ಪರಾಶರಸ್ಮೃತಿ:- ಕಲಿಯುಗಕ್ಕೆ ಅನ್ವಯಿಸುವಂಥದ್ದು ಎಂದು ಹೇಳಲಾಗಿದೆ ಇದನ್ನು. ಪ್ರಥಮೋsಧ್ಯಾಯ: ಶ್ರೀಗಣೇಶಾಯ ನಮ: ತತ್ರಾದೌ ಧರ್ಮೋಪದೇಶಂ ತಲ್ಲಕ್ಷಣಞ್ಚಾಹ (ತತ್ರ ಆದೌ)ಇಲ್ಲಿ ಮೊದಲಿಗೆ,(ಧರ್ಮೋಪದೇಶಂ ಚ)ಧರ್ಮದ ಬಗೆಗಿನ ಉಪದೇಶವನ್ನು ಮತ್ತು (ತಲ್ಲಕ್ಷಣಂ- ತತ್+ಲಕ್ಷಣಮ್,ಶ್ಚುತ್ವ ಸನ್ಧಿ,ತಸ್ಯ ಲಕ್ಷಣಮ್,ಷಷ್ಠೀ ತತ್ಪುರುಷ ಸಮಾಸ) ಅದರ ಲಕ್ಷಣವನ್ನು (ಆಹ) ಹೇಳಿದನು. ಅಥಾತೋ ಹಿಮಶೈಲಾಗ್ರೇ ದೇವದಾರು ವನಾಲಯೇ | ವ್ಯಾಸಮೇಕಾಗ್ರಮಾಸೀನ- ಮಪೃಚ್ಛನ್ನೃಷಯ: ಪುರಾ ||೧|| (ಅಥಾತ:- ಅಥ ಅತ:)ಹೀಗಿರುವಾಗ (ಪುರಾ)ಹಿಂದೊಮ್ಮೆ, (ಹಿಮಶೈಲಾಗ್ರೇ)ಹಿಮವತ್ಪರ್ವತದ ತುದಿಯಲ್ಲಿ,(ದೇವದಾರು ವನಾಲಯೇ)ದೇವದಾರುವೃಕ್ಷಭರಿತವಾದ ಅರಣ್ಯದಲ್ಲಿನ ಆಶ್ರಮದಲ್ಲಿ,(ಏಕಾಗ್ರಂ ಆಸೀನಂ ವ್ಯಾಸಂ)ಏಕಾಗ್ರಚಿತ್ತರಾಗಿದ್ದ ವೇದವ್ಯಾಸರನ್ನು,(ಋಷಯ: ಅಪೃಚ್ಛನ್)ಋಷಿಗಳು ಪ್ರಶ್ನಿಸಿದರು.||೧|| ಮಾನುಷಾಣಾಂ ಹಿತಂ ಧರ್ಮಂ ವರ್ತಮಾನೇ ಕಲೌ ಯುಗೇ | ಶೌಚಾಚಾರಂ ಯಥಾವಚ್ಚ ವದ ಸತ್ಯವತೀಸುತ ||೨|| (ಸತ್ಯವತೀಸುತ)ಹೇ ಸತ್ಯವತೀಸುತನಾದ ವ್ಯಾಸಮುನಿಯೇ! ,(ವರ್ತಮಾನೇ ಕಲೌ ಯುಗೇ)ಈಗ ನಡೆಯುತ್ತಿರುವ ಕಲಿಯುಗದಲ್ಲಿ,(ಮಾನುಷಾಣಾಂ ಹಿತಂ ಧರ್ಮಂ)ಮಾನವರಿಗೆ ಹಿತವಾದ ಧರ್ಮವನ್ನು, (ಚ ಶೌಚಾಚಾರಂ ಯಥಾವತ್ ವದ)ಹಾಗೂ ಶೌಚಾಶೌಚಾದಿ ಆಚರಣೆಗಳ ಬಗ್ಗೆ ಇದ್ದುದನ್ನು ಇದ್ದಂತೆ ಹೇಳು. ತಚ್ಛ್ರುತ್ವಾರ್ಷಿವಾಕ್ಯಂ ತು ಸಶಿಷ್ಯೋsಗ್ನ್ಯರ್ಕಸನ್ನಿಭ: | ಪ್ರತ್ಯುವಾಚ ಮಹಾತೇಜಾ: ಶ್ರುತಿಸ್ಮೃತಿವಿಶಾ...