🌸🌸 *ಪರಾಶರಸ್ಮೃತಿ:* 🌸🌸
*೨ನೇ ಅಧ್ಯಾಯ*
*ಗೃಹಸ್ಥಧರ್ಮವಿಚಾರ*
*ಅತ: ಪರಂ ಗೃಹಸ್ಥಸ್ಯ ಕರ್ಮಾಚಾರಂ ಕಲೌ ಯುಗೇ|*
*ಧರ್ಮಂ ಸಾಧಾರಣಂ ಶಕ್ತ್ಯಾ ಚಾತುರ್ವರ್ಣ್ಯಾಶ್ರಮಾಗತಮ್||೧||*
*ತಂ ಪ್ರವಕ್ಷ್ಯಾಮ್ಯಹಂ ಪೂರ್ವಂ ಪರಾಶರವಚೋ ಯಥಾ|*
*ಷಟ್ಕರ್ಮಸಹಿತೋ ವಿಪ್ರ: ಕೃಷಿಕರ್ಮ ಚ ಕಾರಯೇತ್||೨||*
ಇನ್ನು ಮುಂದೆ ಕಲಿಯುಗದಲ್ಲಿ ನಾಲ್ಕೂವರ್ಣದವರ ಧರ್ಮಕರ್ಮಾಚಾರಗಳನ್ನು , ಹಿಂದೆ ಪರಾಶರರೆಂದಂತೆ ಯಥಾಶಕ್ತಿ ಹೇಳುವೆನು. ವಿಪ್ರನು ಹಿಂದೆ ಹೇಳಿದ ಷಟ್ಕರ್ಮಗಳೊಂದಿಗೆ, ಕೃಷಿಕರ್ಮವನ್ನೂ ಮಾಡಿಸಬೇಕು.
*ಕ್ಷುಧಿತಂ ತೃಷಿತಂ ಶ್ರಾನ್ತಂ ಬಲೀವರ್ದಂ ನ ಯೋಜಯೇತ್|*
*ಹೀನಾಙ್ಗಂ ವ್ಯಾಧಿತಂ ಕ್ಲೀಬಂ ವೃಷಂ ವಿಪ್ರೋ ನ ವಾಹಯೇತ್||೩||*
ಹಸಿಯುತ್ತಿರುವ(ಆಹಾರ ತಿನ್ನಿಸದ), ಬಾಯಾರಿರುವ, ಆಯಾಸಗೊಂಡಿರುವ ಎತ್ತನ್ನು(ಬಲೀವರ್ದ ~ ಎತ್ತು) ಹಾಗೂ ಅಂಗ ಊನವಿರುವ, ವ್ಯಾಧಿಗ್ರಸ್ತವಾದ, ಪುರುಷತ್ವವಿಲ್ಲದ ವೃಷಭ(ಎತ್ತು)ವನ್ನು ವಿಪ್ರನು ಬೇಸಾಯಕ್ಕೆ ಹೂಡಬಾರದು.
*ಸ್ಥಿರಾಙ್ಗಂ ವೃಷಭಂ ತೃಪ್ತಂ ಸುನರ್ದಂ ಷಣ್ಡವರ್ಜಿತಮ್|*
*ವಾಹಯೇದ್ದಿವಸಸ್ಯಾರ್ಧಂ ಪಶ್ಚಾತ್ ಸ್ನಾನಂ ಸಮಾಚರೇತ್||೪||*
ದೃಢಕಾಯವುಳ್ಳ, ಹಸಿವು-ಬಾಯಾರಿಕೆಗಳನ್ನು ತೀರಿಸಿಕೊಂಡು ತೃಪ್ತವಾದ, ಒಳ್ಳೆಯ ಗಟ್ಟಿಸ್ವರದಲ್ಲಿ ಧ್ವನಿ ಮಾಡುವ, ಪುರುಷತ್ವವಿರುವ ಎತ್ತನ್ನು ಮಧ್ಯಾಹ್ನದವರೆಗೆ ಹೂಡಿ, ನಂತರ ಚೆನ್ನಾಗಿ ಸ್ನಾನಮಾಡಿಸಬೇಕು.
*ಜಪ್ಯಂ ದೇವಾರ್ಚನಂ ಹೋಮಂ ಸ್ವಾಧ್ಯಾಯಂ ಚೈವಮಭ್ಯಸೇತ್|*
*ಏಕದ್ವಿತ್ರಿಚತುರ್ವಿಪ್ರಾನ್ ಭೋಜಯೇತ್ ಸ್ನಾತಕಾನ್ ದ್ವಿಜ:||೫||*
ವಿಪ್ರನು ದಿನನಿತ್ಯ ಜಪಮಾಡಿ, ದೇವತಾರ್ಚನೆ, ವೈಶ್ವದೇವ ಹೋಮ, ವೇದಾದಿ ಸ್ವಾಧ್ಯಾಯ(ಅಧ್ಯಯನ)- ಇತ್ಯಾದಿ ನಿತ್ಯಕರ್ಮಗಳನ್ನು ಮಾಡಿ, ೧-೪ ವೇದವಿದರೂ ಕರ್ಮಾನುಷ್ಠಾನಿಗಳೂ ಆದ ವಿಪ್ರರಿಗೆ ಅನ್ನದಾನವನ್ನು ಮಾಡಬೇಕು.
*ಸ್ವಯಂ ಕೃಷ್ಟೇ ತಥಾ ಕ್ಷೇತ್ರೇ ಧಾನ್ಯೈಶ್ಚ ಸ್ವಯಮಾರ್ಜಿತೈ:|*
*ನಿರ್ವಪೇತ್ ಪಞ್ಚಯಜ್ಞಾಂಶ್ಚ ಕ್ರತುದೀಕ್ಷಾಂ ಚ ಕಾರಯೇತ್||೬||*
ತಾನೇ ಸ್ವತ: ಸ್ವಕ್ಷೇತ್ರದಲ್ಲಿ ಉತ್ತು, ಬಿತ್ತಿ ಬೆಳೆದು ಕೃಷಿಮಾಡಿ ಸ್ವಯಾರ್ಜಿತವಾಗಿ ಪಡೆದ ಧಾನ್ಯಾದಿಗಳಿಂದ ಪಂಚಯಜ್ಞಗಳಾದ ದೇವ-ಋಷಿ-ಪಿತೃ-ನರ-ಭೂತದಯೆ(ಯಜ್ಞ)ಗಳನ್ನೂ, ವೇದೋಕ್ತ ಯಜ್ಞಾದಿಕರ್ಮಗಳನ್ನೂ ಮಾಡಿಸಬೇಕು.
*ತಿಲಾ ರಸಾ ನ ವಿಕ್ರೇತಾ ವಿಕ್ರೇತಾ ಧಾನ್ಯತತ್ಸಮಾ:|*
*ವಿಪ್ರಸ್ಯೈವಂ ವಿಧಾ ವೃತ್ತಿಸ್ತೃಣಕಾಷ್ಠಾದಿವಿಕ್ರಯ:||೭||*
ಎಳ್ಳು, ಹಾಲು, ಜೇನುತುಪ್ಪ, ಬೆಣ್ಣೆಗಳನ್ನು ವಿಪ್ರನು ಹಣಕ್ಕೆ ಮಾರಬಾರದು; ತತ್ಸಮಾನ ಬೆಲೆಯ ಭತ್ತಾದಿಧಾನ್ಯಗಳೊಂದಿಗೆ ವಿನಿಮಯಮಾಡಬಹುದು. ಹುಲ್ಲು, ಕಟ್ಟಿಗೆ ಇತ್ಯಾದಿಗಳ ಮಾರಾಟದಲ್ಲೂ ವಿಪ್ರನು ಈ ವಿಧಾನವನ್ನೇ ಅನುಸರಿಸಬೇಕು.
*ಅಯೋಮುಖೇನ ಕಾಷ್ಠೇನ ತದೇಕಾಹೇನ ಲಾಙ್ಗಲೀ|*
*ಪಾಶಕೋ ಮತ್ಸ್ಯಘಾತೀ ಚ ವ್ಯಾಧ: ಶಾಕುನಿಕಸ್ತಥಾ||೯||*
*ಅದಾತಾ ಕರ್ಷಕಶ್ಚೈವ ಸರ್ವೇ ತೇ ಸಮಭಾಗಿನ:|*
ಕಬ್ಬಿಣದ ಬಾಯಿ ಉಳ್ಳ ಮರದ (ಲಾಂಗಲೀ- ನೇಗಿಲು ಹೊತ್ತವ)ನೇಗಿಲುಹೊತ್ತ , ಧಾನ್ಯವನ್ನು ದಾನಮಾಡದರೈತ ೧ ಹಗಲು ಮಾಡಿದ ಪಾಪವು, ಪ್ರಾಣಿಗಳಿಗೆ ಪಾಶ/ಉರುಳು ಹಾಕಿ ಹಿಡಿಯುವವನು, ಮೀನುಗಾರ, ಬೇಡ, ಹಕ್ಕಿ ಹಿಡಿಯುವವ/ಅವುಗಳ ಮೂಲಕ ಶಕುನ ಹೇಳುವವ- ಇವರೆಲ್ಲರ ಪಾಪಕ್ಕೆ ಸಮ. ಇವರೆಲ್ಲರೂ ಸಮಾನ ಪಾಪಿಗಳು.
*ವೃಕ್ಷಂ ಛಿತ್ತ್ವಾ ಮಹೀಂ ಭಿತ್ವಾ ಹತ್ವಾ ಚ ಕ್ರಿಮಿಕೀಟಕಾನ್||೧೦||*
*ಕರ್ಷಕ: ಖಲಯಜ್ಞೇನ ಸರ್ವಪಾಪೈ: ಪ್ರಮುಚ್ಯತೇ|*
ಮರಕಡಿದು, ನೆಲವನುತ್ತು, ಕ್ರಿಮಿಕೀಟಗಳನ್ನು ಕೊಂದುದರಿಂದ ಕೃಷಿಕನಿಗೆ ಬರುವ ಸರ್ವಪಾಪಗಳು, ತೆನೆಯಿಂದ ಧಾನ್ಯಬೇರ್ಪಡಿಸುವ ಸಂದರ್ಭದಲ್ಲಿ ಮಾಡುವ ತ್ಯಾಗ/ದಾನ(ಖಲಯಜ್ಞ)ದಿಂದ ಪರಿಹಾರವಾಗುವುವು.
*ಯೋ ನ ದದ್ಯಾತ್ ದ್ವಿಜಾತಿಭ್ಯೋ ರಾಶಿಮೂಲಮುಪಾಗತ:||೧೧||*
*ಸ ಚ ಉರ: ಸ ಚ ಪಾಪಿಷ್ಠೋ ಬ್ರಹ್ಮಘ್ನಂ ತಂ ವಿನಿರ್ದಿಶೇತ್|*
ಯಾವನು ಧಾನ್ಯದ ರಾಶಿಯ ಬಳಿ ಬಂದಾಗ ಬಡವರಾದ ದ್ವಿಜಾತಿಯವರಿಗೆ(ಬ್ರಾಹ್ಮಣವರ್ಣದಲ್ಲಿ ಹುಟ್ಟಿದವರಿಗೆ) ದಾನಮಾಡುವುದಿಲ್ಲವೋ ಅಂಥವನು ಚೋರನು; ಪಾಪಿಗಳಲ್ಲಿ ಅಧಿಕತಮಪಾಪಿಯು. ಅವನನ್ನು ಬ್ರಹ್ಮಘ್ನ/ಬ್ರಹ್ಮಹಂತಕನೆಂದು ತಿಳಿಯಬೇಕು.
☘☘☘☘☘☘☘☘☘☘☘☘☘☘☘☘☘☘☘
🚩🚩 *ಪರಾಶರಸ್ಮೃತಿ:* 🚩🚩
*ರಾಜ್ಞೇ ದತ್ತ್ವಾ ತು ಷಡ್ಭಾಗಂ ದೇವಾನಾಂ ಚೈಕವಿಂಶಕಮ್||೧೨||*
*ವಿಪ್ರಾಣಾಂ ತ್ರಿಂಶಕಂ ಭಾಗಂ ಸರ್ವಪಾಪೈ: ಪ್ರಮುಚ್ಯತೇ|*
*ಕ್ಷತ್ರಿಯೋऽಪಿ ಕೃಷಿಂ ಕೃತ್ವಾ ದೇವಾನ್ವಿಪ್ರಾಂಶ್ಚ ಪೂಜಯೇತ್||೧೩||*
*ವೈಶ್ಯ: ಶೂದ್ರಸ್ತಥಾ ಕುರ್ಯಾತ್ಕೃಷಿವಾಣಿಜ್ಯಶಿಲ್ಪಕಮ್|*
ದೇಶದ ಆಡಳಿತಕ್ಕೆ ಆದಾಯದ ೬ರಲ್ಲೊಂದು ಭಾಗವನ್ನೂ, ದೇವಕಾರ್ಯಗಳಿಗೆ ೨೦ರಲ್ಲೊಂದು ಭಾಗವನ್ನೂ, ಬ್ರಾಹ್ಮಣರಿಗೆ ೩೦ರಲ್ಲೊಂದು ಭಾಗವನ್ನೂ ನೀಡಿದರೆ ಆದಾಯಕರ್ಮಗತಸರ್ವಪಾಪಗಳಿಂದ ಮುಕ್ತನಾಗುವನು. ಕ್ಷತ್ರಿಯನೂ ಕೃಷಿ ಮಾಡಿ, ದೇವನನ್ನೂ ವಿಪ್ರರನ್ನೂ ಪೂಜಿಸಬೇಕು. ವೈಶ್ಯಶೂದ್ರರು ಕೃಷಿ,ವ್ಯಾಪಾರ,ಶಿಲ್ಪಕಲೆಗಳನ್ನು ಮಾಡಬೇಕು.
ವಿಕರ್ಮಕುರ್ವತೇ ಶೂದ್ರಾ ದ್ವಿಜಶುಶ್ರೂಷಯೋಜ್ಝಿತಾ:||೧೪||
ಭವನ್ತ್ಯಲ್ಪಾಯುಷಸ್ತೇ ವೈ ನಿರಯಂ ಯಾನ್ತ್ಯಸಂಶಯಮ್|
ಚತುರ್ಣಾಮಪಿ ವರ್ಣಾನಾಮೇಷ ಧರ್ಮ: ಸನಾತನ:||೧೫||
ದ್ವಿಜರ ಸೇವೆಯನ್ನು ಮಾಡದೆ ಮಾಡಬಾರದ ಕರ್ಮಗಳನ್ನು ಮಾಡಿದರೆ ಶೂದ್ರರು ಅಲ್ಪಾಯುಷಿಗಳೂ, ನರಕವಾಸಿಗಳೂ ಆಗುವುದರಲ್ಲಿ ಸಂಶಯವಿಲ್ಲ.
ಇದೇ ನಾಲ್ಕೂ ವರ್ಣಗಳ ಸನಾತನವಾದ ಧರ್ಮವಾಗಿದೆ.
*ತೃತೀಯೋऽಧ್ಯಾಯ:*
*ಅಶೌಚವ್ಯವಸ್ಥಾವರ್ಣನಮ್*
(ಜಾತಾಶೌಚ ಹಾಗೂ ಮೃತಾಶೌಚ)
*ಅತ: ಶುದ್ಧಿಂ ಪ್ರವಕ್ಷ್ಯಾಮಿ ಜನನೇ ಮರಣೇ ತಥಾ|*
*ದಿನತ್ರಯೇಣ ಶುದ್ಧ್ಯನ್ತಿ ಬ್ರಾಹ್ಮಣಾ: ಪ್ರೇತಸೂತಕೇ||೧||*
ಜನನ ಹಾಗೂ ಮರಣಕಾಲದಲ್ಲಿನ ಸೂತಕಶುದ್ಧಿಗಳ ಬಗ್ಗೆ ಹೇಳುವೆನು. ಬ್ರಾಹ್ಮಣರಿಗೆ ಹಿಂದಿನ ೫ ತಲೆಮಾರುಗಳಿಗಿಂತ ಪ್ರಾಚೀನಕುಟುಂಬದ ಬಂಧುಗಳ ಮರಣದ ಸೂತಕವು ೩ ದಿನ. ಬಳಿಕ ಶುದ್ಧರಾಗುವರು.
*ಕ್ಷತ್ರಿಯೋ ದ್ವಾದಶಾಹೇನ ವೈಶ್ಯ: ಪಂಚದಶಾಹಕೈ:|*
*ಶೂದ್ರ: ಶುದ್ಧ್ಯತಿ ಮಾಸೇನ ಪರಾಶರವಚೋ ಯಥಾ||೨||*
ಮರಣಸೂತಕದಲ್ಲಿ ಕ್ಷತ್ರಿಯನು ೧೨ ದಿನಗಳಲ್ಲಿ, ವೈಶ್ಯನು ೧೫ ದಿನಗಳಲ್ಲಿ (ಹಾಗೂ) ಶೂದ್ರನು ೧ ತಿಂಗಳಲ್ಲಿ ಶುದ್ಧನಾಗುವನು. ಇದು ಪರಾಶರನ ವಚನ.
🌴🌴🌴🌴🌴🌴🌴🌴🌴🌴🌴🌴🌴🌴🌴🌴🌴🌴🌴
*ॐ गुं गुरुभ्यो नम:*
*ॐ गं गणपतये नम:*
🌺🌺 *पराशरस्मृति:* 🌺🌺
*उपासने तु विप्राणामङ्गशुद्धिश्च जायते।*
*ब्राह्मणानां प्रसूतौ तु देवस्पर्शो विधीयते॥३॥*
ವಿಪ್ರ/ಬ್ರಾಹ್ಮಣರ ಜಾತಾಶೌಚವು ದೇವಪ್ರತೀಕಸ್ಪರ್ಶೋಪಾಸನಾದಿಗಳಿಂದಲೇ ಪರಿಹಾರವಾಗುವುದು. ಜಾತಾಶೌಚವು ಮೃತಾಶೌಚದಷ್ಟು ಪ್ರಬಲವಲ್ಲ.
🍀🍀🍀🍀🍀🍀🍀🍀🍀🍀🍀🍀🍀🍀🍀🍀🍀🍀🍀
*ಪರಾಶರಸ್ಮೃತಿ:*
*जातौ विप्रो दशाहेन द्वादशाहेन भूमिप:।*
*वैश्य: पञ्चदशाहेन शूद्रो मासेन शुद्ध्यति॥४॥*
ಬ್ರಾಹ್ಮಣರಿಗೆ ಕುಟುಂಬದ ಜಾತಾಶೌಚವು (ಹುಟ್ಟಿದ ಸೂತಕವು) ೧೦ ದಿನ, ಕ್ಷತ್ರಿಯರಿಗೆ ೧೨ ದಿನ, ವೈಶ್ಯರಿಗೆ ೧೫ ದಿನ ಹಾಗೂ ಶೂದ್ರರಿಗೆ ೧ ತಿಂಗಳು.
*पराशरस्मृति:*
ಸಪಿಂಡಿಗಳು/ಬಹು ಹತ್ತಿರದ ಸಂಬಂಧಿಗಳು/ಪಿತೃಕಾರ್ಯಗಳಲ್ಲಿ ನಮಸ್ಕರಿಸುವ ಹಕ್ಕು-ಬಾಧ್ಯತೆಗಳಿರುವವರಲ್ಲಿ ಜನನವಾದರೆ ಹಿಂದೆ ಹೇಳಿದ ೧೦,೧೨,೧೫,೩೦ ದಿನಗಳ ಅಶೌಚ. ದೂರದ ಸಂಬಂಧಿಗಳು/ಸಮಾನೋದಕರು/ಸಪಿಂಡಿಗಳಲ್ಲದ ಸಂಬಂಧಿಗಳದ್ದಾದರೆ ೩ ದಿನದ ಅಶೌಚವೆಂದು ಮಾಧವನ ಅಭಿಪ್ರಾಯ.
*ಏಕಾಹಾಚ್ಛುದ್ಧ್ಯತೇ ವಿಪ್ರೋ ಯೋऽಗ್ನಿವೇದಸಮನ್ವಿತ:|*
*ತ್ರ್ಯಹಾತ್ಕೇವಲವೇದಸ್ತು ದ್ವಿಹೀನೋ ದಶಭಿರ್ದಿನೈ:||೫||*
*एकाहाच्छुद्ध्यते विप्रो योऽग्निवेदसमन्वित:।*
*त्र्यहात्केवलवेदस्तु द्विहीनो दशभिर्दिनै:॥५॥*
ಯಾವ ವಿಪ್ರನು ನಿತ್ಯವೇದಾಧ್ಯಾಯಿಯೂ, ಸದಾ ನಂದದ ಗೃಹ್ಯಾಗ್ನಿಯನ್ನು ಕಾಪಿಟ್ಟು ಅಗ್ನಿಕಾರ್ಯಾದಿಗಳನ್ನು ಕಾಲಕಾಲಕ್ಕೆ ಮಾಡುವವನೂ ಆಗಿರುವನೋ ಅಂಥವನು ಕೇವಲ ೧ ದಿನದಲ್ಲೇ ಜಾತಾಶೌಚದಿಂದ ಶುದ್ಧನಾಗುವನು. ಗೃಹ್ಯಾಗ್ನಿರಕ್ಷಣೆಯಿಲ್ಲದೆ ಕೇವಲ ವೇದಾಧ್ಯಾಯಿಯು ೩ ದಿನಗಳಲ್ಲೂ, ಇವೆರಡೂ ಇಲ್ಲದ ವಿಪ್ರಜಾತನು ೧೦ ದಿನಗಳಲ್ಲೂ ಶುದ್ಧರಾಗುವರು.
🌸🌸 *पराशरस्मृति:* 🌸🌸
*जन्मकर्मपरिभ्रष्ट: सन्ध्योपासनवर्जित:।*
*नामधारकविप्रस्तु दशाहं सूतकी भवेत्॥*
ಜನನಾರಭ್ಯ ಪುಣ್ಯಾಹವಾಚನಾದಿ ಯಾವುದೇ ಸಂಸ್ಕಾರಗಳಾಗದ, ಸಂಧ್ಯಾವಂದನೆಯನ್ನೂ ಮಾಡದ ವಿಪ್ರನು ಕೇವಲ ಹೆಸರಿಗೆ ಮಾತ್ರ ವಿಪ್ರನು. ಅವನಿಗೂ ೧೦ ದಿನಗಳ ಜಾತಾಶೌಚವಿದೆ.
🍀🍀🍀🍀🍀🍀🍀🍀🍀🍀🍀🍀🍀🍀🍀🍀🍀🍀🍀
🌺🌺 *पराशरस्मृति:* 🌺🌺
*एकपिण्डास्तु दायादा: पृथग्दारनिकेतना:।*
*जन्मन्यपि विपत्तौ च तेषां तत्सूतकं भवेत्॥७॥*
_ಒಂದೇ ಕುಟುಂಬದವರು, ಆದರೆ ಪತ್ನಿಯು ಕೆಳವರ್ಗದವಳಾಗಿದ್ದಲ್ಲಿಯೂ, ಈ ಮೇಲಿನ ಅಶೌಚನಿಯಮವನ್ನು ಪಾಲಿಸಬೇಕು. ಇದು ಮಾಧವನ ವಿವರಣೆ._
🍃🍃🍃🍃🍃🍃🍃🍃🍃🍃🍃🍃🍃🍃🍃🍃🍃🍃🍃
💐💐 *पराशरस्मृति:* 💐💐
*तावत् तत्सूतकं गोत्रे चतुर्थपुरुषेण तु।*
*दायाद्विच्छेदमाप्नोति पञ्चमो वात्मवंशज:॥८॥*
_೫ನೇ ತಲೆಮಾರಿನ ವರೆಗೆ ಪೂರ್ಣದಿನಗಳ ಸೂತಕ. ತರುವಾಯ, ೫ನೇ ತಲೆಮಾರಿನಿಂದ ನಂತರ ಸಪಿಂಡದಿಂದ ಪ್ರತ್ಯೇಕವಾಗುತ್ತಾರೆ. ಸೂತಕದ ಅವಧಿ ಕಡಿಮೆಯಾಗುತ್ತದೆ._
🌴🌴🌴🌴🌴🌴🌴🌴🌴🌴🌴🌴🌴🌴🌴🌴🌴🌴🌴
🌺🌺 *पराशरस्मृति:* 🌺🌺
*चतुर्थे दशरात्रं स्यात्षण्णिशा: पुंसि पञ्चमे।*
*षष्ठे चतुरहाच्छुद्धि: सप्तमे तु दिनत्रयात्॥९॥*
ನಾಲ್ಕನೇ ತಲೆಮಾರಿನಷ್ಟು ಹಿಂದೆ ಸಮಾನಪೂರ್ವಜರಾಗಿದ್ದರೆ, ೧೦ ರಾತ್ರಿಗಳ ಅಶೌಚ; ೫ನೇ ತಲೆಮಾರಿಗೆ ೬ ರಾತ್ರಿಗಳು; ೬ನೇ ತಲೆಮಾರಿಗೆ ೪ ದಿನಗಳು; ೭ನೇ ತಲೆಮಾರಿಗೆ ೩ ದಿನಗಳ ಸೂತಕ.
🌴🌴🌴🌴🌴🌴🌴🌴🌴🌴🌴🌴🌴🌴🌴🌴🌴🌴🌴
🌺🌺 *पराशरस्मृति:* 🌺🌺
*भृग्वग्निमरणे चैव देशान्तरमृते तथा।*
*बाले प्रेते च संन्यस्ते सद्य: शौचं विधीयते॥१०॥*
_ಪರ್ವತದ ತುದಿ(ಭೃಗು)ಯಿಂದ ಬಿದ್ದು ಸತ್ತರೆ, ಅಗ್ನಿ ಆಕಸ್ಮಿಕದಿಂದ ಸತ್ತರೆ, ಹಾಗೆಯೇ, ಬೇರೆ ದೇಶದಲ್ಲಿ ಸತ್ತರೆ(ಅನ್ಯತ್ ದೇಶ: ದೇಶಾನ್ತರ:), ಶಿಶುವು ಜನಿಸುವಾಗಲೇ ಮೃತಿ ಹೊಂದಿದ್ದರೆ(still birth), ಸಂನ್ಯಾಸಿ/ಆತ್ಮಶ್ರಾದ್ಧಮಾಡಿಕೊಂಡವನು ಸತ್ತರೆ ಅಂಥವರ ಕೌಟುಂಬಿಕರಿಗೆ ಅದೇ ದಿನ ಸ್ನಾನದಿಂದ ಅಶೌಚಶುದ್ಧಿಯಾಗುವುದು.
🌴🌴🌴🌴🌴🌴🌴🌴🌴🌴🌴🌴🌴🌴🌴🌴🌴🌴🌴
🌺🌺 *पराशरस्मृति:* 🌺🌺
*देशान्तरमृत: कश्चित्सगोत्र: श्रूयते यदि।*
*न त्रिरात्रमहोरात्रं सद्य: स्नात्वा शुचिर्भवेत्॥११॥*
_ಯಾವನಾದರೂ ಸ್ವಗೋತ್ರಜನು ಬೇರೆ ದೇಶದಲ್ಲಿ ಮೃತನಾದ (ಸುದ್ದಿ)ಕೇಳಿದರೆ, ೩ ರಾತ್ರಿಯಾಗಲೀ ೧ ಅಹೋರಾತ್ರಿ(ದಿನ=ಹಗಲು+ರಾತ್ರಿ)ಯಾಗಲೀ ಅಶೌಚವಿಲ್ಲ; ತತ್ಕ್ಷಣವೇ ಸ್ನಾನಮಾಡಿ ಶುದ್ಧಿ ಹೊಂದುತ್ತಾನೆ.
🌴🌴🌴🌴🌴🌴🌴🌴🌴🌴🌴🌴🌴🌴🌴🌴🌴🌴🌴
🌺🌺 *पराशरस्मृति:* 🌺🌺
*देशान्तरगतो विप्र: प्रयासात्कालकारितात्।*
*देहनाशमनुप्राप्तस्तिथिर्न ज्ञायते यदि॥१२॥*
_ಅನ್ಯದೇಶಕ್ಕೆ ಹೋದ ವಿಪ್ರನು ನಿತ್ರಾಣದಿಂದಲೋ, ಕಾಲದ ದೆಸೆಯಿಂದಲೋ ಯಾವತ್ತೋ ದೇಹತ್ಯಜಿಸಿ ಕೆಲಕಾಲಾನಂತರ ಗೊತ್ತಾದರೆ, ಆ ದಿನ/ತಿಥಿ ತಿಳಿಯದಿದ್ದಲ್ಲಿ,_
*कृष्णाष्टमी त्वमावास्या कृष्णा चैकादशी च या।*
*उदकं पिण्डदानं च तत्र श्राद्धं च कारयेत्॥१३॥*
_ಕೃಷ್ಣಾಷ್ಟಮೀ, ಅಮಾವಾಸ್ಯಾ, ಕೃಷ್ಣಪಕ್ಷದ(ಬಹುಳ)ಏಕಾದಶೀ - ಇಂತಹ ಯಾವುದಾದರೂ ಪುಣ್ಯತಿಥಿಯಂದು ತಿಲೋದಕ,ಪಿಂಡಪ್ರದಾನ ಹಾಗೂ ಶ್ರಾದ್ಧಾದಿ ಅಪರ(ಕರ್ಮ)ಸಂಸ್ಕಾರಗಳನ್ನು ಮಾಡಿಸಬೇಕು._
🌴🌴🌴🌴🌴🌴🌴🌴🌴🌴🌴🌴🌴🌴🌴🌴🌴🌴🌴
🚩🕉 *पराशरस्मृति:* 🕉🚩
*अजातदन्ता ये बाला ये च गर्भाद्विनिस्सृता:।*
*न तेषामग्निसंस्कारो नाशौचं नोदकक्रिया॥१४॥*
_ಇನ್ನೂ ಹಲ್ಲು ಹುಟ್ಟದ ಯಾವ ಶಿಶುಗಳು ಮತ್ತು ಇದೀಗ ಜನಿಸಿದ ನವಜಾತ ಶಿಶುಗಳು ಮರಣ ಹೊಂದಿದರೆ, ಅವುಗಳಿಗೆ ಅಗ್ನಿಸಂಸ್ಕಾರವಿಲ್ಲ; ಶವದಫನ ಮಾಡಬೇಕು. ಹಾಗೆಯೇ, ಇದಕ್ಕೆ ಅಶೌಚಾಚರಣೆಯೂ, ತಿಲೋದಕಾದಿ ಕ್ರಿಯೆಗಳೂ ಇಲ್ಲ._
🌴🌴🌴🌴🌴🌴🌴🌴🌴🌴🌴🌴🌴🌴🌴🌴🌴🌴🌴
🌺🌺 *पराशरस्मृति:* 🌺🌺
*यदि गर्भो विपद्येत स्रवते वापि योषित:।*
*यावन्मासं स्थितोे गर्भो दिनं तावत्तु सूतकम्॥१५॥*
_ಒಂದು ವೇಳೆ ಮಗು ಗರ್ಭದಲ್ಲೇ ಮರಣಿಸಿದರೆ ಅಥವಾ ಗರ್ಭಸ್ರಾವವಾದರೆ, ಆ ಗರ್ಭಿಣಿಗೆ ಎಷ್ಟು ತಿಂಗಳು-ದಿನಗಳವರೆಗೆ ಗರ್ಭದಲ್ಲಿತ್ತೋ ಅಷ್ಟು ಕಾಲದಷ್ಟು ಸೂತಕವಿರುವುದು._
🍃🍃🍃🍃🍃🍃🍃🍃🍃🍃🍃🍃🍃🍃🍃🍃🍃🍃🍃
🌺🌺 *पराशरस्मृति:* 🌺🌺
*आचतुर्थाद्भवेत्स्राव: पात: पञ्चमषष्ठयो:।*
*अत ऊर्ध्वं प्रसूति: स्याद्दशाहं सूतकं भवेत्॥१६॥*
_ಗರ್ಭದ ೪ನೇ ತಿಂಗಳಿನಿಂದ ಆರಂಭಿಸಿ ೫,೬ನೇ ತಿಂಗಳವರೆಗೆ ಗರ್ಭವು ಹೋದರೆ *ಗರ್ಭಸ್ರಾವ(miscarriage)/ಗರ್ಭಪಾತ(abortion)*; ಸೂತಕವಿಲ್ಲ. ಇದರ ನಂತರದ ತಿಂಗಳುಗಳಲ್ಲಿ ಗರ್ಭವು ಜಾರಿದರೆ *ಹೆರಿಗೆ(delivery)/ಪ್ರಸೂತಿ(labour)*, ೧೦ ದಿನಗಳ ಸೂತಕ._
🍃🍃🍃🍃🍃🍃🍃🍃🍃🍃🍃🍃🍃🍃🍃🍃🍃🍃🍃
🍀🍀 *पराशरस्मृति:* 🍀🍀
*दन्तजातेऽनुजाते च कृतचूडे च संस्थिते।*
*अग्निसंस्करणस्तेषां त्रिरात्रमशुचिर्भवेत्॥१६॥*
_ಮಕ್ಕಳು ಹಲ್ಲು ಬಂದನಂತರ, ಅಥವಾ ಬರುವ ಮೊದಲೇ ಚೂಡಾಕರ್ಮ/ಚವಳ/ಬಾರ್ಸ ಸಂಸ್ಕಾರವಾಗಿದ್ದು ನಂತರ, ಮೃತಿಹೊಂದಿದರೆ ಅಂಥವರಿಗೆ ಅಗ್ನಿಸಂಸ್ಕಾರ/ದಹನ ಕರ್ಮ ಮಾಡತಕ್ಕದ್ದು. ೩ ರಾತ್ರಿಗಳ ಅಶೌಚವಿದೆ._
🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺
🕉🍀 *पराशरस्मृति:* 🍀🕉
*आदन्तजन्मन: सद्याऽचूडान्नैशिकी स्मृता।*
*त्रिरात्रमाव्रतादेशाद्दशरात्रमत: परम्॥१७॥*
_*ಪದವಿಭಾಗ:-*_
_ಆದಂತಜನ್ಮನ: ಸದ್ಯಾ ಆಚೂಡಾತ್ ನೈಶಿಕೀ ಸ್ಮೃತಾ|_
_ತ್ರಿರಾತ್ರಮ್ ಆವ್ರತ-ಆದೇಶಾತ್ ದಶರಾತ್ರಮ್ ಅತ: ಪರಮ್||೧೭||_
*_ತಾತ್ಪರ್ಯಮ್/ಅನುವಾದ:-_*
_ಶಿಶುವಿಗೆ ಹಲ್ಲು ಹುಟ್ಟುವವರೆಗಿನ ಅವಧಿಯಲ್ಲಿ ಅದು ತೀರಿಹೋದರೆ ಆ ದಿನವೇ ಶುದ್ಧ. ಚೂಡಾಕರ್ಮದವರೆಗಿನ ಶಿಶುಮರಣಕ್ಕೆ ೧ ನಿಶೆಯ ಅಶೌಚವು. ಮೌಂಜೀಬಂಧನ/ಉಪನಯನದ ಮೊದಲೇ ಮರಣ ಹೊಂದಿದರೆ ೩ ದಿನ. ಅದರ ನಂತರ ಮರಣವಾದರೆ ದಶದಿನಾಶೌಚ._
🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸
🌸🌸 *पराशरस्मृति:* 🌸🌸
*ब्रह्मचारी गृहे येषां हूयते च हुताशन:।*
*सम्पर्कं न च कुर्वन्ति न तेषां सूतकं भवेत्॥१८॥*
_ವಿದ್ಯಾರ್ಜನೆಗೈಯುತ್ತಿರುವ ಬ್ರಹ್ಮಚಾರಿ, ನಿತ್ಯವೂ ಮನೆಯಲ್ಲಿ ಅಗ್ನಿಕಾರ್ಯಾದಿಗಳನ್ನು ನಡೆಸುವ ಗೃಹಸ್ಥರು- ಇವರು ಮೃತಶರೀರವನ್ನಾಗಲೀ, ಅದನ್ನು ಸ್ಪರ್ಶಿಸಿದವರನ್ನಾಗಲೀ ಮುಟ್ಟದಿದ್ದರೆ/ಅವರ ಸಂಪರ್ಕದಿಂದ ದೂರವಿದ್ದರೆ, ಅವರಿಗೆ ಸೂತಕವಿಲ್ಲ._
*सम्पर्काद्दुष्यते विप्रो जनने मरणे तथा।*
*सम्पर्काच्च निवृत्तस्य न प्रेतं नैव सूतकम्॥१९॥*
_ಕೇವಲ ಸಂಪರ್ಕದಿಂದಲೇ ಬ್ರಾಹ್ಮಣನಿಗೆ ಸೂತಕವು. ಸ್ಪರ್ಶಾದಿಸಂಪರ್ಕ ಹೊಂದದಿದ್ದರೆ, ಅವನಿಗೆ ಜನನ ಅಥವಾ ಮರಣದ ಸೂತಕವಿಲ್ಲ._
🍃🍃🍃🍃🍃🍃🍃🍃🍃🌺🌺🍃🍃🍃🍃🍃🍃🍃🍃
☘☘ *पराशरस्मृति:* ☘☘
*शिल्पिन: कारुका वैद्या दासीदासाश्च नापिता:।*
*राजान: श्रोत्रियाश्चैव सद्य:शौचा: प्रकीर्तिता:॥२०॥*
_ಕೆತ್ತನೆಗಾರರು, ಕರಕುಶಲಕರ್ಮಿಗಳು, ವೈದ್ಯರುಗಳು, ಸ್ತ್ರೀ ಹಾಗೂ ಪುರುಷ ಸೇವಕವರ್ಗದವರು, ಕ್ಷೌರಿಕರು, ರಾಜರುಗಳು ಮತ್ತು ವೇದೋಕ್ತಕರ್ಮನಿರತರು - ಇವರು ತತ್ಕ್ಷಣದಲ್ಲೇ ಶುದ್ಧರು. ಇವರಿಗೆ ಸೂತಕದ ಬಾಧಕವಿಲ್ಲ._
🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺
🌱🌱🌿🌿🌻🌻 *पराशरस्मृति:* 🌻🌻🌿🌿🌱🌱
*सव्रत: सत्रपूतश्चाहिताग्निश्च यो द्विज:।*
*राज्ञश्च सूतकं नास्ति यस्य चेच्छति पार्थिव:॥२१॥*
_ವ್ರತಾನುಷ್ಠಾನನಿಷ್ಠನಾದ, ಸತ್ರಯಾಗದಲ್ಲಿ ಪವಿತ್ರನಾದ, ನಿತ್ಯಾಗ್ನಿಹೋತೃವಾದ ಯಾವ ದ್ವಿಜನಿರುವನೋ ಅವನಿಗೂ, ಅಂತೆಯೇ, ರಾಜನು ಇಚ್ಛಿಸಿ ರಾಜಕಾರ್ಯಕ್ಕೆ ನಿಯಮಿಸಿದ ರಾಜಪುರುಷನಿಗೂ ಸೂತಕಾಚರಣೆಯಿಲ್ಲ._
🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺
🌼🌼🌼 *पराशरस्मृति:* 🌼🌼🌼
*उद्यतो निधने दाने आर्तो विप्रो निमन्त्रित:।*
*तदैव चर्षिभिर्दृष्टं यथाकालेन शुद्ध्यति॥२२॥*
_उद्यत: निधने दाने आर्त: विप्र: निमन्त्रित: तदा एव च ऋषिभि: दृष्टं यथाकालेन शुद्ध्यति॥_
_निधने (युद्धे निरत:/निर्गतं निवृत्तं वा धनं यस्य स: निधन:, तत्स्थाने तस्मै वा धनस्य)दाने (वा) उद्यत:, आर्त:, (वैदिकक्रियार्थं)निमन्त्रित: विप्र: -( एते सर्वे) तदा एव (शुद्ध्यन्ति), अन्या: कथं यथाक्रमेण शुद्ध्यन्ति, तद्वत् एव शुद्ध्यति ।_
_ನಿಧನ(ಮರಣ)ಕ್ಕೆ ಕಾರಣವಾಗುವಂತಹ ಯುದ್ಧಕರ್ಮನಿರತನೂ, ದಾನಕರ್ಮರತನೂ,/ನಿರ್ಧನನಿಗೆ ದಾನಮಾಡಲು ತೊಡಗಿದವನೂ, ದು:ಖತಪ್ತನೂ, ವೈದಿಕಕರ್ಮಾದಿಗಳನ್ನು ನಡೆಸಿಕೊಡಲು ಆಮಂತ್ರಿತನಾದ ಬ್ರಾಹ್ಮಣನೂ- ಇವರೆಲ್ಲರೂ ಸೂತಕದಿಂದ ತತ್ಕ್ಷಣದಲ್ಲೇ ಶುದ್ಧರಾಗುತ್ತಾರೆ. ಇತರರು ಹೇಗೆ ಕೆಲವಾರು ದಿನಗಳ ಸೂತಕಾಚರಣೆಯಿಂದ ಶುದ್ಧರಾಗುವರೋ ಅದಕ್ಕೆ ಸರಿಸಮವಾಗಿ ಇವರೂ ಕೇವಲ ಆ ಕ್ಷಣದಲ್ಲೇ ಪರಿಶುದ್ಧರಾಗುವರು._
🍃🍂🍁🍃🍂🍁🍃🍂🍁🍃🍂🍁🍃🍂🍁🍃🍂🍁🍃
🌻🌻🌻🌻 *पराशरस्मृति:* 🌻🌻🌻🌻
*प्रसवे गृहमेधी तु न कुर्यात्सङ्करं यदि।*
*दशाहाच्छुद्ध्यते माता त्ववगाह्य पिता शुचि:॥२३॥*
_ಗೃಹಸ್ಥರಾದ(ಗೃಹಮೇಧೀ)ವರು ಪ್ರಸೂತಿ ಸೂತಕದಲ್ಲಿ ಸ್ಪರ್ಶಾದಿಗಳಿಂದ ಸಂಪೂರ್ಣ ಹೊರತಾಗಿದ್ದರೆ, ತಂದೆಯಾದವನು ನೀರಲ್ಲೊಮ್ಮೆ ಸಂಪೂರ್ಣ ಮುಳುಗಿ ಮಿಂದರೆ ತಕ್ಷಣವೇ ಶುದ್ಧನಾಗುವನು; ತಾಯಿಯು ೧೦ ದಿನಗಳಲ್ಲಿ ಶುದ್ಧಳಾಗುವಳು._
🌴🌴🌴🌴🌴🌴🌴🌴🌴🌴🌴🌴🌴🌴🌴🌴🌴🌴🌴
🌺🌺🌺 *पराशरस्मृति:* 🌺🌺🌺
*सर्वेषां शावमाशौचं माता पित्रोस्तु सूतकम्।*
*सूतकं मातुरेव स्यादुपस्पृश्य पिता शुचि:॥२४॥*
ಧಾರ್ಮಿಕ ಪ್ರಕ್ರಿಯೆಗಳನ್ನು ನಡೆಸುವುದಕ್ಕೆ ಸಂಬಂಧಿಸಿದಂತೆ ಮರಣಸೂತಕವು ಎಲ್ಲರಿಗೂ ಸಮನಾಗಿ ಅನ್ವಯವಾಗುತ್ತದೆ. ಆದರೆ, ಸೂತಕದಲ್ಲಿ ಅಸ್ಪೃಶ್ಯತೆಯೆಂಬ ಒಂದು ಭಾಗವಿದೆ. ಇದು ಮಗುವಿನ ಹೆತ್ತವರಿಗೆ ಮಾತ್ರವಿದ್ದು, ಮೃತನ ತಾಯಿಗೆ ೧೦ ದಿನ; ತಂದೆ ಸ್ನಾನಮಾಡಿದ ಕೂಡಲೇ ಅಸ್ಪೃಶ್ಯತೆಯನ್ನು ಕಳೆದುಕೊಳ್ಳುತ್ತಾನೆ.
🌿🌱☘🌿🌱☘🌿🌱☘🌿🌱☘🌿🌱☘🌿🌱☘🌿
🌺🌺🌺🌺 *पराशरस्मृति:* 🌺🌺🌺🌺
*यदि पत्न्यां प्रसूतायां सम्पर्कं कुरुते द्विज:।*
*सूतकं तु भवेत् तस्य यदि विप्र: षडङ्गवित्॥२५॥*
_ವಿಪ್ರನು ವೇದದ ಷಡಂಗವಿದನಾದರೂ, ಒಂದೊಮ್ಮೆ ಪ್ರಸವಿಸಿದ ತನ್ನ ಪತ್ನಿಯನ್ನು ಶುದ್ಧದ ಮೊದಲು ಸ್ಪರ್ಶಿಸಿದರೆ, ಅವನಿಗೂ ಸೂತಕವು ಪ್ರಾಪ್ತಿಸುತ್ತದೆ._
🌴🌴🌴🌴🌴🌴🌴🌴🌴🌴🌴🌴🌴🌴🌴🌴🌴🌴🌴
🌺🌺 *पराशरस्मृति:* 🌺🌺
*सम्पर्काज्जायते दोषो नान्यो दोषोऽस्ति वै द्विजे।*
*तस्मात्सर्वप्रयत्नेन सम्पर्कं वर्जयेद्बुध:॥२६॥*
_ಸ್ಪರ್ಶಾದಿಸಂಪರ್ಕಗಳಿಂದಲೇ ದ್ವಿಜನಿಗೆ ದೋಷವು; ಬೇರೆ ದೋಷವಿಲ್ಲ. ಆದ್ದರಿಂದ, ಸರ್ವಪ್ರಯತ್ನದಿಂದ ವಿದ್ವಾಂಸನು ಸಂಪರ್ಕವನ್ನು ವರ್ಜಿಸತಕ್ಕದ್ದು._
🌴🌴🌴🌴🌴🌴🌴🌴🌴🌴🌴🌴🌴🌴🌴🌴🌴🌴🌴
🌺🌺 *पराशरस्मृति:* 🌺🌺
*विवाहोत्सवयज्ञेषु त्वन्तरामृतसूतके।*
*पूर्वसङ्कल्पितं द्रव्यं दीयमानं न दुष्यति॥२७॥*
_ವಿವಾಹಾದಿಮಹೋತ್ಸವಗಳು ಹಾಗೂ ಯಜ್ಞಾದಿಗಳ ಮಧ್ಯೆ ಮೃತಸೂತಕ ಬಂದೊದಗಿದರೆ, ಈಗಾಗಲೇ ನಾಂದೀ ಅಥವಾ ಸಂಕಲ್ಪಕರ್ಮ ನಡೆದಿರುವುದರಿಂದ, ದೇವತಾದಿಗಳಿಗೆ ಅರ್ಪಿಸಲ್ಪಡುವ ಹವಿಸ್ಸು ಹಾಗೂ ಪುರೋಹಿತರಿಗೆ ಪ್ರದತ್ತವಾಗುವ ದಕ್ಷಿಣೆ ಮುಂತಾದ ದ್ರವ್ಯಗಳು ದೋಷಪೂರಿತವಾಗುವುದಿಲ್ಲ/ನಿರರ್ಥಕವಾಗುವುದಿಲ್ಲ._
🌱🌱🌱🌱🌱🌱🌱🌱🌱🌱🌱🌱🌱🌱🌱🌱🌱🌱🌱
🌺🌺🌺 *पराशरस्मृति:* 🌺🌺🌺
*अन्तरा च दशाहस्य पुनर्मरणजन्मनी।*
*तावत् स्यादशुचिर्विप्रो यावत् तत् स्यादनिर्दिशम्॥२९॥*
_ಮರಣಸೂತಕದ ೧೦ ದಿನಗಳಲ್ಲಿ ಬೇರೆ ಯಾವುದೇ ಜನನಮರಣಗಳ ಸೂತಕ ಬಂದರೆ, ಹಿಂದಿನ ಮರಣಸೂತಕದ ಶುದ್ಧದ ದಿನವೇ ಎಲ್ಲದಕ್ಕೂ ಒಟ್ಟಿಗೆ ಶುದ್ಧಿಯಾಗುವುದು._
🌴🌴🌴🌴🌴🌴🌴🌴🌴🌴🌴🌴🌴🌴🌴🌴🌴🌴🌴
🌼🌼🌼🌼 *पराशरस्मृति:* 🌼🌼🌼🌼
*द्वाविमौ पुरुषौ लोके सूर्यमण्डलभेदिनौ।*
*परिव्राड्योगयुक्तश्च रणे चाभिमुखो हत:॥३०॥*
_ಈ ಜಗತ್ತಿನಲ್ಲಿ ಎರಡು ವಿಧದ ಪುರುಷರು/ವ್ಯಕ್ತಿಗಳು ಸೂರ್ಯಮಂಡಲವನ್ನೂ ದಾಟಿ, ಅದರಾಚೆಗಿನ ಅತ್ಯುನ್ನತ ಸ್ಥಾನವನ್ನೇರುತ್ತಾರೆ(ಗೀತೆಯಲ್ಲಿ ಹೇಳಿದ ದೇವಯಾನ ಮಾರ್ಗ). ಯೋಗಸ್ಥನಾದ ಪರಿವ್ರಾಜಕ/ಸಂನ್ಯಾಸಿ ಹಾಗೂ ರಣರಂಗದಲ್ಲಿ ಯುದ್ಧಮಾಡುತ್ತಾ ಸತ್ತ ವೀರಯೋಧ - ಇವರೇ ಆ ಇಬ್ಬರು ವ್ಯಕ್ತಿಗಳು._
🌴🌴🌴🌴🌴🌴🌴🌴🌴🌴🌴🌴🌴🌴🌴🌴🌴🌴🌴
🌸🌸🌸 *पराशरस्मृति:* 🌸🌸🌸
*यत्र यत्र हत: शूर: शत्रुभि: परिवेष्टित:।*
*अक्षयान् लभते लोकान् यदि क्लीबं न भाषते॥३१॥*
_ಎಲ್ಲಿಯಾದರೂ ಸರಿ, ಶೂರನು ಯಾವುದೇ ರಣಹೇಡಿಯಂತೆ ಮಾತನಾಡದೆ, ವೀರಾವೇಶದಿಂದ ಕಾದಾಡುತ್ತಿರುವಾಗ, ಶತ್ರುಗಳಿಂದ ಆವರಿಸಲ್ಪಟ್ಟು ಕೊಲ್ಲಲ್ಪಟ್ಟರೆ, ಅಂಥವನು ಎಂದೆಂದಿಗೂ ಕ್ಷಯಿಸದಂತಹ ಪುಣ್ಯಲೋಕಗಳನ್ನು ಹೊಂದುತ್ತಾನೆ._
💐💐💐💐💐💐💐💐💐💐💐💐💐💐💐💐💐💐💐
🍏🍎🍊 *पराशरस्मृति:* 🍏🍎🍊
*संन्यस्तं ब्राह्मणं दृष्ट्वा स्थानाच्चलति भास्कर:।*
*एष मे मण्डलं भित्त्वा परं स्थानं प्रयास्यति॥३-३२॥*
_ಸರ್ವಸಂಗಪರಿತ್ಯಾಗಿಯಾದ ಬ್ರಾಹ್ಮಣನನ್ನು ಕಂಡು ಸೂರ್ಯನು ಸ್ವಸ್ಥಾನದಿಂದ ಮುಂದೆ ಮುಂದೆ ಚಲಿಸುತ್ತಾನೆ. ಏಕೆಂದರೆ, "ಇವನು(ಈ ಬ್ರಾಹ್ಮಣ ಸಂನ್ಯಾಸಿಯು) ನನ್ನ ಸೌರಮಂಡಲವನ್ನು ಭೇದಿಸಿ, ಅದರಾಚೆಗಿನ ಪರಮ ಪದದಲ್ಲಿ ನೆಲೆ ನಿಲ್ಲುವನು" ಎಂಬ ಭೀತಿ ಅವನಿಗೆ._
🍐🍋🍌🍉🍇🍓🍈🍒🍑🍍🍅🍆🌶🌽🍠🍞🧀🍪🍩🍭🍬
🌺🌺🌺🌺 *पराशरस्मृति:* 🌺🌺🌺🌺
*यस्तु भग्नेषु सैन्येषु विद्रवत्सु समन्तत:।*
*परित्राता यदा गच्छेत् स च क्रतुफलं लभेत्॥३-३३॥*
_ರಣರಂಗದಲ್ಲಿ ಯುದ್ಧನಿರತನಾಗಿರುವಾಗ, ಓರ್ವನ ಸೇನೆಯು ಸೋತು, ಎಲ್ಲೆಡೆಯಿಂದಲೂ ಕರಗಿ/ಚದುರಿ ಹೋದರೆ, ಆ ಸಂದರ್ಭದಲ್ಲಿ ಯಾವನೋ ಒಬ್ಬ ಆಪ್ತರಕ್ಷಕನಂತೆ ಬಂದು ಆತನನ್ನು ವಿಪತ್ತಿನಿಂದ ರಕ್ಷಿಸಿದರೆ, ರಕ್ಷಕನು ಸಮ್ಯಕ್ ದೀಕ್ಷಿತನಾಗಿ(ಸರಿಯಾಗಿ, ಕ್ರಮಬದ್ಧವಾಗಿ) ನಡೆಸಲ್ಪಡುವ ಯಜ್ಞದ ಫಲವೆಷ್ಟೋ, ಅದನ್ನು ಪಡೆಯುತ್ತಾನೆ._
🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸
यस्य छेदक्षतं गात्रं शरमुद्गरयष्टिभिः ।
देवकन्यास्तु तं वीरं हरन्ति रमयन्ति च ।।३-३४।।
पदविभागः-
यस्य, छेद-क्षतम्, गात्रम्, शर-मुद्गर-यष्टिभिः, देवकन्याः, तु , तम्, वीरम्, हरन्ति, रमयन्ति, च ।।
अन्वयार्थः-
यस्य - यस्य युद्धनिरतस्य योधस्य - ಯಾವ ಯುದ್ಧದಲ್ಲಿ ತೊಡಗಿರುವ ಯೋಧನ,
गात्रम् - शरीरम् / देहः / देहम् / कायः - ಶರೀರವು,
शर-मुद्गर-यष्टिभिः - बाण / इषु / सायक / विशिख (शर) - लोष्टभेदन / लोष्टघ्न / लोष्टुघ्न / कोटिशः / कोटीशः (मुद्गर)- वंशादिमयदण्ड / लोहमयदण्ड / भार्गी (यष्टि)- इत्यादिभिः शस्त्रैः - ಬಾಣ - ಹಾರೆ/ಗುದ್ದಲಿ/ಪಿಕಾಸು - ದಂಡ/ಈಟಿ/ಭರ್ಚಿ - ಇತ್ಯಾದಿ ಆಯುಧಗಳಿಂದ,
छेद-क्षतम् - छेद्यमानम् इव व्रणितम् - ತುಂಡರಿಸುವಂತೆ ಗಾಯಗೊಳಿಸಲ್ಪಡುವುದೋ,
तं वीरं तु - तादृशं धीरं / शूरम् तु (अत्र तु-शब्दः प्रशंसावाचि) - ಅಂತಹ ವೀರನನ್ನಾದರೋ ( ಇಲ್ಲಿ ತು-ಶಬ್ದವು ಹೊಗಳಿಕೆಯನ್ನು ಹೇಳುವಂಥದ್ದು),
देवकन्याः - गन्धर्वाप्सरादिसुरकन्निकाः - ಗನ್ಧರ್ವ-ಅಪ್ಸರಾದಿ ದೇವಲೋಕದ ಕನ್ನಿಕೆಯರು,
हरन्ति - अपहरन्ति / नयन्ति - ತಮ್ಮೊಂದಿಗೆ ಕರೆದೊಯ್ಯುತ್ತಾರೆ,
रमयन्ति च - तथा तस्मिन् योधे आनन्दं जनयन्ति - ಮತ್ತು / ಹಾಗೆಯೇ, ಆ ಯೋಧನಲ್ಲಿ ಆನಂದವನ್ನುಂಟುಮಾಡುತ್ತಾರೆ, ಅವನನ್ನು ಖುಷಿಪಡಿಸುತ್ತಾರೆ.
ಇದಕ್ಕೇ ಇರಬೇಕು ಯುದ್ಧರಂಗದಲ್ಲಿ ಮಡಿದವರಿಗೆ ವೀರಸ್ವರ್ಗ ಎಂದಿರುವುದು.
Comments
Post a Comment