ನಾಶರಹಿತನೂ,ಸರ್ವಚರಾಚರಗಳ ಕರ್ತೃವೂ ಆದ ಆ ಪರಮಾತ್ಮನನ್ನು /ಜೀವಾತ್ಮನನ್ನು/ಆತ್ಮವನ್ನು ಪ್ರವೇಶಿಸುತ್ತವೆ.(ಸೃಷ್ಟಿ/ಜನನಕಾಲದಲ್ಲಿ).
🌸🌸🌸 *मनुस्मृति:* 🌸🌸🌸
*तेषामिदन्तु सप्तानां पुरुषाणां महौजसाम्।*
*सूक्ष्माभ्यो मूर्तिमात्राभ्य: सम्भवत्यव्ययाद्व्ययम्॥१९॥*
_ಈ ಸಪ್ತಸೂಕ್ಷ್ಮಮೂರ್ತಿಸ್ವರೂಪರಾದ ಮಹಾ ಓಜಸ್ಸುಳ್ಳ ಪುರುಷರಿಂದ(ಪುರತಿ ,ಅಗ್ರೇ ಗಚ್ಛತಿ ಇತಿ ಪುರುಷ:- ಮುಂದೆ ಹೋಗುವವ, ಬಹು ಮೊದಲಿನವ ಪುರುಷ, ಪಂಚಮಹಾಭೂತಗಳು ೫, ಮನಸ್ಸು ೧, ಅಹಂ ತತ್ತ್ವ ೧ -ಹೀಗೆ ೭) ಅವ್ಯಯಸ್ವರೂಪವು ನಾಶವಿರುವಂಥ ನಶ್ವರ ಸೃಷ್ಟಿಸ್ವರೂಪವನ್ನು ಹೊಂದಿತು._
☘☘☘☘☘☘☘☘☘☘☘☘☘☘☘☘☘☘☘
🌼🌼🌼 *मनुस्मृति:* 🌼🌼🌼
*आद्याद्यस्य गुणं त्वेषामवाप्नोति पर: पर:।*
*यो यो यावतिथश्चैषां स स तावद्गुण: स्मृत:॥२०॥*
_ಅಹಂತತ್ತ್ವ, ಮನಸ್ಸು, ಪಂಚಭೂತಗಳು ಕ್ರಮವಾಗಿ ಆಕಾಶ, ವಾಯು, ಅಗ್ನಿ, ಆಪ(ನೀರು), ಪೃಥಿವೀ - ಈ ೭ ತತ್ತ್ವಗಳು ಅನುಕ್ರಮವಾಗಿ ತಮ್ಮ ಹಿಂದಿನ ತತ್ತ್ವಗಳ ಗುಣವನ್ನೂ ಒಳಗೊಂಡಿರುತ್ತವೆ.(ಉದಾ- ವಾಯುವು ಅಹಂ,ಮನಸ್,ಆಕಾಶ - ಈ ೩ರ ಗುಣಗಳನ್ನೂ ಹೊಂದಿರುತ್ತದೆ.) ಹಾಗಾಗಿ, ಮುಂದುಮುಂದಿನ ತತ್ತ್ವಗಳು ಅವುಗಳ ಸ್ಥಾನ(೨,೩,೪,....)ದ ಆಧಾರದಲ್ಲಿ ಹೆಚ್ಚು ಹೆಚ್ಚು ಗುಣಗಳನ್ನು ಹೊಂದಿರುತ್ತವೆ.(ಉದಾ - ಮನಸ್ತತ್ತ್ವವು ಅಹಂ ಹಾಗೂ ಮನಸ್ - ಈ ಎರಡರ ಗುಣಗಳಿಂದ ಮಾತ್ರ ಕೂಡಿದ್ದರೆ, ಆಕಾಶವು ಇವೆರಡರೊಂದಿಗೆ ಆಕಾಶದ ಗುಣ, ವಾಯುವು ಹಿಂದಿನ ೩ ತತ್ತ್ವಗಳೊಂದಿಗೆ ವಾಯುವಿನ ಗುಣವನ್ನೂ........ಹೊಂದಿದೆ.)_
🍃🍁🍂🍃🍁🍂🍃🍁🍂🍃🍁🍂🍃🍁🍂🍃🍁🍂🍃
🌸🌸🌸 *मनुस्मृति:* 🌸🌸🌸
*सर्वेषां तु स नामानि कर्माणि च पृथक् पृथक्।*
*वेदशब्देभ्य एवादौ पृथक् संस्थाश्च निर्ममे॥२१॥*
_ಹಾಗೆಯೇ, ಆ ಸ್ವಯಂಭುವ ಬ್ರಹ್ಮನು ಮೊದಲಿಗೆ ತನ್ನ ವಿವಿಧ ಸೃಷ್ಟಿರೂಪಗಳಿಗೆ ವೇದೋಕ್ತಶಬ್ದಗಳ ಆಧಾರದಲ್ಲೇ, ಪ್ರತ್ಯೇಕ ಪ್ರತ್ಯೇಕವಾದ ಹೆಸರುಗಳನ್ನು, ಅವು ಮಾಡಬೇಕಾದ ಕರ್ಮಗಳನ್ನು ಹಾಗೂ ಪ್ರತ್ಯೇಕ ನಿಯಮ-ನಿಬಂಧನೆ/ಕಟ್ಟುಪಾಡುಗಳನ್ನು ನಿರ್ಮಿಸಿದನು._
🌿🍃🍂🌿🍃🍂🌿🍃🍂🌿🍃🍂🌿🍃🍂🌿🍃🍂🌿
🌺🌺🌺 *मनुस्मृति:* 🌺🌺🌺
*कर्मात्मनां च देवानां सोऽसृजत् प्राणिनां प्रभु:।*
*साध्यानां च गणं सूक्ष्मं यज्ञं चैव सनातनम्॥२२॥*
_ಆ ಸಕಲಪ್ರಾಣಿಗಳ ಒಡೆಯನಾದ ಪರಬ್ರಹ್ಮನು ಕರ್ಮಸ್ವಭಾವದವರಾದ ದೇವತೆಗಳನ್ನೂ, ಸೂಕ್ಷ್ಮರೂಪಿಗಳಾದ ಸಾಧ್ಯಗಣವನ್ನೂ ಹಾಗೂ ಸನಾತನವಾದ ಯಜ್ಞವನ್ನೂ ಸೃಜಿಸಿದನು._
🌿🌿🌿🌿🌿🌿🌿🌿🌿🌿🌿🌿🌿🌿🌿🌿🌿🌿🌿
Comments
Post a Comment