Skip to main content

೪.೧. ಸಾಧಾರಣ (ಸಾಮಾನ್ಯ) ಧರ್ಮ— ಪೀಠಿಕೆ

೪-೧. ಸಾಧಾರಣ(ಸಾಮಾನ್ಯ)ಧರ್ಮ— ಪೀಠಿಕೆ
ಯಾವುದೇ ಕಾಲ-ದೇಶ-ಪಾತ್ರಾದಿ ಭೇದರಹಿತವಾಗಿ ಮಾನವನಾದವನು ಸಾರ್ಥಕ ಬದುಕಿಗಾಗಿ ಅನುಸರಿಸಬೇಕಾದ ಜೀವನಮೌಲ್ಯಗಳೇ ಈ "ಸಾಮಾನ್ಯ (ಸಾಧಾರಣ) ಧರ್ಮ ". ಇವನ್ನು ಬಿಟ್ಟು ಹಲವಾರು ಆಚಾರ-ವಿಚಾರಗಳು ಆಯಾ ದೇಶ-ಕಾಲ-ವರ್ಣಾದಿಗಳಿಗೆ ಮಾತ್ರ ಸಂಬಂಧಿಸಿದ ವಿಶಿಷ್ಟಧರ್ಮವಾಗಿರುತ್ತವೆ. 

ಈಗ ಮೊದಲಿಗೆ ನಾವು ಎಲ್ಲರ ಉದ್ಧಾರಕ್ಕಾಗಿ ಅತ್ಯವಶ್ಯವಾದ ಸಾಮಾನ್ಯಧರ್ಮವನ್ನು ಸಾಮೂಹಿಕವಾಗಿ ನೋಡಿ, ಬಳಿಕ ಮುಂದಿನ ಭಾಗದಲ್ಲಿ ಅವುಗಳಲ್ಲಿ ಒಂದೊಂದರ ಸೂಕ್ಷ್ಮಗಳನ್ನೂ ಸವಿಸ್ತಾರವಾಗಿ ಚರ್ಚಿಸೋಣ.

೧) ಧಾರಣಾತ್ ಧರ್ಮ ಇತ್ಯಾಹುಃ 
ಧರ್ಮೋ ಧಾರಯತಿ ಪ್ರಜಾಃ  |
ಯತ್ ಸ್ಯಾದ್ಧಾರಣಸಂಯುಕ್ತಂ
ಸ ಧರ್ಮ ಇತಿ ನಿಶ್ಚಯಃ ||
(ಮಹಾಭಾರತ ಕರ್ಣಪರ್ವ ೪೯.೫೦)

(ಎಲ್ಲವನ್ನೂ, ಎಲ್ಲರನ್ನೂ, ಸಮಸ್ತಸೃಷ್ಟಿ ಹಾಗೂ ಸೃಷ್ಟಿಪ್ರಕ್ರಿಯೆಯನ್ನೂ ತನ್ನಲ್ಲೇ) ಧಾರಣೆ ಮಾಡಿಕೊಳ್ಳುವ (ಧರಿಸಿಕೊಳ್ಳುವ, ಆಧರಿಸುವ) ಸ್ವ-ಭಾವಕ್ಕಾಗಿ "ಧರ್ಮ " ಎಂಬ ಹೆಸರಿನಿಂದ ಆ ಗುಣವನ್ನು ಕರೆಯುತ್ತಾರೆ. ಹಾಗಾಗಿ, ಅಂತಹ ವಿಶ್ವ-ಮಾನವ-ಧರ್ಮ / ಸೃಷ್ಟಿಧರ್ಮ / ಪ್ರಕೃತಿಧರ್ಮ / ಕಾಲಧರ್ಮ / ಮಾನವೀಯಧರ್ಮವು ಸೃಷ್ಟಿಸಾಮ್ರಾಜ್ಯದ ಸಮಸ್ತ ಪ್ರಜೆಗಳನ್ನೂ ತಾನೇ ಧರಿಸಿಕೊಂಡು ಆಧರಿಸಿದೆ; ಸು-ಸ್ಥಿತಿಗೆ ಕಾರಣವಾಗಿದೆ. ಹೀಗೆ, ಧಾರಣಾಗುಣದಿಂದ ಯುಕ್ತವಾದದ್ದೇ ಧರ್ಮವೆಂಬುದು ನಿಶ್ಚಯವಾದಂತಾಯಿತು. 

"ಧರತಿ ಲೋಕಾನ್ ಧ್ರಿಯತೇ ಪುಣ್ಯಾತ್ಮಭಿರಿತಿ ವಾ ಧರ್ಮಃ " — ಲೋಕದ ಜನರನ್ನು ಧರಿಸುತ್ತದೆ ಅಥವಾ ಪುಣ್ಯಾತ್ಮರಿಂದ ಧಾರಣೆಮಾಡಲ್ಪಡುತ್ತದೆಂಬುದರಿಂದಾಗಿ ಧರ್ಮವೆನಿಸಿದೆ. "ಧೃ ಧಾರಣೇ ಅವಸ್ಥಾನೇ ಅವಧ್ವಂಸನೇ ವಾ " — ಧೃ ಧಾರಣ / ಸೃಷ್ಟಿಗರ್ಭ, ಸ್ಥಿತಿ, ಲಯಾರ್ಥದ ಧಾತು ಧರ್ಮಶಬ್ದದ ಮೂಲ.

೨) ಧಾರಣಾದ್ಧರ್ಮ ಇತ್ಯಾಹುಃ, 
ಧರ್ಮೇಣ ವಿಧೃತಾಃ ಪ್ರಜಾಃ |
ಯಸ್ಮಾದ್ಧಾರಯತೇ ಸರ್ವಂ 
ತ್ರೈಲೋಕ್ಯಂ ಸಚರಾಚರಮ್ ||

ಧಾರಣೆಯಿಂದ (ಎಲ್ಲವನ್ನೂ ಧರಿಸುವಿಕೆಯಿಂದ) ಧರ್ಮವೆನ್ನುವರು. ಧರ್ಮದಿಂದ ಪ್ರಜೆಗಳೆಲ್ಲರೂ ವಿಶೇಷವಾಗಿ ಧರಿಸಲ್ಪಟ್ಟಿರುವರು. ಸಮಸ್ತ ಚರಾಚರಗಳ ಸಮೇತವಾದ ಮೂರುಲೋಕದ ಎಲ್ಲವೂ ಯಾವುದರಿಂದ ಆಧರಿಸಲ್ಪಡುವುದೋ ಅದೇ ಧರ್ಮ.

೩) ಧಾರಣಾದ್ ವಿದ್ವಿಷಾಂ ಚೈವ
ಧರ್ಮೇಣಾರಂಜಯನ್ ಪ್ರಜಾಃ |
ತಸ್ಮಾದ್ಧಾರಣಮಿತ್ಯುಕ್ತಂ 
ಸ ಧರ್ಮ ಇತಿ ನಿಶ್ಚಯಃ ||

ಸಮಸ್ತ ಪ್ರಜೆಗಳನ್ನು (ಸೃಷ್ಟಿಯನ್ನು) ಎಲ್ಲ ರೀತಿಯಿಂದಲೂ, ಎಲ್ಲೆಡೆಯಿಂದಲೂ ರಂಜಿಸುತ್ತಾ, ದ್ವೇಷಿಸುವ ಶತ್ರುಗಳನ್ನೂ ಧರಿಸಿಕೊಂಡಿರುವುದರಿಂದಾಗಿ ನಿಶ್ಚಯಾತ್ಮಕವಾಗಿ ಧರ್ಮವೆನಿಸಿರುವುದು ಲೋಕಧಾರಣಾಶಕ್ತಿಯೆನಿಸಿರುವುದು.

೪) ಪ್ರಭವಾರ್ಥಾಯ ಭೂತಾನಾಂ ಧರ್ಮಪ್ರವಚನಂ ಕೃತಮ್ |
ಯಃ ಸ್ಯಾತ್ ಪ್ರಭವಸಂಯುಕ್ತಃ ಸ ಧರ್ಮ ಇತಿ ನಿಶ್ಚಯಃ ||
(ಮಹಾಭಾರತ ಶಾಂತಿಪರ್ವ ೧೦೯.೧೦)

ಸಕಲ ಚರಾಚರಗಳ ಸೃಷ್ಟಿಗೋಸ್ಕರ ಧರ್ಮದ ಕುರಿತಾಗಿ ಪ್ರಕೃಷ್ಟವಾಗಿ (ಚೆನ್ನಾಗಿ) ಹೇಳಲ್ಪಟ್ಟಿರುವುದು (ಪ್ರ-ವಚನ). ಹೀಗಾಗಿ, ಯಾವುದು ಸೃಷ್ಟಿಯೊಡಗೂಡಿ ಅನಾದ್ಯನಂತವಾಗಿ ಸದಾ ಇರುವುದೋ ಅದೇ ಧರ್ಮವೆಂಬುದು ನಿಶ್ಚಯಾತ್ಮಕವಾದುದು.

೫) ಅಹಿಂಸಾಯ ಹಿ ಭೂತಾನಾಂ ಧರ್ಮಪ್ರವಚನಂ ಕೃತಮ್ |
ಯಃ ಸ್ಯಾದಹಿಂಸಾಸಂಯುಕ್ತಃ ಸ ಧರ್ಮ ಇತಿ ನಿಶ್ಚಯಃ ||

ಅಹಿಂಸೆಗಾಗಿಯೇ (ಕಾಯೇನ, ವಾಚಾ, ಮನಸಾ ಹಿಂಸೆ ಮಾಡದಿರುವಿಕೆಗಾಗಿಯೇ) ಧರ್ಮವು ಬೋಧಿಸಲ್ಪಟ್ಟಿರುವುದು. ಹೀಗಾಗಿ, ಯಾವ ತತ್ತ್ವವು ಅಹಿಂಸೆಯಿಂದೊಡಗೂಡಿರುವುದೋ ಅದೇ ಧರ್ಮವೆಂದು ತೀರ್ಮಾನಿಸಬಹುದಾಗಿದೆ.

Comments

Popular posts from this blog

೪.೫. ಸಮಾನತೆ

  ೪.೫. ಸಮಾನತೆ ಸಮ್ಯಂಚಃ ಸವ್ರತಾ ಭೂತ್ವಾ ವಾಚಂ ವದತ ಭದ್ರಯಾ | (ಅಥರ್ವಸಂಹಿತೆ ೩ | ೩೦.೩) ಸಮಾನಶೀಲರಾಗಿ, ಸಮಾನವ್ರತಿಗಳಾಗಿ ಎಲ್ಲರೂ ಒಳ್ಳೆಯ ಮಾತುಗಳನ್ನಾಡಲಿ. ಪ್ರಿಯಂ ಸರ್ವಸ್ಯ ಪಶ್ಯತ | (ಅಥರ್ವಸಂಹಿತೆ ೧೯ | ೬೨.೧) ಎಲ್ಲರ ಒಳಿತನ್ನೂ ಗಮನಿಸಿರಿ. ಏಷ ವಾಂ ದ್ಯಾವಾಪೃಥಿವೀ ಉಪಸ್ಥೇ ಮಾ ಕ್ಷುದನ್ಯಾ ತೃಷತ್ | (ಅಥರ್ವಸಂಹಿತೆ ೨ | ೨೯.೪) ಈ ಬಾನು-ಬುವಿಗಳ ಮಡಿಲಿನಲ್ಲಿ ಯಾವ ಮಾನವನೂ ಹಸಿವು-ಬಾಯಾರಿಕೆಗಳಿಂದ ಬಳಲಬಾರದು. ಸರ್ವಭೂತಸ್ಥಮಾತ್ಮಾನಂ  ಸರ್ವಭೂತಾನಿ ಚಾತ್ಮನಿ | ಈಕ್ಷತೇ ಯೋಗಯುಕ್ತಾತ್ಮಾ ಸರ್ವತ್ರ ಸಮದರ್ಶನಃ || (ಗೀತಾ ೬.೨೯) ಯಥೈವಾತ್ಮಾ ಪರಸ್ತದ್ವತ್ ದ್ರಷ್ಟವ್ಯಃ ಸುಖಮಿಚ್ಛತಾ | ಸುಖದುಃಖಾನಿ ತುಲ್ಯಾನಿ ಯಥಾತ್ಮನಿ ತಥಾ ಪರೇ || (ದಕ್ಷಸ್ಮೃತಿ ೩.೨೨) ಆತ್ಮವತ್ಸರ್ವಭೂತಾನಿ  ಯಃ ಪಶ್ಯತಿ ಸ ಪಶ್ಯತಿ | (ಆಪಸ್ತಂಬಸ್ಮೃತಿ ೧೦.೧೨) ಶ್ರೂಯತಾಂ ಧರ್ಮಸರ್ವಸ್ವಂ  ಶ್ರುತ್ವಾ ಚೈವಾವಧಾರ್ಯತಾಮ್ | ಆತ್ಮನಃ ಪ್ರತಿಕೂಲಾನಿ ಪರೇಷಾಂ ನ ಸಮಾಚರೇತ್ || (ದೇವಲನ ಕೃತ್ಯರತ್ನಾಕರ ಪುಟ ೧೭) ಯದನ್ಯೈರ್ವಿಹಿತಂ ನೈಚ್ಛೇತ್ ಆತ್ಮನಃ ಕರ್ಮ ಪೂರುಷಃ | ನ ತತ್ಪರೇಷು ಕುರ್ವೀತ ಜಾನನ್ ಅಪ್ರಿಯಮಾತ್ಮನಃ || ಸರ್ವಂ ಪ್ರಿಯಾಭ್ಯುಪಗತಂ ಧರ್ಮಂ ಪ್ರಾಹುರ್ಮನೀಷಿಣಃ | (ಮಹಾಭಾರತ, ಶಾಂತಿಪರ್ವ, ೨೬೦. ೨೦, ೨೫) ನ ತತ್ಪರಸ್ಯ ಸಂದಧ್ಯಾತ್  ಪ್ರತಿಕೂಲಂ ಯದಾತ್ಮನಃ | ಏಷ ಸಂಕ್ಷೇಪತೋ ಧರ್ಮಃ ಕಾಮಾದನ್ಯಃ ಪ್ರವರ್ತತೇ || ಪ್ರತ್ಯ...

೪.೩. ಋತ

  ೪.೩. ಋತ ಋತಸ್ಯ ಧೀತಿರ್ವೃಜಿನಾನಿ ಹಂತಿ | (ಋಕ್ಸಂಹಿತೆ ೪ | ೨೩.೮) ಋತದ ಧ್ಯಾನವು ಪಾಪಗಳನ್ನು ಹೋಗಲಾಡಿಸುತ್ತದೆ. ಶಾಂತ್ಯಾ ಋತಸ್ಯ ಪಥಾ ಪ್ರೇತ | (ಕೃಷ್ಣಯಜುಸ್ಸಂಹಿತೆ ೬ | ೬.೧.೩) ಶಾಂತಿಯಿಂದ (ಮನೋನಿಗ್ರಹದಿಂದ, ಮನಃಪ್ರಶಮನದಿಂದ, ಶಮದಿಂದ) ಋತದ ದಾರಿಯಲ್ಲಿ ತೆರಳಿರಿ. ಋತೇ ಸಮುದ್ರ ಅಹಿತಃ | ಋತೇ ಭೂರಿಯಂ ಶ್ರಿತಾ | (ತೈತ್ತಿರೀಯಬ್ರಾಹ್ಮಣ ೧.೫.೫) ಋತದಲ್ಲಿ ಸಮುದ್ರ ನೆಲೆಸಿದೆ / ನಿಹಿತವಾಗಿದೆ / ಇಡಲ್ಪಟ್ಟಿದೆ. ಋತದಲ್ಲಿ ಭೂಮಿಯಿದು ಆಶ್ರಿತವಾಗಿದೆ. ಋತಂ ಪ್ರಪದ್ಯೇ | (ತೈತ್ತಿರೀಯಬ್ರಾಹ್ಮಣ ೩.೫.೧) ಋತಕ್ಕೆ (ವಿಶ್ವನಿಯಮಕ್ಕೆ, ಕಾಲಗತಿಗೆ, ಪ್ರಕೃತಿರಹಸ್ಯಕ್ಕೆ, ಸೃಷ್ಟಿನಿಯತಿಗೆ) ಶರಣಾಗುವೆ.

ಪರಾಶರಸ್ಮೃತಿ ೨

  🌸🌸 *ಪರಾಶರಸ್ಮೃತಿ:* 🌸🌸 *೨ನೇ ಅಧ್ಯಾಯ* *ಗೃಹಸ್ಥಧರ್ಮವಿಚಾರ* *ಅತ: ಪರಂ ಗೃಹಸ್ಥಸ್ಯ ಕರ್ಮಾಚಾರಂ ಕಲೌ ಯುಗೇ|* *ಧರ್ಮಂ ಸಾಧಾರಣಂ ಶಕ್ತ್ಯಾ ಚಾತುರ್ವರ್ಣ್ಯಾಶ್ರಮಾಗತಮ್||೧||* *ತಂ ಪ್ರವಕ್ಷ್ಯಾಮ್ಯಹಂ ಪೂರ್ವಂ ಪರಾಶರವಚೋ ಯಥಾ|* *ಷಟ್ಕರ್ಮಸಹಿತೋ ವಿಪ್ರ: ಕೃಷಿಕರ್ಮ ಚ ಕಾರಯೇತ್||೨||* ಇನ್ನು ಮುಂದೆ ಕಲಿಯುಗದಲ್ಲಿ ನಾಲ್ಕೂವರ್ಣದವರ ಧರ್ಮಕರ್ಮಾಚಾರಗಳನ್ನು , ಹಿಂದೆ ಪರಾಶರರೆಂದಂತೆ ಯಥಾಶಕ್ತಿ ಹೇಳುವೆನು. ವಿಪ್ರನು ಹಿಂದೆ ಹೇಳಿದ ಷಟ್ಕರ್ಮಗಳೊಂದಿಗೆ, ಕೃಷಿಕರ್ಮವನ್ನೂ ಮಾಡಿಸಬೇಕು. *ಕ್ಷುಧಿತಂ ತೃಷಿತಂ ಶ್ರಾನ್ತಂ ಬಲೀವರ್ದಂ ನ ಯೋಜಯೇತ್|* *ಹೀನಾಙ್ಗಂ ವ್ಯಾಧಿತಂ ಕ್ಲೀಬಂ ವೃಷಂ ವಿಪ್ರೋ ನ ವಾಹಯೇತ್||೩||* ಹಸಿಯುತ್ತಿರುವ(ಆಹಾರ ತಿನ್ನಿಸದ), ಬಾಯಾರಿರುವ, ಆಯಾಸಗೊಂಡಿರುವ ಎತ್ತನ್ನು(ಬಲೀವರ್ದ ~ ಎತ್ತು) ಹಾಗೂ ಅಂಗ ಊನವಿರುವ, ವ್ಯಾಧಿಗ್ರಸ್ತವಾದ, ಪುರುಷತ್ವವಿಲ್ಲದ ವೃಷಭ(ಎತ್ತು)ವನ್ನು ವಿಪ್ರನು ಬೇಸಾಯಕ್ಕೆ ಹೂಡಬಾರದು. *ಸ್ಥಿರಾಙ್ಗಂ ವೃಷಭಂ ತೃಪ್ತಂ ಸುನರ್ದಂ ಷಣ್ಡವರ್ಜಿತಮ್|* *ವಾಹಯೇದ್ದಿವಸಸ್ಯಾರ್ಧಂ ಪಶ್ಚಾತ್ ಸ್ನಾನಂ ಸಮಾಚರೇತ್||೪||* ದೃಢಕಾಯವುಳ್ಳ, ಹಸಿವು-ಬಾಯಾರಿಕೆಗಳನ್ನು ತೀರಿಸಿಕೊಂಡು ತೃಪ್ತವಾದ, ಒಳ್ಳೆಯ ಗಟ್ಟಿಸ್ವರದಲ್ಲಿ ಧ್ವನಿ ಮಾಡುವ, ಪುರುಷತ್ವವಿರುವ ಎತ್ತನ್ನು ಮಧ್ಯಾಹ್ನದವರೆಗೆ ಹೂಡಿ, ನಂತರ ಚೆನ್ನಾಗಿ ಸ್ನಾನಮಾಡಿಸಬೇಕು. *ಜಪ್ಯಂ ದೇವಾರ್ಚನಂ ಹೋಮಂ ಸ್ವಾಧ್ಯಾಯಂ ಚೈವಮಭ್ಯಸೇತ್|* *ಏಕದ್ವಿತ್ರಿಚತ...