Skip to main content

೧. ಧರ್ಮದ ಅರ್ಥವ್ಯಾಪ್ತಿ

೧. ‘ಧರ್ಮ’ದ ಅರ್ಥವ್ಯಾಪ್ತಿ

“ಧೃಙ್ / ಧೃ ಅವಧ್ವಂಸನೇ / ಪರಿತ್ಯಾಗೇ”, “ಧೃಙ್ / ಧೃ ಅವಸ್ಥಾನೇ / ಸ್ಥಿತೌ / ಆಲಂಬನೇ”, “ಧೃಞ್ / ಧೃ ಧಾರಣೇ”— ಎಂಬಂತೆ ಧೃ ಎಂಬ ಸಂಸ್ಕೃತಮೂಲದ ಧಾತುವಿನಿಂದ “ಧರ್ಮಃ / ಧರ್ಮನ್ (ಪುಲ್ಲಿಂಗ— ಧರ್ಮಃ, ಧರ್ಮೌ, ಧರ್ಮಾಃ ಅಥವಾ ಧರ್ಮಾ, ಧರ್ಮಾಣೌ, ಧರ್ಮಾಣಃ) ಅಥವಾ ಧರ್ಮನ್ (ನಪುಂಸಕಲಿಂಗ— ಧರ್ಮ, ಧರ್ಮಣೀೀ, ಧರ್ಮಾಣಿ)” ಎಂಬ ಪದವು ಉಂಟಾಗಿದೆ. ಹೀಗಾಗಿ ಮಿತಿಮೀರಿದ ಅರಿಷಡ್ವರ್ಗಾದಿ (ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ) ಅತಿಗಳ ವರ್ಜನ / ಪರಿತ್ಯಾಗ, ಜಗತ್ತಿನ ಮೂಲಾಧಾರ / ಆಶ್ರಯಸ್ಥಾನ / ಆಲಂಬನ / ಮೂಲಸ್ಥಿತಿ / ಮೂಲನೆಲೆ, ಲೋಕಗಳನ್ನೆಲ್ಲ ಧರಿಸಿರುವ ಧಾರಣಾಶಕ್ತಿ— ಎಂದು ಮುಂತಾಗಿ  ಇದರ ಅರ್ಥ. “ರಾಮೋ ವಿಗ್ರಹವಾನ್ ಧರ್ಮಃ” ಎಂಬುದರಿಂದ ಭಗವಂತನು ಹಾಗೂ ಸತ್ಪುರುಷರು ಧರ್ಮದ ಮೂರ್ತಸ್ವರೂಪ, ಸಾಕಾರಸ್ವರೂಪ. “ಧರತಿ ಲೋಕಾನ್, ಧ್ರಿಯತೇ ಪುಣ್ಯಾತ್ಮಭಿಃ ಇತಿ ವಾ ಧರ್ಮಃ”— ಲೋಕಗಳನ್ನು ಇದು ಧರಿಸುತ್ತದೆ ಅಥವಾ ಪುಣ್ಯಾತ್ಮರಿಂದ ಇದು ಧರಿಸಲ್ಪಡುತ್ತದೆ ಎಂಬುದರಿಂದ ಜಗದ್ಧಾರಣಾಶಕ್ತಿಯೇ ಧರ್ಮವೆನಿಸಿದೆ. ಆದ್ದರಿಂದ ಧರ್ಮಹ್ರಾಸದಿಂದ ಲೋಕಗಳು ಅಲ್ಲೋಲಕಲ್ಲೋಲವಾಗುವುವು. ಆಗ ಭಗವಂತನು ಅವತಾರವೆತ್ತಿ ಬಂದು ದುಷ್ಟಶಿಕ್ಷಣ-ಶಿಷ್ಟರಕ್ಷಣವನ್ನು ಮಾಡಿ ಧರ್ಮವನ್ನು ಪುನಃಸ್ಥಾಪಿಸಿ, ಧರ್ಮದ ಶಕ್ತಿಯಿಂದ ಲೋಕಗಳನ್ನುದ್ಧರಿಸುವನು. (ಭಗವದ್ಗೀತಾ ೪. ೭,೮— “ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ | ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್ || ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್ | ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ ||”)

ಪಿತುಂ ನು ಸ್ತೋಷಂ ಮಹೀ ಧರ್ಮಾಣಂ ತವಿಷೀಮ್ | (ಋಗ್ವೇದ ೧.೧೮೭.೧, ಶುಕ್ಲಯಜುರ್ವೇದ ೩೪.೭),
ಇಮಮಂಜಸ್ಪಾಮುಭಯೇ ಅಕೃಣ್ವತ ಧರ್ಮಾಣಮಗ್ನಿಂ ವಿದಥಸ್ಯ ಸಾಧನಮ್ | (ಋಗ್ವೇದ ೧೦.೯೨.೨),
ತ್ವೇ ಧರ್ಮಾಣ ಆಸತೇ ಜುಹೂಭಿಃ ಸಿಂಚತೀರಿವ | (ಋಗ್ವೇದ ೧೦.೨೧.೩)
ಈ ಮೇಲಿನ ಮಂತ್ರಗಳಲ್ಲಿ ಧರ್ಮಶಬ್ದವು ಪುಲ್ಲಿಂಗದಲ್ಲಿದೆ. ಉಳಿದ ಕೆಲವೆಡೆ ನಪುಂಸಕಲಿಂಗದಲ್ಲೂ, ಬೇರೆಡೆ ಎರಡೂ ಲಿಂಗದಲ್ಲಿ ತಿಳಿಯಬಹುದಾದ ರೂಪದಲ್ಲೂ ಇದೆ. ಹೆಚ್ಚಿನ ಕಡೆ ಧರ್ಮಶಬ್ದವು ‘ಧಾರ್ಮಿಕ ವಿಧಿಗಳು’ ಅಥವಾ ‘ಧಾರ್ಮಿಕ ಕ್ರಿಯೆ-ಸಂಸ್ಕಾರಗಳು’— ಎಂಬರ್ಥಗಳಲ್ಲಿ ಪ್ರಯೋಗಿಸಲ್ಪಟ್ಟಿರುವುದು.
ಉದಾ— ತ್ರೀಣಿ ಪದಾ ವಿ ಚಕ್ರಮೇ ವಿಷ್ಣುರ್ಗೋಪಾ ಅದಾಭ್ಯಃ | ಅತೋ ಧರ್ಮಾಣಿ ಧಾರಯನ್ || (ಋಗ್ವೇದ ೧.೨೨.೧೮, ಅಥರ್ವವೇದ ೭.೨೭.೫)
ಸಮಿಧಾನಃ ಸಹಸ್ರಜಿದಗ್ನೇ ಧರ್ಮಾಣಿ ಪುಷ್ಯಸಿ | ದೇವಾನಾಂ ದೂತ ಉಕ್ಥ್ಯಃ || (ಋಗ್ವೇದ ೫.೨೬.೬)
ವಿಶಾಂ ರಾಜಾನಮದ್ಭುತಮಧ್ಯಕ್ಷಂ ಧರ್ಮಾಣಾಮಿಮಮ್ | ಅಗ್ನಿಮೀಳೇ ಸ ಉ ಶ್ರವತ್ || (ಋಗ್ವೇದ ೮.೪೩.೨೪)
ವೃಷಾ ಸೋಮ ದ್ಯುಮಾँ ಅಸಿ ವೃಷಾ ದೇವ ವೃಷವ್ರತಃ | ವೃಷಾ ಧರ್ಮಾಣಿ ದಧಿಷೇ | (ಋಗ್ವೇದ ೯.೬೪.೧)
ತಾನಿ ಧರ್ಮಾಣಿ ಪ್ರಥಮಾನ್ಯಾಸನ್ || (ಋಗ್ವೇದ ೧.೧೬೪.೪೩, ೫೦, ೧೦.೯೦.೧೬, ತೈತ್ತಿರೀಯಕೃಷ್ಣಯಜುರ್ವೇದ ೩.೫.೧೧.೫, ಶುಕ್ಲಯಜುರ್ವೇದ ೩೧.೧೬, ಅಥರ್ವವೇದ ೭.೫.೧)

ಪ್ರಥಮ ಹಾಗೂ ಸನಾತನ (ಪ್ರಾಚೀನ) ವಿಧಿಗಳೇ ಧರ್ಮವೆಂಬುದಕ್ಕೆ―
ಸಮಿಧ್ಯಮಾನಃ ಪ್ರಥಮಾನು ಧರ್ಮಾ | (ಋಗ್ವೇದ ೩.೧೭.೧)
ಅಥಾ ಧರ್ಮಾಣಿ ಸನತಾ ನ ದುದೂಷತ್ | (ಋಗ್ವೇದ ೩.೩.೧)
ಎಂಬೀ ಮಂತ್ರಗಳು ಪ್ರಮಾಣ.

ಇನ್ನು ಕೆಲವೆಡೆ ಧರ್ಮಕ್ಕೆ ‘ನಿಶ್ಚಿತ ನಿಯಮ (ವ್ಯವಸ್ಥೆ, ಸಿದ್ಧಾಂತ)’ ಅಥವಾ ‘ಆಚರಣ ನಿಯಮ’ ಎಂಬರ್ಥವಿದೆ.
ಉದಾ— ಆ ಪ್ರಾ ರಜಾಂಸಿ ದಿವ್ಯಾನಿ ಪಾರ್ಥಿವಾ ಶ್ಲೋಕಂ ದೇವಃ ಕೃಣುತೇ ಸ್ವಾಯ ಧರ್ಮಣೇ | (ಋಗ್ವೇದ ೪.೫೩.೩)
ಧರ್ಮಣಾ ಮಿತ್ರಾವರುಣಾ ವಿಪಶ್ಚಿತಾ ವ್ರತಾ ರಕ್ಷೇಥೇ ಅಸುರಸ್ಯ ಮಾಯಯಾ | (ಋಗ್ವೇದ ೫.೬೩.೭)
ದ್ಯಾವಾಪೃಥಿವೀ ವರುಣಸ್ಯ ಧರ್ಮಣಾ ವಿಷ್ಕಭಿತೇ ಅಜರೇ ಭೂರಿರೇತಸಾ | (ಋಗ್ವೇದ ೬.೭೦.೧)
ಅಚಿತ್ತೀ ಯತ್ತವ ಧರ್ಮಾ ಯುಯೋಪಿಮ ಮಾ ನಸ್ತಸ್ಮಾದೇನಸೋ ದೇವ ರೀರಿಷಃ | (ಋಗ್ವೇದ ೭.೮೯.೫, ತೈತ್ತಿರೀಯಕೃಷ್ಣಯಜುರ್ವೇದ ೩.೪.೧೧.೧೯, ಅಥರ್ವವೇದ ೬.೫೧.೩)
ದ್ಯುತಾನಸ್ತ್ವಾ ಮಾರುತೋ ಮಿನೋತು ಮಿತ್ರಾವರುಣೌ ಧ್ರುವೇಣ ಧರ್ಮಣಾ | (ವಾಜಸನೇಯಿಶುಕ್ಲಯಜುರ್ವೇದ ೫.೨೭, ಕಾಣ್ವಶುಕ್ಲಯಜುರ್ವೇದ ೮.೫.೩೪)
ಮಿತ್ರಾವರುಣೌ ತ್ವೋತ್ತರತಃ ಪರಿಧತ್ತಾಂ ಧ್ರುವೇಣ ಧರ್ಮಣಾ ವಿಶ್ವಸ್ಯಾರಿಷ್ಟ್ಯೈ ಯಜಮಾನಸ್ಯ ಪರಿಧಿರಸ್ಯಾಗ್ನಿರಿಡ ಈಡಿತಃ | (ವಾಜಸನೇಯಿಶುಕ್ಲಯಜುರ್ವೇದ ೨.೩, ಕಾಣ್ವಶುಕ್ಲಯಜುರ್ವೇದ ೨.೮.೧)
ಅಗ್ನಿಃ ಪೃಥುರ್ಧರ್ಮಣಸ್ಪತಿರ್ಜುಷಾಣೋऽಅಗ್ನಿಃ ಪೃಥುರ್ಧರ್ಮಣಸ್ಪತಿರಾಜ್ಯಸ್ಯ ವೇತು ಸ್ವಾಹಾ | (ವಾಜಸನೇಯಿಶುಕ್ಲಯಜುರ್ವೇದ ೧೦.೨೯, ಕಾಣ್ವಶುಕ್ಲಯಜುರ್ವೇದ ೧೫.೭.೧೫)
...ಜಙ್ಘಾಭ್ಯಾಂ ಪದ್ಭ್ಯಾಂ ಧರ್ಮೋऽಸ್ಮಿ ವಿಶಿ ರಾಜಾ ಪ್ರತಿಷ್ಠಿತಃ | (ವಾಜಸನೇಯಿಶುಕ್ಲಯಜುರ್ವೇದ ೨೦.೯)

ಅಥರ್ವವೇದದಲ್ಲಿ ಧರ್ಮಶಬ್ದವು “ಧಾರ್ಮಿಕ ಕ್ರಿಯಾ-ಸಂಸ್ಕಾರ ಮಾಡುವುದರಿಂದ ಸಂಗ್ರಹವಾದ ಗುಣ” ಎಂಬರ್ಥದಲ್ಲಿ ಪ್ರಯುಕ್ತವಾಗಿದೆ— ಋತ ಸತ್ಯಂ ತಪೋ ರಾಷ್ಟ್ರಂ ಶ್ರಮೋ ಧರ್ಮಶ್ಚ ಕರ್ಮ ಚ | ಭೂತಂ ಭವಿಷ್ಯದುಚ್ಛಿಷ್ಟೇ ವೀರ್ಯಂ ಲಕ್ಷ್ಮೀರ್ಬಲಂ ಬಲೇ || (ಅಥರ್ವವೇದ ೯.೯.೧೭)


ಐತರೇಯಬ್ರಾಹ್ಮಣದಲ್ಲಿ ಧರ್ಮವೆಂದರೆ ಸಕಲ ಧಾರ್ಮಿಕ ಕರ್ತವ್ಯಗಳು ಎನ್ನಲಾಗಿದೆ— ಧರ್ಮಸ್ಯ ಗೋಪ್ತಾ ಅಜನಿ ಇತಿ ತಮ್ ಅಭಿ ಉತ್ಕೃಷ್ಟಮ್ ಏವಂವಿದ್ ಅಭಿಷೇಕ್ಷ್ಯನ್ ಏತಯಾ ಋಚಾ ಅಭಿಮನ್ತ್ರಯೇತ | (ಐ.ಬ್ರಾ. ೭.೧೭)

ಛಾಂದೋಗ್ಯೋಪನಿಷತ್ ನಲ್ಲಿ— ತ್ರಯೋ ಧರ್ಮಸ್ಕನ್ಧಾ ಯಜ್ಞೋऽಧ್ಯಯನಂ ದಾನಮಿತಿ ಪ್ರಥಮಃ, ತಪ ಏವ ಇತಿ ದ್ವಿತೀಯೋ, ಬ್ರಹ್ಮಚರ್ಯಾಚಾರ್ಯಕುಲವಾಸೀ ತೃತೀಯೋ ಅತ್ಯನ್ತಮ್ ಆತ್ಮಾನಮ್ ಆಚಾರ್ಯಕುಲೇ ಅವಸಾದಯನ್ | ಸರ್ವೇ, ಏತೇ ಪುಣ್ಯಲೋಕಾಃ, ಭವನ್ತಿ, ಬ್ರಹ್ಮಸಂಸ್ಥೋ ಅಮೃತತ್ವಮ್ ಏತಿ |— ಧರ್ಮಕ್ಕೆ ೩ ಅಂಗಗಳು. (೧) ಯಜ್ಞ, ಅಧ್ಯಯನ / ಸ್ವಾಧ್ಯಾಯ, ದಾನ— ಗೃಹಸ್ಥಧರ್ಮ; (೨) ತಪಸ್ಸು— ತಾಪಸಧರ್ಮ / ವಾನವಾಸಿಕ / ವಾನಪ್ರಸ್ಥ ಧರ್ಮ; (೩) ಬ್ರಹ್ಮಚರ್ಯಧರ್ಮ, ಕೊನೆಯವರೆಗೆ ಗುರುಕುಲವಾಸ. ಇವರೆಲ್ಲರೂ ಪುಣ್ಯಲೋಕವನ್ನೈದಿ, ಬ್ರಹ್ಮದಲ್ಲಿ ನೆಲೆಸಿ, ಅಮೃತತ್ವವನ್ನೈದುವರು.

ಮನುಸ್ಮೃತಿಯ ಮೇಧಾತಿಥಿಭಾಷ್ಯದಂತೆ ಧರ್ಮವು ಸ್ಮೃತಿಕಾರರ ಆಶಯದ ಪ್ರಕಾರ ಪಂಚಸ್ವರೂಪವುಳ್ಳದ್ದಾಗಿದೆ— (೧) ವರ್ಣಧರ್ಮ (ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ— ಈ ಚತುರ್ವರ್ಣಗಳಿಗೆ ವಿಧಿಸಿದ ಅದರದೇ ಆದ ಆಚಾರ-ವಿಚಾರಗಳು), (೨) ಆಶ್ರಮಧರ್ಮ (ಬ್ರಹ್ಮಚರ್ಯ, ಗಾರ್ಹಸ್ಥ್ಯ, ವಾನಪ್ರಸ್ಥ ಹಾಗೂ ಸಂನ್ಯಾಸಗಳೆಂಬ ಚತುರಾಶ್ರಮಸಂಬಂಧಿತ ಧರ್ಮಗಳು), (೩) ವರ್ಣಾಶ್ರಮಧರ್ಮ (ಆಯಾ ವರ್ಣದವರು ಆಯಾ ಆಶ್ರಮಗಳಲ್ಲಿ ಆಚರಿಸಬೇಕಾದದ್ದು), (೪) ನೈಮಿತ್ತಿಕಧರ್ಮ (ಪ್ರಾಯಶ್ಚಿತ್ತ, ಶಾಂತಿಕರ್ಮ, ಪರ್ವಾಚರಣೆ, ನಿತ್ಯವಲ್ಲದ ಆದರೆ ಯಾವುದೋ ನಿಮಿತ್ತವಾಗಿ ಆಚರಿಸಲ್ಪಡುವ ದರ್ಮ) ಮತ್ತು (೫) ಗುಣಧರ್ಮ (ಅವನವನ ಗುಣಸ್ವಭಾವಗಳಿಗನುಗುಣವಾಗಿ, ವೃತ್ತಿ-ಪ್ರವೃತ್ತಿಗಳಿಗನುಗುಣವಾಗಿ ಆಚರಿಸಬೇಕಾದದ್ದು. ಚಾತುರ್ವರ್ಣ್ಯಂ ಮಯಾ ಸೃಷ್ಟಂ ಗುಣಕರ್ಮವಿಭಾಗಶಃ—  ಗೀತಾಚಾರ್ಯೋಕ್ತಿ. ನಾಲ್ಕು ವರ್ಣಗಳು ನನ್ನಿಂದಲೇ ಅವರವರ ಗುಣ, ಮಾಡುವ ಕರ್ಮಗಳಿಗೆ ಸರಿಯಾಗಿ ಸೃಜಿಸಲ್ಪಟ್ಟಿವೆ ಎಂದನು ಶ್ರೀಕೃಷ್ಣಪರಮಾತ್ಮ).

ಜೈಮಿನಿಮುನಿಯ ಪೂರ್ವಮೀಮಾಂಸಾಸೂತ್ರಗಳಲ್ಲಿ ಚೋದನಾಲಕ್ಷಣೋऽರ್ಥೋ ಧರ್ಮಃ (೧.೧.೨)— ವೇದವಿಹಿತ, ವೇದೋಕ್ತಧರ್ಮಕರ್ಮಾನುಷ್ಠಾನ, ವೇದೋಕ್ತ ಜೀವನಪಥವೇ ಧರ್ಮ. ವೇದದ ಅನುವಾಸನಗನಿಂದ ಪ್ರಚೋದಿತರಾಗಿ, ಪ್ರೇರಿತರಾಗಿ ಆಚರಿಸುವ ಜೀವನಪದ್ಧತಿಯೇ ಧರ್ಮ. ಇದರಿಂದ ಇಹ-ಪರಗಳೆರಡರಲ್ಲೂ ಸುಖಾನಂದಗಳುಂಟಾಗುವುವು.

ಕಣಾದಮಹರ್ಷಿಯ ವೈಶೇಷಿಕಸೂತ್ರಗಳಲ್ಲಿ ಅಥಾತೋ ಧರ್ಮಂ ವ್ಯಾಖ್ಯಾಸ್ಯಾಮಃ | ಯತೋ ಅಭ್ಯುದಯನಿಃಶ್ರೇಯಸಸಿದ್ಧಿಃ ಸ ಧರ್ಮಃ | (೧, ೨)— ಇದೀಗ ಧರ್ಮವನ್ನು ವ್ಯಾಖ್ಯಾನಿಸುತ್ತೇವೆ. ಯಾವುದರಿಂದ ಲೌಕಿಕ ಅಭ್ಯುದಯ ಹಾಗೂ ಪಾರಲೌಕಿಕ ಮೋಕ್ಷಗಳ ಸಿದ್ಧಿಯಾಗುವುದೋ ಅದೇ ಧರ್ಮ.

★ವಿಶೇಷ ಟಿಪ್ಪಣಿ—

ಭಾರತೀಯ ಪರಂಪರೆಯ ಆಸ್ತಿಕ ಹಾಗೂ ನಾಸ್ತಿಕ ದರ್ಶನಸಾಹಿತ್ಯದಲ್ಲಿ ಆಸ್ತಿಕದರ್ಶನಗಳು ಮುಖ್ಯವಾಗಿ ೬ (ಷಡ್ ದರ್ಶನಗಳು)—  
(೧) ಕಪಿಲಮುನಿಯ ಸಾಂಖ್ಯ (ಸೇಶ್ವರ, ನಿರೀಶ್ವರ)
(೨) ಕಣಾದನ ವೈಶೇಷಿಕ (ವೈಚಾರಿಕ, ವೈಜ್ಞಾನಿಕ)
(೩) ಗೌತಮನ ನ್ಯಾಯ (ಪ್ರಾಚೀನನ್ಯಾಯ, ತರ್ಕಶಾಸ್ತ್ರ)
(೪) ಪತಂಜಲಿಯ ಯೋಗ (ಅಷ್ಟಾಂಗಯೋಗ, ರಾಜಯೋಗ)
(೫) ಜೈಮಿನಿಯ ಪೂರ್ವಮೀಮಾಂಸಾ (ಕರ್ಮಪ್ರಧಾನ, ವೇದದ ಪೂರ್ವದ ಕರ್ಮಕಾಂಡೀಯ, ಸಂಹಿತಾ-ಬ್ರಾಹ್ಮಣಾಧಾರಿತ)
(೬) ಬಾದರಾಯಣವ್ಯಾಸರ ಉತ್ತರಮೀಮಾಂಸಾ (ವೇದಾಂತಸೂತ್ರ, ಬ್ರಹ್ಮಸೂತ್ರ, ವೇದದ ಕೊನೆಯ / ಉತ್ತರದ ಜ್ಞಾನಕಾಂಡೀಯ, ಆರಣ್ಯಕ-ಉಪನಿಷದಾಧಾರಿತ)

ಅಹಿಂಸಾ ಪರಮೋ ಧರ್ಮಃ | (ವ್ಯಾಸಕೃತ ಮಹಾಭಾರತ, ಅನುಶಾಸನಪರ್ವ, ೧೧೫.೧)— ಅಹಿಂಸೆಯೇ ಶ್ರೇಷ್ಠ ಧರ್ಮ.
ಅನೃಶಂಸ್ಯಂ ಪರೋ ಧರ್ಮಃ | (ವ್ಯಾಸಭಾರತ, ವನಪರ್ವ, ೩೭೩.೭೬)— ದಯೆಯೇ ಪರಮ ಧರ್ಮ.
ಆಚಾರಃ ಪರಮೋ ಧರ್ಮಃ | (ಮನುಸ್ಮೃತಿ, ೧.೧೦೮)— ಸದಾಚಾರವೇ, ಉತ್ತಮ ನಡವಳಿಕೆ-ಆಚರಣೆಗಳೇ ಪರಮಧರ್ಮ.
ಅಥಾತೋ ಧರ್ಮಂ ವ್ಯಾಖ್ಯಾಸ್ಯಾಮಃ | ಶ್ರುತಿಪ್ರಮಾಣಕೋ ಧರ್ಮಃ | ಶ್ರುತಿಶ್ಚ ದ್ವಿವಿಧಾ, ವೈದಿಕೀ ತಾನ್ತ್ರಿಕೀ ಚ | (ಮನುಸ್ಮೃತಿ ೨.೧, ಹಾರೀತಸ್ಮೃತಿ)— ಶ್ರುತಿಪ್ರಮಾಣವಾದದ್ದೇ ಧರ್ಮ. ಶ್ರುತಿಯಾದರೋ ವೇದಸಂಬಂಧಿ ಹಾಗೂ ತಂತ್ರಶಾಸ್ತ್ರಸಂಬಂಧಿಯೆಂದು ೨ ವಿಧ.

ಧರ್ಮಕ್ಕೆ ವಿವಿಧ ಆಯಾಮ / ಮುಖ / ಮಗ್ಗುಲುಗಳಿವೆ— ಯುಗಧರ್ಮ, ಕಾಲಧರ್ಮ, ಯುದ್ಧಧರ್ಮ, ರಾಷ್ಟ್ರಧರ್ಮ, ಸ್ತ್ರೀಧರ್ಮ, ಪುರುಷಧರ್ಮ, ಪ್ರವೃತ್ತಿಧರ್ಮ, ನಿವೃತ್ತಿಧರ್ಮ, ವೃತ್ತಿಧರ್ಮ, ರಾಜಧರ್ಮ, ಬ್ರಾಹ್ಮಣಧರ್ಮ, ಕ್ಷಾತ್ರಧರ್ಮ, ವೈಶ್ಯಧರ್ಮ, ಶೂದ್ರಧರ್ಮ, ಪ್ರಜಾಧರ್ಮ, ಶಿಷ್ಟಾಚಾರ, ಸಂಪ್ರದಾಯ, ಸಂಸ್ಕೃತಿ, ಸಂಸ್ಕಾರ, ಸನಾತನಧರ್ಮ, ಪ್ರಾಚೀನಧರ್ಮ, ಅರ್ವಾಚೀನಧರ್ಮ, ಮಾನವಧರ್ಮ, ವಿಶ್ವಮಾನವಧರ್ಮ, ದೇವಧರ್ಮ, ಆರ್ಷಧರ್ಮ, ರಾಕ್ಷಸಧರ್ಮ, ಸ್ಥಳೀಯ ಧರ್ಮ, ಸಾರ್ವತ್ರಿಕ ಧರ್ಮ, ತಾತ್ಕಾಲಿಕಧರ್ಮ, ಸಾರ್ವಕಾಲಿಕಧರ್ಮ, ನಿತ್ಯಧರ್ಮ, ನೈಮಿತ್ತಿಕಧರ್ಮ, ವೈದಿಕಧರ್ಮ, ತಾಂತ್ರಿಕಧರ್ಮ, ಅವೈದಿಕಧರ್ಮ, ಆಸ್ತಿಕಧರ್ಮ, ನಾಸ್ತಿಕಧರ್ಮ, ಆಪದ್ಧರ್ಮ, ಗುರುಧರ್ಮ, ಶಿಷ್ಯಧರ್ಮ, ಬ್ರಹ್ಮಚರ್ಯಧರ್ಮ, ಗೃಹಸ್ಥಧರ್ಮ, ವಾನಪ್ರಸ್ಥಧರ್ಮ, ಸಂನ್ಯಾಸಧರ್ಮ, ಜೀವನಧರ್ಮ, ಸಾಂಸಾರಿಕಧರ್ಮ, ಸಾಮಾನ್ಯಧರ್ಮ, ವಿಶೇಷಧರ್ಮ, ಮನೋಧರ್ಮ, ದೇಹಧರ್ಮ, ಗುಣಧರ್ಮ, ಮಿತ್ರಧರ್ಮ / ಸುಹೃದ್ಧರ್ಮ, ಅನುಕೂಲಧರ್ಮ, ಜಾತಿಧರ್ಮ, ಸಮಾಜಧರ್ಮ, ಹಿಂದೂಧರ್ಮ, ಇಸ್ಲಾಂಧರ್ಮ, ಕ್ರೈಸ್ತಧರ್ಮ, ಸಿಕ್ಖಧರ್ಮ, ಜೈನಧರ್ಮ, ಬೌದ್ಧಧರ್ಮ, ಪಾರಸೀಧರ್ಮ, ಯಹೂದ್ಯಧರ್ಮ…..ಹೀಗೆ ಪಟ್ಟಿ ಉದ್ದ ಬೆಳೆಯುತ್ತಾ ಅನಂತವಾಗುತ್ತದೆ. ಹೀಗೆ, ಧರ್ಮದ ಅರ್ಥವ್ಯಾಪ್ತಿ ಹಾಗೂ ರಹಸ್ಯವು ಬಹು ವಿಶಾಲವೂ, ಗಹನವೂ / ನಿಗೂಢವೂ, ಅಗಾಧವೂ ಆಗಿರುವುದು.

Comments

Post a Comment

Popular posts from this blog

೪.೫. ಸಮಾನತೆ

  ೪.೫. ಸಮಾನತೆ ಸಮ್ಯಂಚಃ ಸವ್ರತಾ ಭೂತ್ವಾ ವಾಚಂ ವದತ ಭದ್ರಯಾ | (ಅಥರ್ವಸಂಹಿತೆ ೩ | ೩೦.೩) ಸಮಾನಶೀಲರಾಗಿ, ಸಮಾನವ್ರತಿಗಳಾಗಿ ಎಲ್ಲರೂ ಒಳ್ಳೆಯ ಮಾತುಗಳನ್ನಾಡಲಿ. ಪ್ರಿಯಂ ಸರ್ವಸ್ಯ ಪಶ್ಯತ | (ಅಥರ್ವಸಂಹಿತೆ ೧೯ | ೬೨.೧) ಎಲ್ಲರ ಒಳಿತನ್ನೂ ಗಮನಿಸಿರಿ. ಏಷ ವಾಂ ದ್ಯಾವಾಪೃಥಿವೀ ಉಪಸ್ಥೇ ಮಾ ಕ್ಷುದನ್ಯಾ ತೃಷತ್ | (ಅಥರ್ವಸಂಹಿತೆ ೨ | ೨೯.೪) ಈ ಬಾನು-ಬುವಿಗಳ ಮಡಿಲಿನಲ್ಲಿ ಯಾವ ಮಾನವನೂ ಹಸಿವು-ಬಾಯಾರಿಕೆಗಳಿಂದ ಬಳಲಬಾರದು. ಸರ್ವಭೂತಸ್ಥಮಾತ್ಮಾನಂ  ಸರ್ವಭೂತಾನಿ ಚಾತ್ಮನಿ | ಈಕ್ಷತೇ ಯೋಗಯುಕ್ತಾತ್ಮಾ ಸರ್ವತ್ರ ಸಮದರ್ಶನಃ || (ಗೀತಾ ೬.೨೯) ಯಥೈವಾತ್ಮಾ ಪರಸ್ತದ್ವತ್ ದ್ರಷ್ಟವ್ಯಃ ಸುಖಮಿಚ್ಛತಾ | ಸುಖದುಃಖಾನಿ ತುಲ್ಯಾನಿ ಯಥಾತ್ಮನಿ ತಥಾ ಪರೇ || (ದಕ್ಷಸ್ಮೃತಿ ೩.೨೨) ಆತ್ಮವತ್ಸರ್ವಭೂತಾನಿ  ಯಃ ಪಶ್ಯತಿ ಸ ಪಶ್ಯತಿ | (ಆಪಸ್ತಂಬಸ್ಮೃತಿ ೧೦.೧೨) ಶ್ರೂಯತಾಂ ಧರ್ಮಸರ್ವಸ್ವಂ  ಶ್ರುತ್ವಾ ಚೈವಾವಧಾರ್ಯತಾಮ್ | ಆತ್ಮನಃ ಪ್ರತಿಕೂಲಾನಿ ಪರೇಷಾಂ ನ ಸಮಾಚರೇತ್ || (ದೇವಲನ ಕೃತ್ಯರತ್ನಾಕರ ಪುಟ ೧೭) ಯದನ್ಯೈರ್ವಿಹಿತಂ ನೈಚ್ಛೇತ್ ಆತ್ಮನಃ ಕರ್ಮ ಪೂರುಷಃ | ನ ತತ್ಪರೇಷು ಕುರ್ವೀತ ಜಾನನ್ ಅಪ್ರಿಯಮಾತ್ಮನಃ || ಸರ್ವಂ ಪ್ರಿಯಾಭ್ಯುಪಗತಂ ಧರ್ಮಂ ಪ್ರಾಹುರ್ಮನೀಷಿಣಃ | (ಮಹಾಭಾರತ, ಶಾಂತಿಪರ್ವ, ೨೬೦. ೨೦, ೨೫) ನ ತತ್ಪರಸ್ಯ ಸಂದಧ್ಯಾತ್  ಪ್ರತಿಕೂಲಂ ಯದಾತ್ಮನಃ | ಏಷ ಸಂಕ್ಷೇಪತೋ ಧರ್ಮಃ ಕಾಮಾದನ್ಯಃ ಪ್ರವರ್ತತೇ || ಪ್ರತ್ಯ...

೪.೩. ಋತ

  ೪.೩. ಋತ ಋತಸ್ಯ ಧೀತಿರ್ವೃಜಿನಾನಿ ಹಂತಿ | (ಋಕ್ಸಂಹಿತೆ ೪ | ೨೩.೮) ಋತದ ಧ್ಯಾನವು ಪಾಪಗಳನ್ನು ಹೋಗಲಾಡಿಸುತ್ತದೆ. ಶಾಂತ್ಯಾ ಋತಸ್ಯ ಪಥಾ ಪ್ರೇತ | (ಕೃಷ್ಣಯಜುಸ್ಸಂಹಿತೆ ೬ | ೬.೧.೩) ಶಾಂತಿಯಿಂದ (ಮನೋನಿಗ್ರಹದಿಂದ, ಮನಃಪ್ರಶಮನದಿಂದ, ಶಮದಿಂದ) ಋತದ ದಾರಿಯಲ್ಲಿ ತೆರಳಿರಿ. ಋತೇ ಸಮುದ್ರ ಅಹಿತಃ | ಋತೇ ಭೂರಿಯಂ ಶ್ರಿತಾ | (ತೈತ್ತಿರೀಯಬ್ರಾಹ್ಮಣ ೧.೫.೫) ಋತದಲ್ಲಿ ಸಮುದ್ರ ನೆಲೆಸಿದೆ / ನಿಹಿತವಾಗಿದೆ / ಇಡಲ್ಪಟ್ಟಿದೆ. ಋತದಲ್ಲಿ ಭೂಮಿಯಿದು ಆಶ್ರಿತವಾಗಿದೆ. ಋತಂ ಪ್ರಪದ್ಯೇ | (ತೈತ್ತಿರೀಯಬ್ರಾಹ್ಮಣ ೩.೫.೧) ಋತಕ್ಕೆ (ವಿಶ್ವನಿಯಮಕ್ಕೆ, ಕಾಲಗತಿಗೆ, ಪ್ರಕೃತಿರಹಸ್ಯಕ್ಕೆ, ಸೃಷ್ಟಿನಿಯತಿಗೆ) ಶರಣಾಗುವೆ.

ಪರಾಶರಸ್ಮೃತಿ ೨

  🌸🌸 *ಪರಾಶರಸ್ಮೃತಿ:* 🌸🌸 *೨ನೇ ಅಧ್ಯಾಯ* *ಗೃಹಸ್ಥಧರ್ಮವಿಚಾರ* *ಅತ: ಪರಂ ಗೃಹಸ್ಥಸ್ಯ ಕರ್ಮಾಚಾರಂ ಕಲೌ ಯುಗೇ|* *ಧರ್ಮಂ ಸಾಧಾರಣಂ ಶಕ್ತ್ಯಾ ಚಾತುರ್ವರ್ಣ್ಯಾಶ್ರಮಾಗತಮ್||೧||* *ತಂ ಪ್ರವಕ್ಷ್ಯಾಮ್ಯಹಂ ಪೂರ್ವಂ ಪರಾಶರವಚೋ ಯಥಾ|* *ಷಟ್ಕರ್ಮಸಹಿತೋ ವಿಪ್ರ: ಕೃಷಿಕರ್ಮ ಚ ಕಾರಯೇತ್||೨||* ಇನ್ನು ಮುಂದೆ ಕಲಿಯುಗದಲ್ಲಿ ನಾಲ್ಕೂವರ್ಣದವರ ಧರ್ಮಕರ್ಮಾಚಾರಗಳನ್ನು , ಹಿಂದೆ ಪರಾಶರರೆಂದಂತೆ ಯಥಾಶಕ್ತಿ ಹೇಳುವೆನು. ವಿಪ್ರನು ಹಿಂದೆ ಹೇಳಿದ ಷಟ್ಕರ್ಮಗಳೊಂದಿಗೆ, ಕೃಷಿಕರ್ಮವನ್ನೂ ಮಾಡಿಸಬೇಕು. *ಕ್ಷುಧಿತಂ ತೃಷಿತಂ ಶ್ರಾನ್ತಂ ಬಲೀವರ್ದಂ ನ ಯೋಜಯೇತ್|* *ಹೀನಾಙ್ಗಂ ವ್ಯಾಧಿತಂ ಕ್ಲೀಬಂ ವೃಷಂ ವಿಪ್ರೋ ನ ವಾಹಯೇತ್||೩||* ಹಸಿಯುತ್ತಿರುವ(ಆಹಾರ ತಿನ್ನಿಸದ), ಬಾಯಾರಿರುವ, ಆಯಾಸಗೊಂಡಿರುವ ಎತ್ತನ್ನು(ಬಲೀವರ್ದ ~ ಎತ್ತು) ಹಾಗೂ ಅಂಗ ಊನವಿರುವ, ವ್ಯಾಧಿಗ್ರಸ್ತವಾದ, ಪುರುಷತ್ವವಿಲ್ಲದ ವೃಷಭ(ಎತ್ತು)ವನ್ನು ವಿಪ್ರನು ಬೇಸಾಯಕ್ಕೆ ಹೂಡಬಾರದು. *ಸ್ಥಿರಾಙ್ಗಂ ವೃಷಭಂ ತೃಪ್ತಂ ಸುನರ್ದಂ ಷಣ್ಡವರ್ಜಿತಮ್|* *ವಾಹಯೇದ್ದಿವಸಸ್ಯಾರ್ಧಂ ಪಶ್ಚಾತ್ ಸ್ನಾನಂ ಸಮಾಚರೇತ್||೪||* ದೃಢಕಾಯವುಳ್ಳ, ಹಸಿವು-ಬಾಯಾರಿಕೆಗಳನ್ನು ತೀರಿಸಿಕೊಂಡು ತೃಪ್ತವಾದ, ಒಳ್ಳೆಯ ಗಟ್ಟಿಸ್ವರದಲ್ಲಿ ಧ್ವನಿ ಮಾಡುವ, ಪುರುಷತ್ವವಿರುವ ಎತ್ತನ್ನು ಮಧ್ಯಾಹ್ನದವರೆಗೆ ಹೂಡಿ, ನಂತರ ಚೆನ್ನಾಗಿ ಸ್ನಾನಮಾಡಿಸಬೇಕು. *ಜಪ್ಯಂ ದೇವಾರ್ಚನಂ ಹೋಮಂ ಸ್ವಾಧ್ಯಾಯಂ ಚೈವಮಭ್ಯಸೇತ್|* *ಏಕದ್ವಿತ್ರಿಚತ...