೪-೨. ಸತ್ಯ
ಅತಿ ಪ್ರಾಚೀನಕಾಲದಿಂದಲೂ ಸತ್ಯವನ್ನು ಎಲ್ಲಕ್ಕೂ ಮಿಗಿಲಾದುದೆಂದು ಹೇಳಲಾಗಿದೆ.
೧) ಸುವಿಜ್ಞಾನಂ ಚಿಕಿತುಷೇ ಜನಾಯ
ಸಚ್ಚಾಸಚ್ಚ ವಚಸೀ ಪಸ್ಪೃಧಾತೇ |
ತಯೋರ್ಯತ್ಸತ್ಯಂ ಯತರದೃಜೀಯ-
-ಸ್ತದಿತ್ಸೋಮೋऽವತಿ ಹನ್ತ್ಯಸತ್ ||
(ಋಗ್ವೇದ ೭.೧೦೪.೧೨)
ಶ್ರೇಷ್ಠವಾದ ವಿಶೇಷಜ್ಞಾನವು (ಬ್ರಹ್ಮಾತ್ಮಜ್ಞಾನವು / ಜೀವೇಶ್ವರಜಗದ್ವಿಜ್ಞಾನವು), ಪ್ರಾಜ್ಞರನ್ನೂ ಭ್ರಮೆಗೀಡಾಗುವಂತಹ ರೀತಿಯಲ್ಲಿ ಪರಸ್ಪರ ಸ್ಪರ್ಧಿಸುತ್ತಿರುವಂತಿರುವ ಸತ್ಯ ಹಾಗೂ ಅಸತ್ಯ ರೀತಿಯ ವರ್ಣನೆಗಳಿಂದ ಸತ್ಯವನ್ನು ತಪ್ಪಾಗಿ ಅರ್ಥೈಸುವಂತೆ ಬಹುವಿಧವಾದ ಸಿದ್ಧಾಂತಾದಿಗಳಿಂದ ವಿವರಿಸಲ್ಪಡುತ್ತದೆ. ಇಂತಹ ಸತ್ಯ-ಅಸತ್ಯಗಳೆರಡರಲ್ಲಿ ಯಾವುದು ಸತ್ಯವೂ ಋಜುವೂ / ಋಜೀಯವೂ (ಆರ್ಜವವೂ, ಸರಳವೂ, ನೇರವೂ, ವಕ್ರವಲ್ಲದ್ದೂ, ಕಪಟವಿಲ್ಲದ್ದೂ) ಆದ ವಿವರಣೆಯಿರುವುದೋ ಅದನ್ನೇ ಸೋಮಾತ್ಮಕ ಪರಮಾತ್ಮನು ರಕ್ಷಿಸುತ್ತಾನೆ; ಅಸತ್ಯವನ್ನು ನಾಶಮಾಡುತ್ತಾನೆ.
ಋಗ್ವೇದದಲ್ಲಿ ಋತದ ಕಲ್ಪನೆ ಮಹೋನ್ನತವಾದದ್ದು; ಇದು ಅನಂತರದ ಧರ್ಮದ ನಿಯಮಗಳ ಸಿದ್ಧಾಂತಗಳ ಬೀಜರೂಪವಾದದ್ದು. ಆದ್ದರಿಂದ ಶತಪಥಬ್ರಾಹ್ಮಣವು "ಮನುಷ್ಯನು ಸತ್ಯವನ್ನೇ ಹೇಳಬೇಕು; ಸುಳ್ಳು ಹೇಳಿದರೆ ಆತನು ಅಪವಿತ್ರನಾಗುತ್ತಾನೆ " ಎಂದು ವಿಧಿಸಿದೆ.
೨) ಅಮೇಧ್ಯೋ ವೈ ಪುರುಷೋ ಯದನೃತಂ ವದತಿ
(ಶತಪಥಬ್ರಾಹ್ಮಣ ೧.೧.೧.೧)
ಸುಳ್ಳಾಡುವ ಮನುಷ್ಯನು ಗೌರವಾರ್ಹನಲ್ಲ.
೩) ಸ ವೈ ಸತ್ಯಮೇವ ವದೇತ್
(ಶ.ಬ್ರಾ. ೧.೧.೧.೫)
ಅವನು (ಮನುಷ್ಯನು) ಸತ್ಯವನ್ನೇ ಹೇಳಬೇಕು.
೪) ಸತ್ಯಮೇವ ದೇವಾಃ |
(ಶತಪಥಬ್ರಾಹ್ಮಣ ೧.೧.೧.೪)
ದೇವತೆಗಳೆಂದರೆ ಸತ್ಯವೇ.
೫) ಸತ್ಯಂ ಬ್ರಹ್ಮೇತ್ಯುಪಾಸೀತ |
(ಶತಪಥಬ್ರಾಹ್ಮಣ ೧೦.೪.೫.೨)
ಸತ್ಯವನ್ನೇ ಬ್ರಹ್ಮವೆಂದು ಉಪಾಸಿಸಬೇಕು.
೬) ಅನೃತಾತ್ ಸತ್ಯಮುಪೈಮಿ | ಮಾನುಷಾದ್ದೈವಮುಪೈಮಿ |
(ತೈತ್ತಿರೀಯಬ್ರಾಹ್ಮಣ ೧.೨.೧)
ಸುಳ್ಳಿನಿಂದ ಸತ್ಯದೆಡೆಗೆ ಹೋಗುವೆ; ಮನುಜತೆಯಿಂದ ದೇವತ್ವದೆಡೆಗೆ ಸಾಗುವೆ.
೭) ಸತ್ಯಂ ಪ್ರಪದ್ಯೇ |
(ತೈತ್ತಿರೀಯಬ್ರಾಹ್ಮಣ ೩.೫.೧)
ಸತ್ಯಕ್ಕೆ (ಪರಮ ಅಸ್ತಿತ್ತ್ವ / ಸತ್ತೆ / ಇರುವಿಕೆಗೆ) ಶರಣಾಗುವೆ. ಸತ್ಯವನ್ನೇ ಆಶ್ರಯಿಸಿರುವೆ.
೮) ಸತ್ಯಂ ಮ ಆತ್ಮಾ | ...ಸತ್ಯಮಸ್ಮಿ |
(ತೈತ್ತಿರೀಯಬ್ರಾಹ್ಮಣ ೩.೭.೭)
ಸತ್ಯವು ನನ್ನ ಆತ್ಮ, ಮೂಲಪ್ರೇರಕಶಕ್ತಿ. ನಾನು ಸತ್ಯವೇ ಆಗಿರುವೆ, ಸತ್ಯಸ್ವರೂಪಿಯೇ ಆಗಿರುವೆ, ಸತ್-ಚಿತ್-ಆನಂದಸ್ವರೂಪನಾಗಿರುವೆ.
೯) ಅನೃತಂ ನ ವದೇತ್ |
(ಐತರೇಯಾರಣ್ಯಕ ೨.೩.೬)
ಸುಳ್ಳನ್ನು ಹೇಳಬಾರದು.
೧೦) ಅನೃತಾದಾತ್ಮಾನಂ ಜುಗುಪ್ಸೇತ್ |
(ತೈತ್ತಿರೀಯಾರಣ್ಯಕ ೧೦.೯)
ಸುಳ್ಳಿಗೆ ಅಸಹ್ಯಪಡಬೇಕು.
೧೧) ಸತ್ಯೇ ಸರ್ವಂ ಪ್ರತಿಷ್ಠಿತಮ್ | ತಸ್ಮಾತ್ಸತ್ಯಂ ಪರಮಂ ವದನ್ತಿ |
(ತೈತ್ತಿರೀಯಾರಣ್ಯಕ ೧೦.೬೩)
ಸತ್ಯದಲ್ಲಿಯೇ ಎಲ್ಲವೂ ನೆಲೆಸಿದೆ. ಆದುದರಿಂದ ಸತ್ಯವನ್ನು ಶ್ರೇಷ್ಠವೆನ್ನುವರು.
೧೨) ಯೋ ವೈ ಸ ಧರ್ಮೋ ವ್ಯವಹಾರಲಕ್ಷಣೋ ಲೌಕಿಕೈಃ ವ್ಯವಹ್ರಿಯಮಾಣಃ ಸತ್ಯಂ ವೈ ತತ್ | ಸತ್ಯಮಿತಿ ಯಥಾಶಾಸ್ತ್ರಾರ್ಥತಾ | ಸ ಏವ ಅನುಷ್ಠೀಯಮಾನೋ ಧರ್ಮನಾಮಾ ಭವತಿ | ಶಾಸ್ತ್ರಾರ್ಥತ್ವೇನ ಜ್ಞಾಯಮಾನಃ ತು ಸತ್ಯಂ ಭವತಿ ||
(ಬೃಹದಾರಣ್ಯಕೋಪನಿಷತ್ ೧ | ೪.೧೪, ಶಾಂಕರಭಾಷ್ಯ)
೧೩) ಋತಮುಗ್ರಂ ಸತ್ಯಂ ಬೃಹತ್ |
(ಅಥರ್ವವೇದ ೧೨ | ೧.೧)
೧೪) ಯತ್ ಸತ್ಯಂ ತದ್ ದೃಶ್ಯತಾಮ್ |
(ಅಶ್ವಲಾಯನಗೃಹ್ಯಸೂತ್ರ ೧.೫.೫)
೧೫) ತೈತ್ತಿರೀಯೋಪನಿಷತ್ ನಲ್ಲಿ ಸಮಾವರ್ತನ ಸಂಸ್ಕಾರದ ಸಂದರ್ಭದಲ್ಲಿ ಗುರುವು ಶಿಷ್ಯನಿಗೆ ಹೇಳುವ ಮಾತಿದು—
ವೇದಮ್ ಅನೂಚ್ಯ ಆಚಾರ್ಯೋ ಅನ್ತೇವಾಸಿನಮ್ ಅನುಶಾಸ್ತಿ | ಸತ್ಯಂ ವದ | ಧರ್ಮಂ ಚರ |
(ತೈ.ಉ.೧.೧೧.೧)
೧೬) ಛಾಂದೋಗ್ಯೋಪನಿಷತ್ (೩.೧೭) ನಲ್ಲಿ ಯಾವುದೇ ವೇದೋಕ್ತಕರ್ಮದ ಕೊನೆಗೆ ಋತ್ವಿಜರಿಗೆ ಹಾಗೂ ಗುರುಕುಲವಾಸದ ಕೊನೆಗೆ ಗುರುವಿಗೆ ಕೊಡಲಾಗುವ ದಕ್ಷಿಣೆಯು ೫ ವಿಧವೆನ್ನಲಾಗಿದೆ— (ಪರಿಶುದ್ಧತೆ, ಆತ್ಮನಿಯಂತ್ರಣ, ನಿರ್ಲಿಪ್ತತೆ, ಸತ್ಯ ಹಾಗೂ ಅಹಿಂಸೆಗಳೆಂಬ) ೫ ಗುಣವಿಶೇಷಗಳಿರುವ ತಪಸ್ಸು, ದಾನ, ಆರ್ಜವ (ಸರಳತೆ, ನಿಷ್ಕಪಟತೆ), ಅಹಿಂಸೆ ಹಾಗೂ ಸತ್ಯವಚನ ಎಂಬುದಾಗಿ.
೧೭) ಬೃಹದಾರಣ್ಯಕೋಪನಿಷತ್ತು ವ್ಯಾವಹಾರಿಕ ಜೀವನದಲ್ಲಿ ಸತ್ಯ-ಧರ್ಮಗಳೆರಡೂ ಸಮಾನವೆಂದಿದೆ.
ತಸ್ಮಾತ್ ಸತ್ಯಂ ವದನ್ತಮ್ ಆಹುಃ ಧರ್ಮಂ ವದತಿ ಇತಿ ಧರ್ಮಂ ವಾ ವದನ್ತಂ ಸತ್ಯಂ ವದತಿ ಇತಿ ಏತತ್ ಹಿ ಏವ ಏತತ್ ಉಭಯಂ ಭವತಿ ||
(ಬೃಹದಾರಣ್ಯಕೋಪನಿಷತ್ ೧.೪.೧೪)
೧೮) ತದೇತಾನಿ ಜಪೇತ್ ಅಸತೋ ಮಾ ಸದ್ಗಮಯ ತಮಸೋ ಮಾ ಜ್ಯೋತಿರ್ಗಮಯ ಮೃತ್ಯೋರ್ಮಾ ಅಮೃತಂ ಗಮಯ ಇತಿ ||
(ಬೃಹ.ಉಪ. ೧.೩.೨೮)
೧೯) ಸತ್ಯೇನ ಲಭ್ಯಸ್ತಪಸಾ ಹ್ಯೇಷ ಆತ್ಮಾ
ಸಮ್ಯಗ್-ಜ್ಞಾನೇನ ಬ್ರಹ್ಮಚರ್ಯೇಣ ನಿತ್ಯಮ್ |
ಅನ್ತಶ್ಶರೀರೇ ಜ್ಯೋತಿರ್ಮಯೋ ಹಿ
ಶುಭ್ರೋ ಯಂ ಪಶ್ಯನ್ತಿ ಯತಯಃ ಕ್ಷೀಣದೋಷಾಃ ||
(ಮುಂಡಕೋಪನಿಷತ್ ೩.೫)
೨೦) ಸತ್ಯಮೇವ ಜಯತೇ ನಾನೃತಂ
ಸತ್ಯೇನ ಪನ್ಥಾ ವಿತತೋ ದೇವಯಾನಃ |
ಯೇನಾಕ್ರಮನ್ತಿ ಋಷಯೋ ಹ್ಯಾಪ್ತಕಾಮಾಃ
ಯತ್ರ ತತ್ ಸತ್ಯಸ್ಯ ಪರಂ ನಿಧಾನಮ್ ||
(ಮುಂಡಕೋಪನಿಷತ್ ೩.೬)
೨೧) ಅನುದ್ವೇಗಕರಂ ವಾಕ್ಯಂ
ಸತ್ಯಂ ಪ್ರಿಯಹಿತಂ ಚ ಯತ್ |
ಸ್ವಾಧ್ಯಾಯಾಭ್ಯಸನಂ ಚೈವ
ವಾಙ್ಮಯಂ ತಪ ಉಚ್ಯತೇ ||
(ಗೀತೆ ೧೭.೧೫)
೨೨) ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್
ನ ಬ್ರೂಯಾತ್ ಸತ್ಯಮಪ್ರಿಯಮ್ |
ಪ್ರಿಯಂ ಚ ನಾನೃತಂ ಬ್ರೂಯಾತ್ (/ ನಾಸತ್ಯಂ ಚ ಪ್ರಿಯಂ ಬ್ರೂಯಾತ್)
ಏಷ ಧರ್ಮಃ ಸನಾತನಃ ||
(ಮನುಸ್ಮೃತಿ ೪.೧೩೮)
೨೩) ಸತ್ಯವದನಮೇವ ವಾ |
(ಪಾರಸ್ಕರ ಹಾಗೂ ಕಾತ್ಯಾಯನ ಗೃಹ್ಯಸೂತ್ರ ೨ |೧೦.೮)
ಸ್ನಾತಕವ್ರತವನ್ನು ನಿರೂಪಿಸುವಾಗ ಈ ಸೂತ್ರಗಳು ಸತ್ಯವಚನವೊಂದೇ ಸಕಲಾನುಷ್ಠಾನಸಾಧಕವೆನಿಸುತ್ತವೆ.
೨೪) ಅಷ್ಟೇಕೆ, ಜಾತಕರ್ಮದ ಕಾಲದಲ್ಲಿ ತಂದೆಯು ಮಗುವಿಗೆ "ಸತ್ಯವನ್ನು (ಎದೆಹಾಲಿನಂತೆ ಹೀರುತ್ತಾ) ಕುಡಿ. (ಸತ್ಯದಿಂದಲೇ ಪುಷ್ಟನಾಗಿ ಬೆಳೆ)" ಎನ್ನಬೇಕೆಂದಿದೆ. ಪೂರ್ಣಪಾಠ ಹೀಗಿದೆ—
ಆಯುರ್ಧಯ ಜರಾಂ ಧಯ ಸತ್ಯಂ ಧಯ ಶ್ರಿಯಂ ಧಯ ಊರ್ಜಂ ಧಯ ರಾಯಸ್ಪೋಷಂ ಧಯ ಬ್ರಹ್ಮವರ್ಚಸಂ ಧಯ |
(ಜಾತಕರ್ಮದ ಮಂತ್ರ)
ಸರ್ವಜ್ಞ ತನ್ನ ವಚನಗಳಲ್ಲಿ ಸತ್ಯಪ್ರಶಂಸೆಯನ್ನು ಹೀಗೆ ಮಾಡಿದ್ದಾನೆ—
೨೫) ಅನ್ನವನು ಇಕ್ಕುವುದು | ನನ್ನಿಯನು ನುಡಿಯುವುದು |
ತನ್ನಂತೆ ಪರರ ಬಗೆದಡೆ | ಕೈಲಾಸ
ಬಿನ್ನಾಣವಕ್ಕು! ಸರ್ವಜ್ಞ ||
೨೬) ಸತ್ಯನುಡಿದತ್ತರೂ | ಸುತನೊಬ್ಬ ಸತ್ತರೂ |
ಸತ್ಯವನು ಬಿಡದ
ಹರಿಚಂದ್ರ ಜಗದೊಳಗೆ |
ಸ್ತುತ್ಯನಾಗಿಹನು! ಸರ್ವಜ್ಞ ||
೨೭) ಸತ್ಯವೆಂಬುದು ತಾನು | ನಿತ್ಯದಲಿ ಮೆರೆದಿಹುದು |
ಮಿಥ್ಯಸತ್ಯವನು
ಬೆರೆದರೂ ಇಹಪರದಿ |
ಸತ್ಯಕ್ಕೆ ಜಯವು! ಸರ್ವಜ್ಞ ||
೨೮) ಸತ್ಯರಿಗೆ ಧರೆಯೆಲ್ಲ | ಮಸ್ತಕವನೆರಗುವುದು |
ಹೆತ್ತ ತಾಯ್ಮಗನ ಕರೆವಂತೆ | ಶಿವನವರ
ನೆತ್ತಿಕೊಂಬುವನು! ಸರ್ವಜ್ಞ ||
೨೯) ಸತ್ಯಕ್ಕೆ ಸರಿಯಿಲ್ಲ | ಮಿಥ್ಯಕ್ಕೆ ನೆಲೆಯಿಲ್ಲ |
ಹೆತ್ತಮ್ಮನಿಂದ ಹಿತರಿಲ್ಲ | ನರರೊಳಗೆ
ನಿತ್ಯರೇ ಇಲ್ಲ! ಸರ್ವಜ್ಞ ||
೩೦) ಮಾತಿಂಗೆ ಮಾತುಗಳು | ಓತು ಸಾಸಿರವುಂಟು |
ಮಾತಾಡಿದಂತೆ ನಡೆದಾತ | ಜಗವನ್ನು
ಕೂತಲ್ಲಿ ಆಳ್ವ! ಸರ್ವಜ್ಞ ||
೩೧) ಸತ್ಯವಂತರ ನೀನು | ಸತ್ತರೆಂದೆನಬೇಡ |
ಹೆತ್ತಮ್ಮ ಮಗನ ಕರೆವಂತೆ | ನಿನ್ನನವ
ರೆತ್ತಿಕೊಂಬುವರು! ಸರ್ವಜ್ಞ ||
೩೨) ಸತ್ಯರಾನುಡಿ ತೀರ್ಥ | ನಿತ್ಯರಾನಡೆ ತೀರ್ಥ |
ಉತ್ತಮರ ಸಂಗವದು ತೀರ್ಥ | ಹರಿವ ನೀ-
-ರೆತ್ತಣದು ತೀರ್ಥ? ಸರ್ವಜ್ಞ ||
೩೩) ಸತ್ಯರಾ ಒಡನಾಡ | ಮತ್ತೆ ಸಕ್ಕರೆ ತುಪ್ಪ!
ಸತ್ಯವಿಲ್ಲದವರ ಒಡನಾಟ | ಬೇಲಿಯಾ
ಒತ್ತಿಯಂತಿಹುದು! ಸರ್ವಜ್ಞ ||
೩೪) ಉತ್ತಮರು ಎಂಬುವರು ಸತ್ಯದಲಿ ನಡೆದಿಹರು
ಉತ್ತಮರನಧಮರೆನಬೇಡ | ಅವರೊಂದು
ಮುತ್ತಿನಂತಿಹರು! ಸರ್ವಜ್ಞ ||
೩೫) " ಮಾತನಾಡಬೇಕಾದರೆ ಸತ್ಯವನ್ನೇ ಮಾತಾಡು. ಕೊಟ್ಟ ಮಾತನ್ನು ಅಕ್ಷರಶಃ ಪಾಲಿಸು. ವಿಶ್ವಾಸಘಾತ ಮಾಡಬೇಡ. ಸುಳ್ಳು ಹೇಳುವ ಮನುಷ್ಯ ನನ್ನವನಲ್ಲ; ಆತನು ನನಗೆ ಒಳಗೊಳಗೆ ಮೋಸ ಮಾಡುತ್ತಿದ್ದಾನೆಂದು ತಿಳಿ. "
(ಪ್ರವಾದಿ ಮಹಮ್ಮದ್ ಪೈಗಂಬರ್)
೩೬) " ದೇವರು ಮೂಲತಃ ಸತ್ಯಸ್ವರೂಪ. ಹಿಂದೆಯೂ ಸತ್ಯಸ್ವರೂಪನಾಗಿದ್ದ; ಮುಂದೆಯೂ ಹಾಗೆಯೇ ಇರುತ್ತಾನೆ; ಇಂದೂ ಕೂಡ ಹಾಗೆಯೇ ಇದ್ದಾನೆ. ಸತ್ಯವನ್ನು ಪಡೆಯುವುದೆಂತು? ಸುಳ್ಳಿನ ಮೋಡಗಳನ್ನು ಚದುರಿಸುವುದು ಹೇಗೆ? ಅದಕ್ಕೊಂದು ದಾರಿಯಿದೆ. ದೇವರ ಇಚ್ಛೆಯೇ ನಿನ್ನ ಇಚ್ಛೆಯೆಂದು ತಿಳಿ. (ಇಸ್ಲಾಂ ಎಂದರೂ ಭಗವಂತನ ಇಚ್ಛೆಗೆ ಶರಣಾಗುವುದೆಂದರ್ಥ) ನಿನಗೆ ಪ್ರತ್ಯೇಕ ಇಚ್ಛೆ ಇದೆಯೆಂದು ಯೋಚಿಸಲೇಬೇಡ. ನಮ್ಮ ಅಸ್ತಿತ್ವದ ಮೂಲಕ ವಸ್ತುತಃ ಆತನ ಇಚ್ಛೆಯೇ ಪ್ರತಿಬಿಂಬಿಸುವುದು. "
(ಸಿಖ್ಖರ ಗುರು ನಾನಕದೇವ)
೩೭) ಸತ್ಯೇನ ಧಾರ್ಯತೇ ಪೃಥ್ವೀ
ಸತ್ಯೇನ ತಪತೇ ರವಿಃ |
ಸತ್ಯೇನ ವಾಯವೋ ವಾನ್ತಿ
ಸರ್ವಂ ಸತ್ಯೇ ಪ್ರತಿಷ್ಠಿತಮ್ ||
(ಕೌಟಿಲ್ಯ)
೩೮) " ಸಾಮೂಹಿಕ ಮಿಥ್ಯಾಚಾರ ಸರ್ವನಾಶದಲ್ಲಿ ಮುಕ್ತಾಯವಾಗುತ್ತದೆ. "
೩೯) ನ ಸತ್ಯವ್ರತಭಂಗೇನ
ಕಾರ್ಯಂ ಧೀಮಾನ್ ಪ್ರಸಾಧಯೇತ್ |
ದದರ್ಶ ನರಕಕ್ಲೇಶಂ
ಸತ್ಯನಾಶಾತ್ ಯುಧಿಷ್ಠಿರಃ ||
(ಕ್ಷೇಮೇಂದ್ರಕವಿಯ ಚಾರುಚರ್ಯೆ ೧೪)
೪೦) ನಾಸ್ತಿ ಸತ್ಯಾತ್ ಪರಂ ತಪಃ || ೪೮ ||
(ಚಾಣಕ್ಯನೀತಿಸೂತ್ರಗಳು, ಅಧ್ಯಾಯ ೬, ಪ್ರಕರಣ ೮)
೪೧) ಸತ್ಯಂ ಸ್ವರ್ಗಸ್ಯ ಸಾಧನಾ || ೪೯ ||
೪೨) ಸತ್ಯೇನ ಧಾರ್ಯತೇ ಲೋಕಃ || ೫೦ ||
೪೩) ಸತ್ಯಾದ್ದೇವೋ ವರ್ಷತಿ || ೫೧ ||
೪೪) ನಾನೃತಾತ್ ಪಾತಕಂ ಪರಾ || ೫೨ ||
(ಅನೃತೇನ ಹಿ ಪ್ರತ್ಯೂಢಾಃ, ಅನೃತಾತ್ ಸತ್ಯಮುಪೈಮಿ— ಉಪನಿಷತ್)
(ಚಾಣಕ್ಯನೀತಿಸೂತ್ರಗಳು, ಅಧ್ಯಾಯ ೬, ಪ್ರಕರಣ ೯, ಸೂತ್ರಗಳು ೪೯—)
೪೫) ಸತ್ಯಮಪಿ ಅಶ್ರದ್ಧೇಯಂ ನ ವದೇತ್ |
(ಚಾಣಕ್ಯನೀತಿಸೂತ್ರಗಳು, ಅಧ್ಯಾಯ ೩, ಪ್ರಕರಣ ೧, ಸೂತ್ರ ೨)
೪೬) ಸತ್ಯೇನ ಉತ್ತಭಿತಾ ಭೂಮಿಃ |
(ಋಕ್ಸಂಹಿತೆ ೧೦ | ೮೫.೧)
ಸತ್ಯದಿಂದ ಭೂಮಿಯು ಮೇಲೆತ್ತಿಹಿಡಿಯಲ್ಪಟ್ಟಿದೆ / ಧರಿಸಲ್ಪಟ್ಟಿದೆ.
೪೭) ದೇಹಿ...ನೋऽದ್ರೋಘೇಣ ವಚಸಾ ಸತ್ಯಮಗ್ನೇ |
(ಋಕ್ಸಂಹಿತೆ ೩ | ೧೪.೬)
ಅಗ್ನಿಯೇ! ಕಪಟವಿಲ್ಲದ ಮಾತಿನೊಡನೆ ಸತ್ಯಶೀಲತೆಯನ್ನು ನೀಡು.
೪೮) ಸತ್ಯಂ ದೀಕ್ಷಾ | ತಸ್ಮಾದ್ದೀಕ್ಷಿತೇನ ಸತ್ಯಮೇವ ವದಿತವ್ಯಮ್ |
(ಐತರೇಯಬ್ರಾಹ್ಮಣ ೧.೧.೬)
ಸತ್ಯವೇ ದೀಕ್ಷೆ. ಆದುದರಿಂದ ದೀಕ್ಷಿತನಾದವನು ಸತ್ಯವನ್ನೇ ನುಡಿಯಬೇಕು.
೪೯) ಸೂನೃತಮೇವ ತದ್ಯಜ್ಞಮ್ |
(ಐತರೇಯಬ್ರಾಹ್ಮಣ ೧.೫.೪)
ಸತ್ಯವೇ ಯಜ್ಞ.
೫೦) ಹರಿದಾಸರು ತಮ್ಮ ಕೀರ್ತನೆಗಳಲ್ಲಿ, "ಸತ್ಯವಂತರಿಗಿದು ಕಾಲವಲ್ಲ " ಎಂದು ಕಲಿಯುಗದ ಹೀನತೆಯನ್ನು ಬೊಟ್ಟುಮಾಡಿ ತೋರಿಸಿದ್ದಾರೆ. "ಸತ್ಯ ಹೇಳಿದವನು ಸತ್ತೇ ಹೋದಾನು " ಎಂಬ ವ್ಯಂಗ್ಯೋಕ್ತಿಯೂ ಈ ಕಾಲದಲ್ಲಿ ಇಲ್ಲದಿಲ್ಲ. ಆದರೆ ಜನಜನಿತವಾದ ಗಾದೆಮಾತಿನಂತೆ, "ಸತ್ಯಕ್ಕೆ ಜಯವಿದೆ " ಎಂಬುದಂತೂ ಅಂತಿಮವೂ, ಶಾಶ್ವತವೂ ಆದ ಸತ್ಯವೇ ಆಗಿರುವುದು.
ಮಹಾಭಾರತ ೧೨— ಶಾಂತಿಪರ್ವ ಅಧ್ಯಾಯ ೧೫೬ ಪೂರ್ತಿ, ಸತ್ಯದ ಮಹಿಮೆಯನ್ನು ಭೀಷ್ಮನು ಯುಧಿಷ್ಠಿರನಿಗೆ ಉಪದೇಶಿಸಿದ್ದಾನೆ. ಅದರ ಯಥಾರೂಪ ಇಲ್ಲಿದೆ—
೫೧) ಯುಧಿಷ್ಠಿರ ಉವಾಚ
ಸತ್ಯಂ ಧರ್ಮೇ ಪ್ರಶಂಸಂತಿ
ವಿಪ್ರರ್ಷಿಪಿತೃದೇವತಾಃ |
ಸತ್ಯಮಿಚ್ಛಾಮ್ಯಹಂ ಶ್ರೋತುಂ
ತನ್ಮೇ ಬ್ರೂಹಿ ಪಿತಾಮಹ || ೧ ||
೫೨) ಭೀಷ್ಮ ಉವಾಚ
ಸತ್ಯಂ ಕಿಂಲಕ್ಷಣಂ ರಾಜನ್
ಕಥಂ ವಾ ತದವಾಪ್ಯತೇ |
ಸತ್ಯಂ ಪ್ರಾಪ್ಯ ಭವೇತ್ಕಿಂ ಚ
ಕಥಂ ಚೈವ ತದುಚ್ಯತೇ || ೨ ||
೫೩) ಚಾತುರ್ವರ್ಣ್ಯಸ್ಯ ಧರ್ಮಾಣಾಂ
ಸಂಕರೋ ನ ಪ್ರಶಸ್ಯತೇ |
ಅವಿಕಾರಿತಮಂ ಸತ್ಯಂ
ಸರ್ವವರ್ಣೇಷು ಭಾರತ || ೩ ||
೫೪) ಸತ್ಯಂ ಸತ್ಸು ಸದಾ ಧರ್ಮಃ
ಸತ್ಯಂ ಧರ್ಮಃ ಸನಾತನಃ |
ಸತ್ಯಮೇವ ನಮಸ್ಯೇತ
ಸತ್ಯಂ ಹಿ ಪರಮಾ ಗತಿಃ || ೪ ||
೫೫) ಸತ್ಯಂ ಧರ್ಮಸ್ತಪೋ ಯೋಗಃ
ಸತ್ಯಂ ಬ್ರಹ್ಮ ಸನಾತನಮ್ |
ಸತ್ಯಂ ಯಜ್ಞಃ ಪರಃ ಪ್ರೋಕ್ತಃ
ಸತ್ಯೇ ಸರ್ವಂ ಪ್ರತಿಷ್ಠಿತಮ್ || ೫ ||
೫೬) ಆಚಾರಾನಿಹ ಸತ್ಯಸ್ಯ
ಯಥಾವದನುಪೂರ್ವಶಃ |
ಲಕ್ಷಣಂ ಚ ಪ್ರವಕ್ಷ್ಯಾಮಿ
ಸತ್ಯಸ್ಯೇಹ ಯಥಾಕ್ರಮಮ್ || ೬ ||
೫೭) ಪ್ರಾಪ್ಯತೇ ಹಿ ಯಥಾ ಸತ್ಯಂ
ತಚ್ಚ ಶ್ರೋತುಂ ತ್ವಮರ್ಹಸಿ |
ಸತ್ಯಂ ತ್ರಯೋದಶವಿಧಂ
ಸರ್ವಲೋಕೇಷು ಭಾರತ || ೭ ||
೫೮) ಸತ್ಯಂ ಚ ಸಮತಾ ಚೈವ
ದಮಶ್ಚೈವ ನ ಸಂಶಯಃ |
ಅಮಾತ್ಸರ್ಯಂ ಕ್ಷಮಾ ಚೈವ
ಹ್ರೀಸ್ತಿತಿಕ್ಷಾನುಸೂಯತಾ || ೮ ||
೫೯) ತ್ಯಾಗೋ ಧ್ಯಾನಮಥಾರ್ಯತ್ವಂ
ಧೃತಿಶ್ಚ ಸತತಂ ಸ್ಥಿರಾ |
ಅಹಿಂಸಾ ಚೈವ ರಾಜೇಂದ್ರ
ಸತ್ಯಾಕಾರಸ್ತ್ರಯೋದಶ || ೯ ||
೬೦) ಸತ್ಯಂ ನಾಮಾವ್ಯಯಂ ನಿತ್ಯಮ್
ಅವಿಕಾರಿ ತಥೈವ ಚ |
ಸರ್ವಧರ್ಮಾವಿರುದ್ಧಂ ಚ
ಯೋಗೇನೈತದವಾಪ್ಯತೇ || ೧೦ ||
೬೧) ಆತ್ಮನೀಷ್ಟೇ ತಥಾನಿಷ್ಟೇ
ರಿಪೌ ಚ ಸಮತಾ ತಥಾ |
ಇಚ್ಛಾದ್ವೇಷಕ್ಷಯಂ ಪ್ರಾಪ್ಯ
ಕಾಮಕ್ರೋಧಕ್ಷಯಂ ತಥಾ || ೧೧ ||
೬೨) ದಮೋ ನಾನ್ಯಸ್ಪೃಹಾ ನಿತ್ಯಂ
ಧೈರ್ಯಂ ಗಾಂಭೀರ್ಯಮೇವ ಚ |
ಅಭಯಂ ಕ್ರೋಧಶಮನಂ ಜ್ಞಾನೇನೈತದವಾಪ್ಯತೇ || ೧೨ ||
೬೩) ಅಮಾತ್ಸರ್ಯಂ ಬುಧಾಃ ಪ್ರಾಹುಃ
ದಾನಂ ಧರ್ಮೇ ಚ ಸಂಯಮಮ್ |
ಅವಸ್ಥಿತೇನ ನಿತ್ಯಂ ಚ
ಸತ್ಯೇನಾಮತ್ಸರೀ ಭವೇತ್ || ೧೩ ||
೬೪) ಅಕ್ಷಮಾಯಾಃ ಕ್ಷಮಾಯಾಶ್ಚ
ಪ್ರಿಯಾಣೀಹಾಪ್ರಿಯಾಣಿ ಚ |
ಕ್ಷಮತೇ ಸರ್ವತಃ ಸಾಧುಃ
ಸಾಧ್ವಾಪ್ನೋತಿ ಚ ಸತ್ಯವಾನ್ || ೧೪ ||
೬೫) ಕಲ್ಯಾಣಂ ಕುರುತೇ ಗಾಢಂ
ಹ್ರೀಮಾನ್ನ ಶ್ಲಾಘತೇ ಕ್ವಚಿತ್ |
ಪ್ರಶಾನ್ತವಾಙ್ಮನಾ ನಿತ್ಯಂ
ಹ್ರೀಸ್ತು ಧರ್ಮಾದವಾಪ್ಯತೇ || ೧೫ ||
೬೬) ಧರ್ಮಾರ್ಥಹೇತೋಃ ಕ್ಷಮತೇ
ತಿತಿಕ್ಷಾ ಕ್ಷಾನ್ತಿರುಚ್ಯತೇ |
ಲೋಕಸಂಗ್ರಹಣಾರ್ಥಂ ತು
ಸಾ ತು ಧೈರ್ಯೇಣ ಲಭ್ಯತೇ || ೧೬ ||
೬೭) ತ್ಯಾಗಃ ಸ್ನೇಹಸ್ಯ ಯಸ್ತ್ಯಾಗೋ
ವಿಷಯಾಣಾಂ ತಥೈವ ಚ |
ರಾಗದ್ವೇಷಪ್ರಹೀಣಸ್ಯ
ತ್ಯಾಗೋ ಭವತಿ ನಾನ್ಯಥಾ || ೧೭ ||
೬೮) ಆರ್ಯತಾ ನಾಮ ಭೂತಾನಾಂ
ಯಃ ಕರೋತಿ ಪ್ರಯತ್ನತಃ |
ಶುಭಂ ಕರ್ಮ ನಿರಾಕಾರೋ
ವೀತರಾಗತ್ವಮೇವ ಚ || ೧೮ ||
೬೯) ಧೃತಿರ್ನಾಮ ಸುಖೇ ದುಃಖೇ
ಯಥಾ ನಾಪ್ನೋತಿ ವಿಕ್ರಿಯಾಮ್ |
ತಾಂ ಭಜೇತ ಸದಾ ಪ್ರಾಜ್ಞೋ
ಯ ಇಚ್ಛೇದ್ಭೂತಿಮಾತ್ಮನಃ || ೧೯ ||
೭೦) ಸರ್ವಥಾ ಕ್ಷಮಿಣಾ ಭಾವ್ಯಂ
ತಥಾ ಸತ್ಯಪರೇಣ ಚ |
ವೀತಹರ್ಷಭಯಕ್ರೋಧೋ
ಧೃತಿಮಾಪ್ನೋತಿ ಪಂಡಿತಃ || ೨೦ ||
೭೧) ಅದ್ರೋಹಃ ಸರ್ವಭೂತೇಷು
ಕರ್ಮಣಾ ಮನಸಾ ಗಿರಾ |
ಅನುಗ್ರಹಶ್ಚ ದಾನಂ ಚ
ಸತಾಂ ಧರ್ಮಃ ಸನಾತನಃ || ೨೧ ||
೭೨) ಏತೇ ತ್ರಯೋದಶಾಕಾರಾಃ
ಪೃಥಕ್ಸತ್ಯೈಕಲಕ್ಷಣಾಃ |
ಭಜನ್ತೇ ಸತ್ಯಮೇವೇಹ
ಬೃಂಹಯನ್ತಿ ಚ ಭಾರತ || ೨೨ ||
೭೩) ನಾನ್ತಃ ಶಕ್ಯೋ ಗುಣಾನಾಂ ಹಿ
ವಕ್ತುಂ ಸತ್ಯಸ್ಯ ಭಾರತ |
ಅತಃ ಸತ್ಯಂ ಪ್ರಶಂಸಂತಿ
ವಿಪ್ರಾಃ ಸಪಿತೃದೇವತಾಃ || ೨೩ ||
೭೪) ನಾಸ್ತಿ ಸತ್ಯಾತ್ಪರೋ ಧರ್ಮೋ
ನಾನೃತಾತ್ಪಾತಕಂ ಪರಮ್ |
ಸ್ಥಿತಿರ್ಹಿ ಸತ್ಯಂ ಧರ್ಮಸ್ಯ
ತಸ್ಮಾತ್ಸತ್ಯಂ ನ ಲೋಪಯೇತ್ || ೨೪ ||
೭೫) ಉಪೈತಿ ಸತ್ಯಾದ್ದಾನಂ ಹಿ
ತಥಾ ಯಜ್ಞಾಃ ಸದಕ್ಷಿಣಾಃ |
ವ್ರತಾಗ್ನಿಹೋತ್ರಂ ವೇದಾಶ್ಚ
ಯೇ ಚಾನ್ಯೇ ಧರ್ಮನಿಶ್ಚಯಾಃ || ೨೫ ||
೭೬) ಅಶ್ವಮೇಧಸಹಸ್ರಂ ಚ
ಸತ್ಯಂ ಚ ತುಲಯಾ ಧೃತಮ್ |
ಅಶ್ವಮೇಧಸಹಸ್ರಾದ್ಧಿ
ಸತ್ಯಮೇವಾತಿರಿಚ್ಯತೇ || ೨೬ ||
(ಮಹಾಭಾರತ ೧೨— ಶಾಂತಿಪರ್ವ ಅಧ್ಯಾಯ ೧೫೬ ಪೂರ್ತಿ)
೭೭) ಸತ್ಯೇನ ರಕ್ಷ್ಯತೇ ಧರ್ಮೋ
ವಿದ್ಯಾऽಭ್ಯಾಸೇನ ರಕ್ಷ್ಯತೇ |
ಮೃಜ್ಯಯಾ ರಕ್ಷ್ಯತೇ ರೂಪಂ
ಕುಲಂ ವೃತ್ತೇನ ರಕ್ಷ್ಯತೇ ||
೭೮) ಸತ್ಯಮೇವ ವ್ರತಂ ಯಸ್ಯ
ದಯಾ ದೀನೇಷು ಸರ್ವದಾ |
ಕಾಮಕ್ರೋಧೌ ವಶೇ ಯಸ್ಯ
ಸ ಸಾಧುಃ ಕಥ್ಯತೇ ಬುಧೈಃ ||
೭೯) ನಾನೃತಾತ್ಪಾತಕಂ ಕಿಂಚಿತ್
ನ ಸತ್ಯಾತ್ಸುಕೃತಂ ಪರಮ್ |
ವಿವೇಕಾನ್ನ ಪರೋ ಬಂಧುಃ
ಇತಿ ವೇದವಿದೋ ವಿದುಃ ||
೮೦) ಅಗ್ನಿನಾ ಸಿಚ್ಯಮಾನೋऽಪಿ
ವೃಕ್ಷೋ ವೃದ್ಧಿಂ ನ ಚಾಪ್ನುಯಾತ್ |
ತಥಾ ಸತ್ಯಂ ವಿನಾ ಧರ್ಮಃ
ಪುಷ್ಟಿಂ ನಾಯಾತಿ ಕರ್ಹಿಚಿತ್ ||
೮೧) ಯೇ ವದನ್ತೀಹ ಸತ್ಯಾನಿ
ಪ್ರಾಣತ್ಯಾಗೇऽಪ್ಯುಪಸ್ಥಿತೇ |
ಪ್ರಮಾಣಭೂತಾ ಭೂತಾನಾಂ
ದುರ್ಗಾಣ್ಯತಿತರನ್ತಿ ತೇ ||
೮೨) ಸತ್ಯಹೀನಾ ವೃಥಾ ಪೂಜಾ
ಸತ್ಯಹೀನೋ ವೃಥಾ ಜಪಃ |
ಸತ್ಯಹೀನಂ ತಪೋ ವ್ಯರ್ಥಮ್
ಊಷರೇ ವಪನಂ ಯಥಾ ||
೮೩) ಭೂಮಿಃ ಕೀರ್ತಿರ್ಯಶೋ ಲಕ್ಷ್ಮೀಃ
ಪುರುಷಂ ಪ್ರಾರ್ಥಯನ್ತಿ ಹಿ |
ಸತ್ಯಂ ಸಮನುವರ್ತನ್ತೇ
ಸತ್ಯಮೇವ ಭಜೇತ್ ತತಃ ||
೮೪) ಸತ್ಯಂ ಸ್ವರ್ಗಸ್ಯ ಸೋಪಾನಂ
ಪಾರಾವರಸ್ಯ ನೌರಿವ |
ನ ಪಾವನತಮಂ ಕಿಂಚಿತ್
ಸತ್ಯಾದಭ್ಯಧಿಕಂ ಕ್ವಚಿತ್ ||
೮೫) ಸತ್ಯೇನ ಪೂಯತೇ ಸಾಕ್ಷೀ
ಧರ್ಮಃ ಸತ್ಯೇನ ವರ್ಧತೇ |
ತಸ್ಮಾತ್ ಸತ್ಯಂ ಹಿ ವಕ್ತವ್ಯಂ
ಸರ್ವವರ್ಣೇಷು ಸಾಕ್ಷಿಭಿಃ ||
೮೬) ತಸ್ಯಾಗ್ನಿರ್ಜಲಮರ್ಣವಃ ಸ್ಥಲಮರಿರ್ಮಿತ್ರಂ ಸುರಾಃ ಕಿಂಕರಾಃ
ಕಾನ್ತಾರಂ ನಗರಂ ಗಿರಿರ್ಗೃಹಮಹಿರ್ಮಾಲ್ಯಂ ಮೃಗಾರಿರ್ಮೃಗಃ |
ಪಾತಾಲಂ ಬಿಲಮಸ್ತ್ರಮುತ್ಪಲದಲಂ ವ್ಯಾಲಃ ಶೃಗಾಲೋ ವಿಷಂ
ಪೀಯೂಷಂ ವಿಷಮಂ ಸಮಂ ಚ ವಚನಂ ಸತ್ಯಾಂಚಿತಂ ವಕ್ತಿ ಯಃ ||
Comments
Post a Comment